‘ನಾನು ಅಮೀರ್ ನನ್ನ ವೈಯಕ್ತಿಕವಾಗಿ ಪ್ರೀತಿಸುತ್ತೇನೆ, ವೃತ್ತಿಪರವಾಗಿ ದ್ವೇಷಿಸುತ್ತೇನೆ’ : ಸಲ್ಮಾನ್

ಈ ಸುದ್ದಿಯನ್ನು ಶೇರ್ ಮಾಡಿ

Salman-01

ನಿನ್ನನ್ನು ನಾನು ವೈಯಕ್ತಿಕವಾಗಿ ತುಂಬಾ ಪ್ರೀತಿಸುತ್ತೇವೆ.. ಆದರೆ ವೃತ್ತಿಯ ವಿಷಯಕ್ಕೆ ಬಂದಾಗ ನಾನು ನಿನ್ನನ್ನು ದ್ವೇಷಿಸುತ್ತೇನೆ- ಬಾಲಿವುಡ್ ಸೂಪರ್‍ಸ್ಟಾರ್ ಸಲ್ಮಾನ್ ಖಾನ್ ಮಿಸ್ಟರ್ ಪರ್ಫೆಕ್ಟ್ ಖ್ಯಾತಿಯ ಅಮೀರ್‍ಖಾನ್ ಬಗ್ಗೆ ಹೇಳಿದ ಮಾತುಗಳಿವು.  ಅಮೀರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ದಂಗಲ್ ಚಿತ್ರ ವೀಕ್ಷಿಸಿದ ನಂತರ ಮಿ.ಪರ್ಫೆಕ್ಟ್‍ನನ್ನು ಹಾಡಿ ಹೊಗಳಿದ್ದಾನೆ ಸಲ್ಲು.   ಈ ಸಿನಿಮಾದಲ್ಲಿ ಅಮೀರ್ ಅಭಿನಯಕ್ಕೆ ನಾನು ಬೆರಗಾಗಿದ್ದೇನೆ. ಆತನ ಅದ್ಭುತ ಅಭಿನಯ ಮತ್ತು ಸಾಮಥ್ರ್ಯ ನೋಡಿ ನನ್ನಲ್ಲಿ ಮತ್ಸರ ಹುಟ್ಟುತ್ತಿದೆ. ಇದೇ ಕಾರಣಕ್ಕಾಗಿ ನಾನು ಅಮೀರ್‍ನನ್ನು ಪ್ರೀತಿಸುತ್ತೇನಾದರೂ, ವೃತ್ತಿ ವಿಚಾರಕ್ಕೆ ಬಂದಾಗ ಆತನನ್ನು ದ್ವೇಷಿಸುತ್ತೇನೆ ಎಂದು ನಗು ಮಿಶ್ರಿತ ಭಾವನೆಗಳಲ್ಲಿ ಸಲ್ಲು ಹೇಳಿದ್ದಾನೆ.

ನೀವೇನೇ ಹೇಳಿ. ನನ್ನ ಕುಟುಂಬದವರು ನನ್ನ ಸಿನಿಮಾಗಿಂತ ಅಮೀರ್ ಸಿನಿಮಾಗಳನ್ನು ಹೆಚ್ಚು ಇಷ್ಟಪಡುತ್ತಾರೆ. ನನ್ನ ಸುಲ್ತಾನ್ ಸಿನಿಮಾಗಿಂತ ಹೆಚ್ಚಾಗಿ ದಂಗಲ್ ಚಿತ್ರವನ್ನು ಇಷ್ಟಪಟ್ಟಿದ್ದಾರೆ. ಸುಲ್ತಾನ್‍ಗಿಂತಲೂ ದಂಗಲ್ ಚೆನ್ನಾಗಿದೆ ಎಂದು ನನ್ನ ಬಂಧು-ಮಿತ್ರರು ಹೇಳಿದ್ದಾರೆ ಎಂದು ಸಲ್ಲು ಭಾಯ್ ಟ್ವೀಟ್ ಮಾಡಿದ್ದಾನೆ.  ಇದಕ್ಕೆ ಪ್ರತಿಕ್ರಿಯಿಸಿರುವ ಅಮೀರ್, ಸಲ್ಲು ನಿನ್ನ ದ್ವೇಷದಲ್ಲಿ ನಾನು ಪ್ರೀತಿಯನ್ನು ಮಾತ್ರ ಕಾಣುತ್ತೇನೆ. ನಾನು ನಿನ್ನನ್ನು ಪ್ರೀತಿಸುತ್ತೇವೆ, ನಿಮ್ಮ ಪ್ರೀತಿ-ವಿಶ್ವಾಸಕ್ಕೆ ನಾನು ಋಣಿಯಾಗಿದ್ದೇನೆ ಎಂದು ಟ್ವೀಟಿಸಿದ್ದಾನೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin