ನಾಗರಿಕ ಪ್ರಜ್ಞಾ ಕಾರ್ಯಕ್ರಮ

ಈ ಸುದ್ದಿಯನ್ನು ಶೇರ್ ಮಾಡಿ

huliyaru-2

ಹುಳಿಯಾರು, ಆ.17- ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಗಾಣದಾಳು ವಲಯದ ಬೆಳ್ಳಾರ ಗ್ರಾಮದಲ್ಲಿ 70ನೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ವಿನಾಯಕ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಾಗರಿಕ ಪ್ರಜ್ಞಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಊರಿನ ಮುಖ್ಯ ರಸ್ತೆಗಳಲ್ಲಿ ವಾಹನಕ್ಕೆ ಧ್ವನಿವರ್ಧಕ ಅಳವಡಿಸಿ ಪರಿಸರದ ಗೀತೆಗಳು, ಸ್ವಚ್ಛತಾ ಮಾಹಿತಿಯ ಘೋಷಣೆಗಳನ್ನು ಪ್ರಚಾರ ಮಾಡುತ್ತ ಆಂದೋಲನ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮದ್ಯಮುಕ್ತ ನವಜೀವನ ಸಮಿತಿಯ ಸದಸ್ಯರು ಭಜನಾ ಸಮಿತಿ ರಚಿಸಿ, ವಾರಕ್ಕೊಮ್ಮೆ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ನಡೆಸುವ ಬಗ್ಗೆ ತೀರ್ಮಾನಿಸಿ ಚಾಲನೆ ನೀಡಿದರು. ಇದೇ ವೇಳೆ ಆಕಸ್ಮಿಕ ಬೆಂಕಿ ಅನಾಹುತದಿಂದ ನಷ್ಟ ಹೊಂದಿದ ಎರಡು ಕುಟುಂಬಗಳಿಗೆ ತಲಾ 5000ರೂ.ನಂತೆ ಹಾಗೂ ಇಬ್ಬರಿಗೆ ಸಹಾಯ ಧನವಾಗಿ 10,000ರೂ. ಅನುದಾನ ವಿತರಣೆ ಮಾಡಲಾಯಿತು.ತಾಪಂ ಸದಸ್ಯ ಮಧು, ಒಕ್ಕೂಟದ ಅಧ್ಯಕ್ಷರು ಶಕುಂತಲಾ, ಊರಿನ ಮುಖ್ಯ ಗಣ್ಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಗಾಣದಾಳು ವಲಯದ ಮೇಲ್ವಿಚಾರಕ ಸುರೇಶ್ ಮತ್ತು ಯೋಜನೆಯ ಹೈನುಗಾರಿಕೆ ಮೇಲ್ವಿಚಾರಕ ಗೋಪಿ ಹಾಜರಿದ್ದರು.

 

► Follow us on –  Facebook / Twitter  / Google+

Facebook Comments

Sri Raghav

Admin