ನಾಡಹಬ್ಬ ದಸರಾಕ್ಕೆ ಸಿದ್ಧತೆ ಆರಂಭ

ಈ ಸುದ್ದಿಯನ್ನು ಶೇರ್ ಮಾಡಿ

ARAMANE

ಮೈಸೂರು, ಸೆ.23-ನಾಡಹಬ್ಬ ಮೈಸೂರು ದಸರಾಕ್ಕೆ ಸಿದ್ಧತೆಗಳು ಆರಂಭಗೊಂಡಿವೆ. ಕಾವೇರಿ ಪ್ರತಿಭಟನೆ ನಡುವೆಯೇ ಇತ್ತ ಮೈಸೂರಿನಲ್ಲಿ ನಾಡಿನ ಇತಿಹಾಸ, ಪರಂಪರೆ ಸಂಸ್ಕೃತಿ ಯನ್ನು ಬಿಂಬಿಸುವ ದಸರಾ ಮಹೋತ್ಸವ ಆರಂಭಕ್ಕೆ ಒಂಬತ್ತು ದಿನಗಳು ಬಾಕಿಯಿರುವಂತೆಯೇ ಜಿಲ್ಲಾಡಳಿತ ಸಿದ್ಧತೆಗೆ ಮುಂದಾಗಿದೆ.ಅರಮನೆಯಲ್ಲಿ ಒಂದೆಡೆ ವಿದ್ಯುತ್ ದೀಪಗಳನ್ನು ಅಳವಡಿಸುತ್ತಿದ್ದರೆ, ಮತ್ತೊಂದೆಡೆ ಅರಮನೆ ಆವರಣದ ಉದ್ಯಾನವನವನ್ನು ಸಿಂಗರಿಸಲಾಗುತ್ತಿದೆ.ಅರಮನೆಗೆ ಒಂದು ಲಕ್ಷಕ್ಕೂ ಹೆಚ್ಚು ಬಲ್ಬ್‍ಗಳನ್ನು ಅಳವಡಿಸುವ ಮೂಲಕ ಜಗಮಗಿಸುವಂತೆ ಮಾಡಲಾಗುತ್ತಿದೆ. ಹಾಗೆಯೇ ದಸರಾ ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ವಿದ್ಯುತ್ ಅಲಂಕಾರ ಮಾಡಲಾಗುತ್ತಿದ್ದು, ಸರ್ಕಾರಿ ಕಚೇರಿಗಳು, ರಸ್ತೆ ಬದಿಯ ಫುಟ್‍ಪಾತ್ ಅಂಚಿಗೆ ಬಣ್ಣ ಬಳಿಯಲಾಗುತ್ತಿದೆ.

ವಿಜಯದಶಮಿ ದಿನ ಹಾರಿಸಲಾಗುವ ಕುಶಾಲತೋಪಿಗೆ ಆನೆ ಬೆದರದಿರಲಿ ಎಂಬ ಹಿನ್ನೆಲೆಯಲ್ಲಿ ಈಗಾಗಲೇ ಸಿಡಿಮದ್ದು ತಾಲೀಮು ನಡೆಸಲಾಗುತ್ತಿದೆ.ಇದಲ್ಲದೆ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲು ಗಜಪಡೆಯ ಕ್ಯಾಪ್ಟನ್ ಅರ್ಜುನನಿಗೆ ಈಗಾಗಲೇ ಮರಳು ಮೂಟೆಯನ್ನು ಹೊರಿಸಿ ಅಭ್ಯಾಸ ಮಾಡಿಸಲಾಗುತ್ತಿದೆ.ನಗರದ ಪ್ರಮುಖ ವೃತ್ತಗಳಾದ ಜಯಚಾಮರಾಜವೃತ್ತ, ಕೆ.ಆರ್.ವೃತ್ತ, ಹಾರ್ಡಿಂಗ್ ವೃತ್ತ, ರಾಮಸ್ವಾಮಿ ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತಗಳು ಹಾಗೂ ಪ್ರತಿಮೆಗಳಿಗೆ ಬಣ್ಣ ಬಣ್ಣದ ದೀಪಗಳನ್ನು ಅಳವಡಿಸಲಾಗುತ್ತಿದೆ.
ಅಕ್ಟೋಬರ್ 1ರಂದು ಬೆಳಗ್ಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡದೇವಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುವ ಮೂಲಕ ನಾಡೋಜ ಚನ್ನವೀರ ಕಣವಿ ಅವರು ದಸರಾ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.ಅ.11ರಂದು ವಿಜಯದಶಮಿಯ ಜಂಬೂಸವಾರಿ ಮೆರವಣಿಗೆಗೆ ಚಾಲನೆ ನೀಡಲಾಗುತ್ತದೆ.

 

► Follow us on –  Facebook / Twitter  / Google+

Facebook Comments

Sri Raghav

Admin