ನಾಡಧ್ವಜವನ್ನು ಬದಲಾಯಿಸಲು ಕನ್ನಡಿಗರು ಒಪ್ಪಲ್ಲ : ವಾಟಾಳ್

ಈ ಸುದ್ದಿಯನ್ನು ಶೇರ್ ಮಾಡಿ

vatal-nagraj

ಬೆಂಗಳೂರು,ಫೆ.7-ಸುಮಾರು 55 ವರ್ಷಗಳ ಇತಿಹಾಸ ಇರುವ ಕನ್ನಡ ನಾಡಧ್ವಜವನ್ನು ಬದಲಾಯಿಸಲು ಒಪ್ಪುವುದಿಲ್ಲ. ಸಮಸ್ತ ಕನ್ನಡಿಗರು ತಿರಸ್ಕರಿಸುತ್ತಾರೆ ಎಂದು ಕನ್ನಡ ಚಳುವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳದಿ, ಕೆಂಪು ಬಾವುಟಕ್ಕೆ ಬಿಳಿ ಬಣ್ಣ ಸೇರಿಸಿ ಅದರಲ್ಲಿ ರಾಜ್ಯದ ಲಾಂಛನವನ್ನು ಹಾಕಿ ಹೊಸ ಧ್ವಜವನ್ನು ಹೊರತರುವ ಸರ್ಕಾರದ ಕ್ರಮ ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದ್ದಾರೆ.  ನಾಡಧ್ವಜ ಬದಲಾವಣೆಗೆ ಯಾವದೇ ಮಾನ್ಯತೆ ನೀಡುವುದಿಲ್ಲ. ರಾಜ್ಯದ ಜನತೆ ಹಿಂದಿನಿಂದಲೂ ಒಪ್ಪಿಕೊಂಡಿರುವ ಧ್ವಜವನ್ನು ಮುಂದೆಯೂ ಅದನ್ನೇ ಬಳಸುತ್ತಾರೆ ಎಂದರು.

ಕನ್ನಡ ಮತ್ತು ಸಂಸ್ಕøತಿಯ ಇಲಾಖೆಯ ಚಕ್ರವರ್ತಿ ಮೋಹನ್ ನೇತೃತ್ವದ ತಜ್ಞರ ಸಮಿತಿಯೇ ಬೇಕಿರಲಿಲ್ಲ ಎಂದರು. ನಾಡಧ್ವಜ ಬದಲಾವಣೆ ಪ್ರಯತ್ನ ಸರಿಯಾದ ಚಿಂತನೆಯೂ ಅಲ್ಲ. ನಾವು ಅದನ್ನು ತಿರಸ್ಕರಿಸುತ್ತೇವೆ ಎಂದು ಹೇಳಿದರು.   ರಾಜ್ಯದ ಮೂಲೆ ಮೂಲೆಯಲ್ಲಿ ಈಗಿರುವ ಹಳದಿ, ಕೆಂಪು ಬಾವುಟವನ್ನು ಕನ್ನಡಿಗರು ಹಾರಿಸುತ್ತಾರೆ ಎಂದ ಅವರು, ಹೊಸ ನಾಡಧ್ವಜಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

Facebook Comments

Sri Raghav

Admin