ನಾದಿನಿಗಾಗಿ ಹೆಂಡತಿಯನ್ನು ಕೊಂದು ಹಾವು ಕಚ್ಚಿದೆ ಎಂಬ ಕಥೆಕಟ್ಟಿದ ಖತರ್ನಾಕ್ ಪತಿರಾಯ..!

ಈ ಸುದ್ದಿಯನ್ನು ಶೇರ್ ಮಾಡಿ

Snake---01

ಬಾಗಲಕೋಟೆ, ಫೆ.17- ನಾದಿನಿಯ ವರಿಸುವ ಆಸೆಯಿಂದ ಪತ್ನಿಯನ್ನು ಕೊಲೆ ಮಾಡಿ ಹಾವು ಕಚ್ಚಿ ಸಾವು ಎಂದು ಕಥೆಕಟ್ಟಿದ್ದ ಪತಿರಾಯ ಈಗ ಪೊಲೀಸರ ಅತಿಥಿಯಾಗಿದ್ದಾನೆ.
ಮೂಧೋಳ ತಾಲ್ಲೂಕಿನ ಚಿಚಖಂಡಿ ಗ್ರಾಮದಲ್ಲಿ ಫೆ.14ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ರತ್ನವ್ವ(25) ಪತಿಯಿಂದಲೇ ಕೊಲೆಯಾದ ನತದೃಷ್ಟೆ.
ಚಂದ್ರು ಕಿಲಬನೂರು(35) ಎಂಬಾತನೆ ಪತ್ನಿಯ ಕೊಂದು ಕಥೆ ಕಟ್ಟಿ ನಾಟಕವಾಡಿದ್ದ ಪತಿ.  ನಾದಿನಿಯನ್ನು ಮದುವೆಯಾಗುವ ಆಸೆಯಿಂದ ಫೆ.14ರಂದು ಪತ್ನಿ ರತ್ನವ್ವಳನ್ನು ಕತ್ತು ಹಿಸುಕಿ ಕೊಲೆ ಮಾಡಿ ಹಾವು ಕಚ್ಚಿ ಸಾವನ್ನಪ್ಪಿದ್ದಾಳೆ ಎಂದು ಕಥೆ ಕಟ್ಟಿ ಮನೆಯವರನ್ನು ನಂಬಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ವೇಳೆ ರತ್ನವ್ವಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಮಾಹಿತಿ ಅರಿತ ಲೋಕಾಪುರ ಠಾಣೆ ಪೊಲೀಸರು ಪತಿ ಚಂದ್ರುನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ.  ಪತ್ನಿ ಕೊಲ್ಲಲೆಂದೆ ಆರೋಪಿ 1 ಸಾವಿರ ರೂ. ನೀಡಿ ಹಾವು ಖರೀದಿಸಿದ್ದ ಎಂಬುದು ಸಹ ವಿಚಾರಣೆಯಿಂದ ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ಪತಿಯನ್ನು ಬಂಧಿಸಿರುವ ಲೋಕಾಪುರ ಠಾಣೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin