ನವ ವಧು-ವರರಿಗೆ ಸೀಮೆ ಹಸು ಗಿಫ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Marriage-01

ಬಾಗೇಪಲ್ಲಿ,ಡಿ.1-ಸತತ 17 ವರ್ಷಗಳಿಂದ ನೂತನ ಜೋಡಿಗಳ ಕುಟುಂಬ ಪೋಷಣೆಗೆ ಸೀಮೆ ಹಸುಗಳನ್ನು ದಾನ ಮಾಡುತ್ತಿರುವ ಏಕೈಕ ವ್ಯಕ್ತಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಎಂದು ಜಿಲ್ಲಾ ಪಂಚಾಯತಿ ಸದಸ್ಯ ಬೂರಗಮಡುಗು ನರಸಿಂಹಪ್ಪ ಶ್ಲಾಘಿಸಿದರು. ಪಟ್ಟಣದ ಶಾಸಕರ ಗೃಹ ಕಚೇರಿಯಲ್ಲಿ ಎಸ್.ಎನ್.ಸುಬ್ಬಾರೆಡ್ಡಿ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 17ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಪ್ರಯುಕ್ತ ವಧು-ವರರಿಗೆ ಮದುವೆ ಉಡುಪು ಮತ್ತು ಸಾಮಾಗ್ರಿಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇದುವರೆಗೂ 1723 ಜೋಡಿಗಳಿಗೆ ಮದುವೆಗೆ ಬೇಕಾಗಿರುವ ಬಟ್ಟೆ, ಬಾಸಿಂಗ, ಚಿನ್ನದ ಮಾಂಗಲ್ಯ ಹಾಗೂ ಊಟದ ವ್ಯವಸ್ಥೆ ಕಲ್ಪಿಸಿ ಸಾಮೂಹಿಕ ಮದುವೆಗಳನ್ನು ಮಾಡಿದ್ದಾರೆ. ನೂತನ ವಧು, ವರರು ಬಾಗೇಪಲ್ಲಿ ಮತ್ತು ಗುಡಿಬಂಡೆ ತಾಲೂಕಿನ ದಂಪತಿಗಳ ಬದುಕು ನಿರ್ವಹಣೆಗಾಗಿ 30 ಸಾವಿರ ರೂಗಳ ಸೀಮೆ ಹಸುವನ್ನು ದಾನವಾಗಿ ನೀಡಿದ್ದಾರೆ. ಇದುವರೆಗೂ 684 ಸೀಮೆ ಹಸುಗಳನ್ನು ಶಾಸಕರು ದಾನ ಮಾಡಿದ್ದಾರೆ ಪ್ರಶಂಸಿಸಿದರು.

ತಾಲೂಕು ಪಂಚಾಯತಿ ಸದಸ್ಯ ಕೆ.ಆರ್.ನರೇಂದ್ರಬಾಬು ಮಾತನಾಡಿ, ಶಾಸಕ ಸುಬ್ಬಾರೆಡ್ಡಿ ಅವರು ಬಾಗೇಪಲ್ಲಿ ಕೇಂದ್ರ ಸ್ಥಾನದಲ್ಲಿ ಪ್ರತಿ ಬುಧವಾರ ಜನತಾ ದರ್ಶನ ನಡೆಸಿ ಸಮಾಜ ಸೇವೆಯ ಜೊತೆಗೆ ಸರ್ಕಾರಿ ಯೋಜನೆಗಳ ಸೌಲಭ್ಯಗಳನ್ನು ಜನತೆಗೆ ತಲುಪಿಸಿದ್ದಾರೆ ಎಂದರು ತಿಳಿಸಿದರು.  ಶೀಲಾ ಎಸ್.ಎನ್.ಸುಬ್ಬಾರೆಡ್ಡಿ ಹಾಗೂ ಕುಟುಂಬ ಸದಸ್ಯರು, ಜಿಲ್ಲಾ ಪಂಚಾಯತಿ ಸದಸ್ಯೆ ಅರುಣಾ ಅಮರನಾಥರೆಡ್ಡಿ, ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಕುಟುಂಬ ಸದಸ್ಯರಾದ ಸೂರ್ಯ ನಾರಾಯಣರೆಡ್ಡಿ, ಸರಸ್ವತಮ್ಮ ರಾಮಕೃಷ್ಣರೆಡ್ಡಿ, ಭಾಗ್ಯಮ್ಮ, ಶಿವರಾಮಿರೆಡ್ಡಿ, ಆರ್.ಹನುಮಂತರೆಡ್ಡಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin