ನಾಗರಹಾವಿನ ಸಹಾಯ ಹಸ್ತ

ಈ ಸುದ್ದಿಯನ್ನು ಶೇರ್ ಮಾಡಿ

Nagara-ha

ಸಾಹಸ ಸಿಂಹ ಡಾ. ವಿಷ್ಣುವರ್ಧನ್ ಅವರನ್ನು  ಅನಿಮೇಷನ್   ತಂತ್ರಜ್ಞಾನದ ಮೂಲಕ ಮರುಸೃಷ್ಟಿ ಮಾಡಿದಂಥ ಚಿತ್ರ ನಾಗರಹಾವು ಇತ್ತೀಚಿನ ದಿನಗಳಲ್ಲಿ ಬಹುದೊಡ್ಡ ಸುದ್ದಿಯಾಗಿ ಪ್ರಸಾರವಾಗುತ್ತಿದೆ. ಈ  ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭವನ್ನು ಅದ್ದೂರಿಯಾಗಿ ನಡೆಸದೆ ಸರಳವಾಗಿ ಆಚರಿಸಿ ಅದಕ್ಕಾಗಿ ಮೀಸಲಿರಿಸಿದ ಹಣವನ್ನು ಸುಮಾರು 25 ಜನರಿಗೆ ತೀರ ಅವಶ್ಯವಿರುವ  ಬಡರೋಗಿಗಳಿಗೆ ತಲಾ ಒಂದು ಲಕ್ಷ ರೂ.ಗಳ ಸಹಾಯಧನವನ್ನು ನೀಡಲು ಚಿತ್ರತಂಡ ಕಳೆದ ತಿಂಗಳು ನಿರ್ಧಾರ ಕೈಗೊಂಡಿತ್ತು. ಅದಕ್ಕಾಗಿ ಒಂದು ಸಮಿತಿಯನ್ನು ಕೂಡ ರಚನೆ ಮಾಡಿತ್ತು. ಅದರಂತೆ ಇದೇ ಆಗಸ್ಟï 14 ರಂದು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳ ಸಮ್ಮುಖದಲ್ಲಿ ಹಣ ವನ್ನು ವಿತರಿಸುವ ಕಾರ್ಯಕ್ರಮವನ್ನು ನಾಗರಹಾವು ಚಿತ್ರತಂಡ ಹಮ್ಮಿಕೊಂಡಿದೆ. ಆ ಪ್ರಕಾರ ಮೊದಲ ಹಂತವಾಗಿ 180 ಜನರನ್ನು ಗುರುತಿಸಲಾಗಿದ್ದು, ಆ ಪೈಕಿ 10 ಜನ ರೋಗಿಗಳನ್ನು ಗುರುತಿಸಿ ಅವರನ್ನು ಮಾಧ್ಯಮಕ್ಕೆ ಪರಿಚಯಿಸಿದರು.

ಆ ಪ್ರತಿಯೊಬ್ಬ ರೋಗಿಗಳ ಸಂಕಟವನ್ನು ಪರದೆಯ ಮೇಲೆ ನೋಡುವಾಗ ಎಂಥವರಿಗಾದರೂ ಗೊತ್ತಿಲ್ಲದಂತೆ ಕಣ್ಣುಗಳು ಒದ್ದೆಯಾಗುವಂತಿದೆ.    ಹೆಚ್.ಐ.ವಿ. ಸೋಂಕು, ಬ್ಲಡ್ ಕ್ಯಾನ್ಸರ್, ಅಂಗವಿಕಲತೆ ಇನ್ನೂ ಅನೇಕ  ಮಾರಣಾಂತಿಕ  ಖಾಯಿಲೆಗಳಿಂದ ಬಳಲುತ್ತಿರುವ ನೊಂದ ರೋಗಿಗಳಿಗೆ ಸಿಂಹಹಸ್ತ ಹೆಸರಿನೊಂದಿಗೆ ಅವರ ಬಾಳನ್ನು ಸಾಧ್ಯವಾದಷ್ಟು ಹಸನಾಗಿಸುವ ಕೆಲಸವನ್ನು  ಮಾಡುವ ಕೆಲಸಕ್ಕೆ  ಮುಂದಾಗಿದ್ದಾರೆ ಚಿತ್ರದ ನಿರ್ಮಾಪಕರಾದ ಸಾಜಿದ್ ಖುರೇಶಿ.   ಸಿಂಹದ ಧ್ವನಿ ಎಲ್ಲಾ ಕಡೆ ಪಸರಿಸಬೇಕು. ಅದಕ್ಕೆಂದೇ  ಇಂತಹ ದೊಡ್ಡ ಕಾರ್ಯಕ್ಕೆ ಮುಂದಾಗಿದ್ದು. ಈಗ 10 ಹತ್ತು ಜನರನ್ನು ಆಯ್ಕೆ ಮಾಡಲಾಗಿದೆ.   ಬರುವ 14ರ ಒಳಗಾಗಿ ಉಳಿದ 15 ಜನರನ್ನು ಆಯ್ಕೆಮಾಡಿ ಅಂದು ಎಲ್ಲರಿಗೂ ಒಂದು ಲಕ್ಷ ರೂ.ಗಳನ್ನು ನೀಡಲಾಗುವುದು. ಇಂತಹ ಕೆಲಸವನ್ನು ಪ್ರಚಾರ ಮಾಡುವುದು ಬೇಡವೆಂದೇ ಭಾವಿಸಿದ್ದಾರೆ.

ಈ ವಿಷಯವನ್ನು ನಮ್ಮ ಅಮ್ಮನಿಗೆ ತಿಳಿಸಿದಾಗ ಅವರು ಇಂಥ ವಿಷಯ ಎಲ್ಲರಿಗೂ ತಿಳಿದರೆ ಮುಂದೆ ಕೆಲವರಾದರೂ ಸಹಾಯ ಮಾಡಲು ಮುಂದೆ ಬರುತ್ತಾರೆ.   ಇದನ್ನು ಅವಮಾನ ಎಂದುಕೊಳ್ಳಬೇಡ. ನಿನ್ನ ಈ ಕಾರ್ಯಕ್ಕೆ ದೇವರ ಆಶೀರ್ವಾದವಿದೆ ಎಂದು ಶುಭ ಹಾರೈಸಿದ್ದಾರೆ.  ಈ ಕಾರ್ಯದ  ಹಿಂದೆ ನಾಗರಹಾವು ಚಿತ್ರತಂಡದ ಅಪಾರ ಪರಿಶ್ರಮ ಇದೆ. ಇದೆಲ್ಲವನ್ನು  ಮಾಡುತ್ತಿರುವುದು ಒನ್ ಅಂಡ್ ಓನ್ಲಿ ವಿಷ್ಣು ಸರ್ ಎಂದು ಮೊನ್ನೆ  ನಡೆದ ಪತ್ರಿಕಾಗೋಷ್ಠಿಯಲ್ಲಿ  ನಿರ್ಮಾಪಕ  ಸಾಜಿದ್ ಖುರೇಶಿ ಅವರು ಪತ್ರಕರ್ತರ ಮುಂದೆ ಹೇಳಿಕೊಂಡರು.  ಇದೇ  ಸಂದರ್ಭದಲ್ಲಿ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್  ಅವರು ಕಳುಹಿಸಿದ 50 ಸಾವಿರ ರೂ.ಗಳು,  ವಿಷ್ಣು ಸೇನೆಯ 2 ಶಾಖೆಗಳಿಂದ ತಲಾ 10 ಸಾವಿರ ರೂ.ಗಳ ಚೆಕ್ಕನ್ನು ಸಿಂಹ ಹಸ್ತ ತಂಡಕ್ಕೆ ಹಸ್ತಾಂತರಿಸಲಾಯಿತು.   ಇದೇ ಸಂದರ್ಭದಲ್ಲಿ   ರಾಜ್ಯದ ಬೇರೆ ಬೇರೆ ಕಡೆಗಳಿಂದ ಬಂದಿದ್ದ ರೋಗಿಗಳು ತಮ್ಮ ಸಮಸ್ಯೆಗಳನ್ನು  ಮಾಧ್ಯಮದ ಮುಂದೆ ಹೇಳಿಕೊಂಡರು.

Facebook Comments

Sri Raghav

Admin