ನಾನು ಕೂಡ ಸಚಿವಾಕಾಂಕ್ಷಿ : ವೀರಣ್ಣ ಮತ್ತಿಕಟ್ಟಿ
ಬೆಂಗಳೂರು, ಜ.30- ಕಾಂಗ್ರೆಸ್ನಲ್ಲಿ ಹಿರಿಯರನ್ನು ಕಡೆಗಣಿಸುತ್ತಿರುವುದು ನಿಜ ಎಂದಿರುವ ವಿಧಾನಪರಿಷತ್ ಸದಸ್ಯ ವೀರಣ್ಣಮತ್ತಿಕಟ್ಟಿ. ತಾವು ಸಚಿವ ಸ್ಥಾನದ ಆಕಾಂಕ್ಷಿ ಎಂದು ಹೇಳಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ರಾಷ್ಟ್ರಪಿತ ಮಹಾತ್ಮಾಗಂೀಜಿ ಅವರ ಹುತಾತ್ಮ ದಿನಾಚರಣೆ ಸಂದರ್ಭದಲ್ಲಿ ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಚ್.ಎಸ್.ಮಹದೇವಪ್ರಸಾದ್ ಅವರ ನಿಧನದಿಂದ ತೆರವಾಗಿರುವ ಸಚಿವ ಸ್ಥಾನಕ್ಕೆ ಲಿಂಗಾಯಿತ ಸಮುದಾಯದ ಕೋಟಾದಲ್ಲಿ ನನಗೆ ಸಚಿವ ಸ್ಥಾನಕೊಡಬೇಕೆಂದು ಕೇಳುತ್ತಿದ್ದೇನೆ.
ಪಕ್ಷದಲ್ಲಿ ಅತ್ಯಂತ ನಿಷ್ಠನಾಗಿ ಕೆಲಸ ಮಾಡುವ ನನಗೆ ಸಚಿವ ಸ್ಥಾನದ ಜವಾಬ್ದಾರಿ ನೀಡಿದರೆ ಸಮರ್ಥವಾಗಿ ನಿಭಾಯಿ ಸುತ್ತೇನೆ ಎಂದು ತಿಳಿಸಿದರು. ಹಿರಿಯ ಮುಖಂಡರಾದ ಬಿ.ಕೆ.ಜಾಫರ್ ಶರೀಫ್, ಪ್ರಕಾಶ್ ಹುಕ್ಕೇರಿ ಅವರ ಅಸಮಾಧಾನಕ್ಕೆ ಸಹಮತ ವ್ಯಕ್ತಪಡಿಸಿದ ವೀರಣ್ಣ ಮತ್ತಿಕಟ್ಟಿ, ನಿಷ್ಠಾವಂತ ಹಾಗೂ ಹಿರಿಯರನ್ನು ಕಡೆಗಣಿಸುತ್ತಿರುವುದು ನಿಜ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
< Eesanje News 24/7 ನ್ಯೂಸ್ ಆ್ಯಪ್ >
Click Here to Download : Android / iOS