ನಾಡಪ್ರಭು ಕೆಂಪೇಗೌಡರ ಸಮಾಧಿ ಸ್ಥಳ ಅಭಿವೃದ್ಧಿಗೆ ಪ್ರಾಧಿಕಾರದ ಸಿದ್ಧತೆ

ಈ ಸುದ್ದಿಯನ್ನು ಶೇರ್ ಮಾಡಿ

kempegow-da

ಬೆಂಗಳೂರು, ಆ.11- ಮಾಗಡಿಯ ಕೆಂಪಾಪುರದಲ್ಲಿ ಕೆಂಪೇಗೌಡರ ಸ್ಮಾರಕ ನಿರ್ಮಾಣ… 50 ಎಕರೆ ಪ್ರದೇಶ ಸಮಗ್ರ ಅಭಿವೃದ್ಧಿ… ಬೆಂಗಳೂರು ವಿಶ್ವವಿದ್ಯಾನಿಲಯದ ಮೂರು ಎಕರೆ ಪ್ರದೇಶದಲ್ಲಿ ಕೆಂಪೇಗೌಡ ಸಂಶೋಧನಾ ಕೇಂದ್ರ ಸ್ಥಾಪನೆ… ಕೆಂಪೇಗೌಡ ಬಡಾವಣೆಯ 11 ಎಕರೆ ಪ್ರದೇಶದಲ್ಲಿ ಕೆಂಪೇಗೌಡ ಸಾಂಸ್ಕøತಿಕ ಭವನ ನಿರ್ಮಾಣ… ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯ ಪುಸ್ತಕದಲ್ಲಿ 5 ಪುಟಗಳ ಕೆಂಪೇಗೌಡರ ಜೀವನ ಚರಿತ್ರೆ ಅಳವಡಿಕೆ… ಈ ಎಲ್ಲ ಪ್ರದೇಶಗಳಿಗೆ ಪ್ಯಾಕೇಜ್ ಟೂರ್ ಆರಂಭಿಸುವುದು…  ಇವಿಷ್ಟು ನಾಡಪ್ರಭು ಕೆಂಪೇಗೌಡ ಪ್ರಾಧಿಕಾರ ಕೈಗೆತ್ತಿಕೊಂಡಿರುವ ತೀರ್ಮಾನಗಳು. ನಿನ್ನೆಯಷ್ಟೇ ನಾಡಪ್ರಭು ಕೆಂಪೇಗೌಡ ಪ್ರಾಧಿಕಾರ ರಚನೆಗೆ ಸಚಿವ ಸಂಪುಟ ಅಸ್ತು ಎಂದಿರುವ ಬೆನ್ನಲ್ಲೆ ಕೆಂಪೇಗೌಡರ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸಲು ಈ ಮೇಲ್ಕಂಡ ತೀರ್ಮಾನ ಕೈಗೊಳ್ಳಲಾಗಿದೆ.

ಪ್ರಾಧಿಕಾರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷರು, ಪ್ರಾದೇಶಿಕ ಆಯುಕ್ತರಾದ ಜಯಂತಿ ಅವರು ನೋಡಲ್ ಅಧಿಕಾರಿಯಾಗಿರುತ್ತಾರೆ. ನಾಲ್ಕು ಜಿಲ್ಲೆಗಳ ಜಿಲ್ಲಾಧಿಕಾರಿಗಳು 20 ತಹಸೀಲ್ದಾರ್‍ಗಳು, 12 ಮಂದಿ ಸ್ಪೆಷಲ್ ಕಮಷಿನರ್‍ಗಳು ಪ್ರಾಧಿಕಾರಕ್ಕೆ ಸದಸ್ಯರಾಗಿರುತ್ತಾರೆ.  ಕೆಂಪೇಗೌಡರ ಪುಣ್ಯಭೂಮಿಯನ್ನು ಯಾವ ರೀತಿ ಅಭಿವೃದ್ಧಿ ಪಡಿಸಬೇಕೆಂಬ ಬಗ್ಗೆ ಬೆಂಗಳೂರು ವಿವಿ ಕೆಂಪೇಗೌಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಶೇಖ್ ಮಸ್ತಾನ್ ನೇತೃತ್ವದಲ್ಲಿ ಒಂದು ಸಮಿತಿ ರಚಿಸಿತ್ತು. ಈ ಸಮಿತಿ ಸದಸ್ಯರು ನೋಡಲ್ ಅಧಿಕಾರಿ ಜಯಂತಿ ಅವರೊಂದಿಗೆ ನಾಲ್ಕು ಸುತ್ತಿನ ಮಾತುಕತೆ ನಡೆಸಿ ಸಮಗ್ರ ಅಭಿವೃದ್ಧಿ ಕುರಿತು ವರದಿ ನೀಡಿದೆ. ಈ ವರದಿ ಇಂದು ಮುಖ್ಯಮಂತ್ರಿಗಳ ಕೈ ಸೇರಿದ್ದು, ಆದಷ್ಟು ಬೇಗ ಯೋಜನೆಗಳನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಮೇಯರ್ ಮಂಜುನಾಥರೆಡ್ಡಿ ಅವಧಿ ಪೂರ್ಣಗೊಳ್ಳುವ ಮುನ್ನವೇ ಬೆಂಗಳೂರು ವಿವಿ ಆವರಣದ ಮೂರು ಎಕರೆ ಪ್ರದೇಶದಲ್ಲಿ ಸಂಶೋಧನಾ ಕೇಂದ್ರಕ್ಕೆ ಗದ್ದಲಿ ಪೂಜೆ ನೆರವೇರಲಿದೆ.

ಅಭಿನಂದನೆ:

ನಾಡಪ್ರಭು ಕೆಂಪೇಗೌಡ ಪ್ರಾಧಿಕಾರ ರಚನೆಗೆ ಮುಂದಾಗಿರುವ ಸರ್ಕಾರದ ಕ್ರಮ ಮತ್ತು ಅಭಿವೃದ್ಧಿಗೆ ಸಮಗ್ರ ವರದಿ ನೀಡಿರುವ ಶೇಖ್‍ಮಸ್ತಾನ್ ನೇತೃತ್ವದ ಸಮಿತಿಯ ಸದಸ್ಯರಿಗೆ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾವೇದಿಕೆ ಪದಾಧಿಕಾರಿಗಳು ಇಂದು ಅಭಿನಂದನೆ ಸಲ್ಲಿಸಿದರು.  ಅಭಿನಂದನೆ ನಂತರ ಮಾತನಾಡಿದ ವೇದಿಕೆ ಅಧ್ಯಕ್ಷ ಎ.ಎಚ್.ಬಸವರಾಜ್, ಕೆಂಪಾಪುರದಲ್ಲಿರುವ ಕೆಂಪೇಗೌಡರ ಸಮಾಧಿ ಸ್ಥಳವನ್ನು  ಸಂಪೂರ್ಣವಾಗಿ ಅಭಿವೃದ್ಧಿಪಡಿಸುವಂತೆ ನಮ್ಮ ವೇದಿಕೆ ಒತ್ತಾಯಿಸಿತ್ತು. ಇದಕ್ಕೆ ಸ್ಪಂದಿಸಿ ಸರ್ಕಾರ ಪ್ರಾಧಿಕಾರ ರಚಿಸಲು ಮುಂದಾಗಿದೆ. ಹಾಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಹೋದ್ಯೋಗಿಗಳನ್ನು ಅಭಿನಂದಿಸುತ್ತೇವೆ ಎಂದು ಹೇಳಿದರು.  ಅದೇ ರೀತಿ ಶೇಖ್‍ಮಸ್ತಾನ್ ನೇತೃತ್ವದ ಸಮಿತಿಯ ಸದಸ್ಯರ ಕಾರ್ಯ ಕುಡ ಶ್ಲಾಘನೀಯ. ಶೀಘ್ರವೇ ಪ್ರಾಧಿಕಾರದ ಯೋಜನೆಗಳು ಪೂರ್ಣಗೊಂಡು ಮುಂದಿನ ಪೀಳಿಗೆಗೆ ನಾಡಪ್ರಭುಗಳ ಇತಿಹಾಸ, ಆಡಳಿತ, ಕಲೆ, ಸಂಸ್ಕøತಿ ತಿಳಿಯಬೇಕು ಎಂಬುದೇ ನಮ್ಮ ಆಶಯವಾಗಿದೆ ಎಂದು ತಿಳಿಸಿದರು.

Facebook Comments

Sri Raghav

Admin