ನಾಗನ ಮೂವರ ಸಹಚರರ ಬಂಧನ, ಜಾಮೀನು ಅರ್ಜಿ ವಜಾ

ಈ ಸುದ್ದಿಯನ್ನು ಶೇರ್ ಮಾಡಿ

Bomb-Naga--01

ಬೆಂಗಳೂರು, ಮೇ 5- ಪಾಲಿಕೆ ಮಾಜಿ ಸದಸ್ಯ ವಿ.ನಾಗರಾಜನ ಮೂವರು ಸಹಚರರನ್ನು ಬಂಧಿಸಿರುವ ಪೂರ್ವ ವಿಭಾಗದ ಪೊಲೀಸರು ಉಳಿದವರಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಬೆಂಗಳೂರು ನಗರ, ಹೊರವಲಯ, ಚೆನ್ನೈನಲ್ಲಿ ನಾಗರಾಜ ಹಾಗೂ ಆತನ ಸಹಚರರಿಗಾಗಿ ಪೊಲೀಸರು ಶೋಧ ತೀವ್ರಗೊಳಿಸಿದ್ದಾರೆ. ವಿಲ್ಸನ್‍ಗಾರ್ಡ್ ನಿವಾಸಿ ಶರವಣ, ತಲಘಟ್ಟಪುರದ ಶ್ರೀನಿವಾಸ್, ಬೌನ್ಸರ್ ಕೆಲಸ ಮಾಡುತ್ತಿದ್ದ ಜಯ್ ಅವರನ್ನು ಬಂಧಿಸಿರುವ ಪೊಲೀಸರು ನಿಗೂಢ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.  ಇವರಿಂದ ನಾಗರಾಜನ ಜತೆ ಸೇರಿಕೊಂಡು ನಡೆಸಿದ ಅಕ್ರಮಗಳು ಹಾಗೂ ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆಗೆ ಸಂಬಂಧಿಸಿದ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ದಾಳಿ ನಡೆದು ತಿಂಗಳು ಕಳೆದರೂ ತಲೆ ಮರೆಸಿಕೊಂಡಿರುವ ನಾಗರಾಜ ಹಾಗೂ ಆತನ ಇಬ್ಬರು ಮಕ್ಕಳ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.ಜಾಮೀನು ಆರ್ಜಿ ವಜಾ : ಬ್ಲಾಕ್ ಅಂಡ್ ವೈಟ್ ದಂಧೆಯಲ್ಲಿ ಭಾಗಿಯಾಗಿ ಪೊಲೀಸರಿಂದ ತಲೆತ್ಪಪಿಸಿಕೊಂಡಿರುವ ರೌಡಿಶೀಟರ್ ನಾಗನ ನಿರೀಕ್ಷಣಾ ಜಾಮೀನು ಆರ್ಜಿ ವಜಾಗೊಂಡಿದೆ. ಉದ್ಯಮಿಗಳನ್ನು ಅಪಹರಿಸಿ ಕೋಟ್ಯಾಂತರ ರೂಪಾಯಿ ಸುಲಿಗೆ ಆರೋಪ ಎದುರಿಸುತ್ತಿರುವ ರೌಡಿ ನಾಗ ಪೊಲೀಸರು ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಸಶೆನ್ಸ್ ಕೋರ್ಟ್ನಲ್ಲಿ ನಾಗ ಆರೋಪಿಸಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ. ಆದರೆ, ಮನೆಯಲ್ಲಿ ಸಿಕ್ಕ 15 ಕೋಟಿ ಹಳೆ ನೋಟುಗಳ ಮೂಲ ಮಾತ್ರ ಇನ್ನೂ ನಿಗೂಢವಾಗಿರುವುದರಿಂದ ನಾಗ ವಿಚಾರಣೆ ಅಗತ್ಯವಿದೆ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡದಂತೆ ಸರ್ಕಾರಿ ಪರ ವಕೀಲರ ವಾದ ಪರಿಗಣಿಸಿದ ಕೋರ್ಟ್ ಅರ್ಜಿ ವಜಾಗೊಳಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin