ನಾಡಿನಾದ್ಯಂತ ವರಲಕ್ಷ್ಮಿ ಹಬ್ಬದ ಸಡಗರ

ಈ ಸುದ್ದಿಯನ್ನು ಶೇರ್ ಮಾಡಿ

Vara

ಬೆಂಗಳೂರು, ಆ.12- ನಾಡಿನಾದ್ಯಂತ ವರಮಹಾಲಕ್ಷ್ಮಿ ವ್ರತಾಚರಣೆಯನ್ನು ಮಹಿಳೆಯರು ಸಡಗರ ಮತ್ತು ವೈಭವದಿಂದ ಆಚರಿಸಿದರು.   ಮುಂಜಾನೆ ಅಭ್ಯಂಜನ ಸ್ನಾನ ಮಾಡಿ ಮನೆ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ತಳಿರು-ತೋರಣಗಳನ್ನು   ಕಟ್ಟಿ ರಾಹುಕಾಲಕ್ಕೂ ಮುನ್ನ ವರಮಹಾಲಕ್ಷ್ಮಿಯನ್ನು ಪ್ರತಿಷ್ಠಾಪಿಸಿ ವ್ರತಾಚರಣೆ ನೆರವೇರಿಸಿದರು.  ಕೆಲವರ ಮನೆಗಳಲ್ಲಿ ಕಳಶವಿಟ್ಟು ಬೆಳ್ಳಿಯ ಲಕ್ಷ್ಮಿ ಮುಖವಾಡ ಧರಿಸಿ ಸೀರೆ-ಕುಪ್ಪಸ-ಒಡವೆಗಳನ್ನು ಧರಿಸಿ 9 ಬಗೆ ಅಥವಾ 5 ಬಗೆಯ ಹೂವು-ಹಣ್ಣುಗಳನ್ನು ಇಟ್ಟು ಭಕ್ತಿಯಿಂದ ವರಮಹಾಲಕ್ಷ್ಮಿಯ ವ್ರತಾಚರಣೆ ಮಾಡಿದರು.
ಕೆಲವು ಮನೆಯವರು ಪುರೋಹಿತರನ್ನು ಕರೆಸಿ ವ್ರತಾಚರಣೆ ಮಾಡಿದರೆ  ಮತ್ತೆ ಕೆಲವರು ತಾವೇ ಪೂಜಾ ವಿಧಾನವನ್ನು ನೆರವೇರಿಸಿದರು. ಪಾಯಸ, ಹುಗ್ಗಿ ಅನ್ನ, ಕೋಸಂಬರಿ ಸೇರಿದಂತೆ ಬಗೆಬಗೆಯ ತಿಂಡಿ, ಹಣ್ಣು-ತೆಂಗಿನಕಾಯಿ ನೈವೇದ್ಯ ಮಾಡಿ ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರುವಂತೆ ಬೇಡಿಕೊಂಡರು.

16 ಗಂಟುಗಳನ್ನು ಹಾಕಿದ ಹರಿಶಿನದ ದಾರಕ್ಕೆ ಹೂವು ಕಟ್ಟಿ ದೇವರ ಮುಂದಿಟ್ಟು ಮುತ್ತೈದೆಯರ ಕೈಗಳಿಗೆ ಕಟ್ಟಿ ಆಶೀರ್ವಾದ ಪಡೆದುಕೊಂಡರು.   ಹೆಂಗೆಳೆಯರನ್ನು ಆಹ್ವಾನಿಸಿ ಅರಿಶಿನ-ಕುಂಕುಮ ನೀಡಿದರೆ, ಮತ್ತೆ ಕೆಲವರು ದೇವರಿಗೆ ಬಾಗಿನ ಅರ್ಪಿಸಿ ನಂತರ ಮುತ್ತೈದೆಯರು ಬಾಗಿನ ಬದಲಾಯಿಸಿಕೊಂಡರು.

► Follow us on –  Facebook / Twitter  / Google+

Facebook Comments

Sri Raghav

Admin