ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿ ಗಣತಿ ಕಾರ್ಯ ಯಶಸ್ವಿ

ಈ ಸುದ್ದಿಯನ್ನು ಶೇರ್ ಮಾಡಿ

Tiger--02
ಹುಣಸೂರು, ಜ.12- ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ರಾಷ್ಟ್ರೀಯ ಹುಲಿ ಗಣತಿ ಕಾರ್ಯದಲ್ಲಿ ಟ್ರ್ಯಾನ್ಸಾಕ್ಟ್ ಲೈನ್ ಸೆನ್ಸಸ್ ಪ್ರಾರಂಭವಾಗಿದ್ದು, ಮುಂದಿನ ಎರಡು ದಿನಗಳ ಕಾಲ ಅಭಯಾರಣ್ಯದಲ್ಲಿ ಸಸ್ಯಹಾರಿ ಪ್ರಾಣಿಗಳು ಹಾಗೂ ವನ ಸಂಪತ್ತಿನ ಗಣತಿ ಕಾರ್ಯವನ್ನು ಅರಣ್ಯ ಸಿಬ್ಬಂದಿಗಳು ಮತ್ತು ಸ್ವಯಂ ಸೇವಕರು ನಡೆಸಲಿದ್ದಾರೆ.   ಕಳೆದ ಮೂರು ದಿನಗಳಿಂದ ಅಭಯಾರಣ್ಯದಲ್ಲಿ ಮಾಂಸಹಾರಿ ಪ್ರಾಣಿಗಳ ಗಣತಿಕಾರ್ಯ ಯಶಸ್ವಿಯಾಗಿ ನಡೆಯಿತು. ಮೂರನೆ ದಿನದಿಂದ ಹುಣಸೂರು ವಲಯದಲ್ಲಿ ಎರಡು, ಡಿ.ಬಿ.ಕುಪ್ಪೆಯಲ್ಲಿ ಹಾಗೂ ಅಂತರಸಂತೆ ವಲಯದಲ್ಲೂ ತಲಾ ಒಂದು ಹುಲಿಗಳು ಗಣತಿಕಾರರ ಮುಂದೆ ಪ್ರತ್ಯಕ್ಷವಾಗಿದ್ದರೆ, ಅಂತರ ಸಂತೆ ವಲಯದಲ್ಲಿ ತಾಯಿ ಹಾಗೂ ಮೂರು ಹುಲಿ ಮರಿಗಳು ಹಾಗೂ ಡಿ.ಬಿ.ಕುಪ್ಪೆಯಲ್ಲಿ 3 ಚಿರತೆ ಕಾಣಸಿಕ್ಕಿವೆ.

ಮೂರು ದಿನಗಳ ಕಾಲ ಅರಣ್ಯವ್ಯಾಪ್ತಿಯಲ್ಲಿ 30 ಸ್ವಯಂಸೇವಕರು, 24 ಪೊನ್ನಂಪೇಟೆ ಫಾರೆಸ್ಟ್ರಿ ಕಾಲೇಜಿನ ವಿದ್ಯಾರ್ಥಿಗಳು ಹಾಗು ಅರಣ್ಯ ಸಿಬ್ಬಂದಿಗಳು ಇದೇಮೊದಲ ಬಾರಿಗೆ ಇಲಾಖೆ ಅಭಿವೃದ್ಧಿಪಡಿಸಿರುವ ಇಕೋಲಾಜಿಕಲ್ ಆಫ್ ಮೂಲಕ ಹುಲಿ ಗಣತಿಯನ್ನು ಅತ್ಯಂತ ನಿಖರತೆಯಿಂದ ಹಾಗೂ ಯಶಸ್ವಿಯಾಗಿ ಮುಗಿಸಿದ್ದಾರೆ.

Facebook Comments

Sri Raghav

Admin