ನಾಗವಾರ ಗ್ರಾಮ ಕಲಾವಿದರ ತವರೂರು : ಯೋಗೀಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

channapattana

ಚನ್ನಪಟ್ಟಣ, ಏ.13- ತಾಲ್ಲೂಕಿನಲ್ಲಿ ವಿವಿಧ ಕ್ಷೇತ್ರದ ಕಲಾವಿದರ ದಂಡೇ ಇದ್ದು , ಅದರಲ್ಲೂ ನಾಗವಾರ ಗ್ರಾಮವು ಕಲಾವಿದರ ತವರೂರು ಎಂದು ಶಾಸಕ ಸಿ.ಪಿ.ಯೋಗೀಶ್ವರ್ ತಿಳಿಸಿದರು.ನಾಗವಾರ ಗ್ರಾಮದಲ್ಲಿ ಶ್ರೀ ಲಕ್ಷ್ಮಿನರಸಿಂಹಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ತವರಿನ ತಮ್ಮ ಎಂಬ ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿಗೆ ನಾಗವಾರ ಗ್ರಾಮ ಅಭಿವೃದ್ಧಿ ಕಾಣುತ್ತಿದ್ದು, ಇನ್ನಷ್ಟು ಅಭಿವೃದ್ದಿ ಹೊಂದಬೇಕಿದೆ. ಜಿಪಂ, ತಾಪಂ, ಗ್ರಾಪಂ ಎಲ್ಲವನ್ನು ನಮ್ಮ ಜನಪ್ರತಿನಿಧಿಗಳನ್ನು ಗೆಲ್ಲಿಸಿಕೊಟ್ಟಿರುವುದರಿಂದ ಇನ್ನಷ್ಟು ಅಭಿವೃದ್ದಿಯನ್ನು ಮಾಡುವ ಉತ್ಸುಕತೆ ಇದೆ.

ನಾಗವಾರ , ಚಿಕ್ಕೇನಹಳ್ಳಿ ರಸ್ತೆ ಶಿಥಿಲಗೊಂಡಿದ್ದು ಈಗಾಗಲೇ ಪಿಡ್ಲ್ಯೂಡಿ ಅಧಿಕಾರಿಗಳು ಮತ್ತು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದ್ದೇನೆ. ಆದಷ್ಟು ಬೇಗ ಸರಿಪಡಿಸುತ್ತೇನೆಂದು ಭರವಸೆ ನೀಡಿದ ಅವರು, ಕಲಾವಿದರು ಯಾವುದೇ ಪಕ್ಷಬೇಧವನ್ನು ಮಾಡಬಾರದು. ಇಂದು ನಡೆಯುತ್ತಿರುವ ನಾಟಕವು ಯಶಸ್ವಿಯಾಗಲಿ ಎಂದು ಹಾರೈಸಿದರು. ಜಿಪಂ ಸದಸ್ಯೆ ಸುಗುಣ ತಿಮ್ಮಪ್ಪರಾಜು, ನಿವೃತ್ತ ಶಿಕ್ಷಕ ಕುಳ್ಳಪ್ಪ, ಗ್ರಾಪಂ ಅಧ್ಯಕ್ಷೆ ಪದ್ಮಮ್ಮ, ಗ್ರಾಪಂ ಸದಸ್ಯರಾದ ಸತೀಶ್, ಎಂ.ಕೆ.ಕುಮಾರ್, ವಿಎಸ್‍ಎನ್ ಕಾರ್ಯದರ್ಶಿ ಮಂಜು ಸೇರಿದಂತೆ ಹಲವರು ಹಾಜರಿದ್ದರು.ರಂಗಕಲಾವಿದ ವಳಗೆರೆದೊಡ್ಡಿ ಚಿಕ್ಕರಾಜು ಉ|| ಸೇಟುರವರನ್ನು ನಾಗವಾರದ ನಾಟಕ ಮಂಡಳಿಯವರು ಸನ್ಮಾನಿಸಿದರು ಮತ್ತು ಶಾಸಕ ಸಿ.ಪಿ.ಯೋಗೇಶ್ವರ್ ಸಂದರ್ಭದಲ್ಲಿ ವಿವಿಧ ಕಲಾವಿದರನ್ನು ಸನ್ಮಾನಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin