ನಾಗರಹೊಳೆ ಉದ್ಯಾನದಲ್ಲಿ ಕೊಳೆತ ಸ್ಥಿತಿಯಲ್ಲಿ ಹುಲಿ-ಆನೆ ಮೃತ ದೇಹ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

nagara-hole
ಹುಣಸೂರು, ಫೆ.1- ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ಕಳೆದ ಮೂರು ದಿನಗಳ ಹಿಂದೆ ಮೃತಪಟ್ಟಿರುವ ಆನೆಯ ಶವ ಸಿಕ್ಕಿದೆ. ನಾಗರಹೊಳೆ ವಲಯದ ಬಾಳೆಕೋವು ಅರಣ್ಯ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಸುಮಾರು 6 ವರ್ಷದ ಹುಲಿಯ ಶವ ಪತ್ತೆಯಾಗಿದೆ. ವಾರದ ಹಿಂದೆ ಕಾದಾಟದಲ್ಲಿ ಸತ್ತಿರಬಹುದೆಂದು ಶಂಕಿಸಲಾಗಿದೆ. ಹುಲಿಗೆ ಕಾದಾಟದಲ್ಲಿ ನಾಲ್ಕಾರು ಕಡೆ ಪೆಟ್ಟು ಬಿದ್ದಿದೆ. ಕೊಳೆತ ಸ್ಥಿತಿಯಲ್ಲಿದ್ದುದರಿಂದ ಹೆಣ್ಣೊ ಅಥವಾ ಗಂಡೋ ಎಂಬುದು ತಿಳಿದು ಬಂದಿಲ್ಲ.

ಆದರೆ, ಸ್ಥಳದಲ್ಲಿ ಕಾದಾಟದ ಕುರುಹು ಇದೆ. ಸ್ಥಳಕ್ಕೆ ಸಿಎಫ್ ಮಣಿಕಂಠನ್ ಹಾಗೂ ಸ್ವಯಂಸೇವಾ ಸಂಸ್ಥೆಯ ರಾಜಕುಮಾರ್, ನಾಗರಾಜಭಟ್, ವೈಲ್ಡ್ ಲೈಫ್ ವಾರ್ಡನ್ ಮಾದಪ್ಪ ಮತ್ತು ನಾಣಚ್ಚಿ ಹಾಡಿಯ ಐಯಪ್ಪರ ಸಮ್ಮುಖದಲ್ಲಿ ವೈದ್ಯ ಡಾ. ಮುಜೀಬ್ ರೆಹಮಾನ್ ಮರಣೋತ್ತರ ಪರೀಕ್ಷೆ ನಡೆಸಿದರು. ಎಸಿಎಫ್ ಪೌಲ್ ಆಂತೋಣಿ, ಆರ್‍ಎಫ್‍ಒ ಅರವಿಂದ್ ಹಾಜರಿದ್ದರು.

ಸಲಗ ಸಾವು: ನಾಗರಹೊಳೆ ಉದ್ಯಾನವನದ ಕಲ್ಲಹಳ್ಳ ವಲಯದ ಪೈಸಾರಿ ಬೀಟ್‍ನ ನವಿಲುಗದ್ದೆ ನೀರುತೋಡು ಬಳಿ ಕಾದಾಟದಲ್ಲಿ ಗಾಯಗೊಂಡು ಸುಮಾರು 40 ವರ್ಷದ ಸಲಗ ಮೂರು ದಿನಗಳ ಹಿಂದೆ ಮೃತಪಟ್ಟಿದೆ. ಅರಣ್ಯ ಸಿಬ್ಬಂದಿ ಗಸ್ತಿನ ವೇಳೆ ಅನೆ ಶವ ಪತ್ತೆಯಾಗಿದ್ದು, ಕಾದಾಟದ ಕುರುಹು ಸ್ಥಳದಲ್ಲಿ ಕಂಡು ಬಂದಿದ್ದು, ಕಾಡು ಪ್ರಾಣಿಗಳ ಆನೆಯ ಮಾಂಸ ತಿಂದಿವೆ ಎಂದು ಸಿಎಫ್ ಮಣಿಕಂಠನ್ ತಿಳಿಸಿದ್ದಾರೆ. ಸ್ಥಳಕ್ಕೆ ಎಸಿಎಫ್ ಪೌಲ್ ಆಂತೋಣಿ, ಆರ್‍ಎಫ್‍ಒ ಶಿವರಾಂ ಭೇಟಿ ನೀಡಿದ್ದರು. ಪಶುವೈದ್ಯ ಡಾ.ಮುಜೀಬ್ ರೆಹಮಾನ್ ಶವ ಪರೀಕ್ಷೆ ನಡೆಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin