ನಾಡಿನೆಲ್ಲೆಡೆ ನಾಗರಪಂಚಮಿ ಸಂಭ್ರಮ

ಈ ಸುದ್ದಿಯನ್ನು ಶೇರ್ ಮಾಡಿ

Nagarapanchami--03

ಬೆಂಗಳೂರು, ಜು.28-ನಾಡಿನೆಲ್ಲೆಡೆ ನಾಗರಪಂಚಮಿ ಸಂಭ್ರಮ, ಸಡಗರ. ನಾಗರಪಂಚಮಿಯ ದಿನವಾದ ಇಂದು ಎಲ್ಲಾ ನಾಗದೇವಾಲಯಗಳಲ್ಲಿ ವಿಶೇಷ ಪೂಜಾಕೈಂಕರ್ಯಗಳು ನೆರವೇರಿದವು. ನಾಗರ ಕಲ್ಲಿಗೆ, ಹುತ್ತಗಳಿಗೆ ವಿಶೇಷ ಪೂಜೆ ಹಾಲಿನ ಅಭಿಷೇಕ ಮಾಡುವ ಮೂಲಕ ನಾಗರಪಂಚಮಿಯನ್ನು ಸಡಗರ ಸಂಭ್ರಮದಿಂದ ಜನ ಆಚರಿಸಿದರು. ನಾಗ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆದವು. ಹಲವೆಡೆ ಜೀವಂತ ಹಾವುಗಳಿಗೆ ಹಾಲಿನ ಅಭಿಷೇಕ, ಪೂಜೆಗಳು ನೆರವೇರಿದ್ದು ವಿಶೇಷವಾಗಿತ್ತು.

Nagarapanchami--04

ಕರ್ನಾಟಕದ ನಾಗ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗಾರಾಧನೆ ವಿಜೃಂಭಣೆಯಿಂದ ನೆರವೇರಿತು. ಘಾಟಿ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ, ವಿವಿಧ ಸುಬ್ರಹ್ಮಣ್ಯ ಸ್ವಾಮಿದೇವಾಲಯಗಳು, ನಾಗಕ್ಷೇತ್ರಗಳಲ್ಲಿ ವಿಶೇಷ ಪೂಜೆ ನಡೆಸಲಾಯಿತು. ನಾಡಿಗೆ ದೊಡ್ಡದಾದ ಈ ಹಬ್ಬ ಒಂದು ಮತ, ಸಂಪ್ರದಾಯಕ್ಕೆ ಸೀಮಿತವಾಗಿಲ್ಲ. ಎಲ್ಲಾ ಸಂಪ್ರದಾಯದವರು ಈ ಹಬ್ಬವನ್ನು ಆಚರಿಸುತ್ತಾರೆ. ಕುಕ್ಕೆಸುಬ್ರಹ್ಮಣ್ಯದಲ್ಲಿ ಮುಸ್ಲಿಂ ಬಾಂಧವರು, ಕ್ರಿಶ್ಚಿಯನ್ನರೂ ಕೂಡ ನಾಗಾರಾಧನೆ ಯಲ್ಲಿ ಪಾಲ್ಗೊಳ್ಳುತ್ತಾರೆ.

Nagarapanchami--02

ಕರಾವಳಿಯಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವವಿದೆ. ಸುಬ್ರಹ್ಮಣ್ಯ ಗುಡಿ, ಕಾಸರಗೋಡುನಗರ, ಕೆಎಸ್‍ಆರ್‍ಟಿಸಿ ಬಳಿ ಇರುವ ನಾಗನಕಟ್ಟೆ ಮುಂತಾದೆಡೆ ವಿಶೇಷ ಪೂಜೆಗಳು ನಡೆದವು.  ಶಿರಸಿಯ ನೀಲಖೇಣಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಆಗಮಿಸಿ ನಾಗಾರಾಧನೆಯಲ್ಲಿ ತೊಡಗಿದ್ದರು.
ಚಿಕ್ಕಬಳ್ಳಾಪುರ ಜಿಲ್ಲೆ, ಗೌರಿಬಿದನೂರಿನಲ್ಲಿರುವ ವಿದುರಾಶ್ವತ್ಥದಲ್ಲಿ ನಾಗಾರಾಧನೆ ವಿಶೇಷವಾಗಿತ್ತು.

Nagarapanchami--01

ರಾಜಧಾನಿ ಬೆಂಗಳೂರಿನಲ್ಲಿ ನಾಗರಪಂಚಮಿ ಅಂಗವಾಗಿ ಸುಬ್ರಹ್ಮಣ್ಯ, ಪಾತಾಳ ಪಂಚಲಿಂಗೇಶ್ವರ ದೇವಸ್ಥಾನ, ಕುರುಬರಹಳ್ಳಿಯ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ, ಮುಂತಾದೆಡೆ ನಾಗರ ಪಂಚಮಿಯನ್ನು ವಿಶೇಷವಾಗಿ ಆಚರಿಸಲಾಯಿತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

Sri Raghav

Admin