‘ನಾನು ಪ್ರಧಾನಿಯಲ್ಲ ಪ್ರಧಾನ ಸೇವಕ’ ಎಂದಿದ್ದ ಮೋದಿ ಮಾತನ್ನು ಪುಷ್ಟೀಕರಿಸುತ್ತೆ ಈ ಸಾಕ್ಷಿ..!

ಈ ಸುದ್ದಿಯನ್ನು ಶೇರ್ ಮಾಡಿ

Modi-01

ನವದೆಹಲಿ, ಅ.12-ನಾನು ಪ್ರಧಾನಿಯಲ್ಲ, ದೇಶದ 125 ಕೋಟಿ ಜನರ ಪ್ರಧಾನ ಸೇವಕ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಮಾತು. 2014 ರ ಆಗಸ್ಟ್ 15ರಂದು ಸ್ವಾತಂತ್ರ್ಯೋತ್ಸವ ದಿನ ಕೆಂಪು ಕೋಟೆಯಲ್ಲಿ ಇಂತಹದೊಂದು ಮಾತನ್ನು ಪ್ರಧಾನಿ ಆಡಿದ್ದರು. ಇದೀಗ ಪ್ರಧಾನಿ ಮೋದಿ ತಾವು ಹೇಳಿದಂತೆ ನಡೆದುಕೊಳ್ಳುತ್ತಿದ್ದಾರೆ ಎಂಬುವುದಕ್ಕೆ ಒಂದು ಪುಷ್ಟಿ ಸಿಕ್ಕಿದೆ.
ಹೌದು, ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿ ಅಧಿಕಾರ ವಹಿಸಿಕೊಂಡ ಮೇಲೆ ಅವರು ರಜೆಯನ್ನೇ ಪಡೆದಿಲ್ಲವಂತೆ. ಇದನ್ನು ಪ್ರಧಾನಮಂತ್ರಿಗಳ ಕಾರ್ಯಾಲಯವೇ ಸ್ಪಷ್ಟಪಡಿಸಿದೆ. ಮಾಹಿತಿ ಹಕ್ಕಿನಡಿಯಲ್ಲಿ ಪ್ರಧಾನಿ ಹಾಗೂ ಸಂಪುಟ ಕಾರ್ಯದರ್ಶಿಗಳ ರಜೆಯ ನಿಯಮಗಳು ಮತ್ತು ಕಾರ್ಯವಿಧಾನಗಳ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರಧಾನಿ ಕಾರ್ಯಾಲಯ ಉತ್ತರಿಸಿದೆ.

ಅಧಿಕಾರಕ್ಕೆ ಬಂದ ದಿನದಿಂದ ಇಂದಿನವರೆಗೆ (ಅ.5ಕ್ಕೆ ಅನ್ವಯವಾಗುವಂತೆ) ಒಂದು ದಿನವೂ ರಜೆ ಹಾಕದೇ ನಮ್ಮ ಪ್ರಧಾನಮಂತ್ರಿಗಳು ಕೆಲಸ ಮಾಡಿದ್ದಾರೆ.ಅಂದರೆ ಒಟ್ಟಾರೆಯಾಗಿ 860 (ಪಿಎಂ ಆಗಿ ಅಧಿಕಾರ ಸ್ವೀಕರಿಸಿದ್ದು 26.05.2014ರಲ್ಲಿ) ದಿನ ಪ್ರಧಾನಿಗಳು ಸತತವಾಗಿ ಕೆಲಸ ಮಾಡಿದ್ದಾರೆ.ಆರ್ಟಿಐ ಅರ್ಜಿಗೆ ಉತ್ತರಿಸುತ್ತಾ ಪ್ರಧಾನಮಂತ್ರಿ ಕಾರ್ಯಾಲಯ ಈ ಮಾಹಿತಿ ನೀಡಿದೆ.ಹಿಂದಿನ ಪ್ರಧಾನಿಗಳ ರೆಕಾರ್ಡ್ಸ್  ನಮ್ಮಲಿಲ್ಲ ಎಂದು ಪಿಎಂಓ, ಹಾಲೀ ಪ್ರಧಾನಿಯವರ ಮಾಹಿತಿಯನ್ನು ಮಾತ್ರ ನೀಡಿದೆ.

‘ಪ್ರಧಾನಮಂತ್ರಿಗಳು ಎಲ್ಲಾ ಸಮಯದಲ್ಲೂ ಕರ್ತವ್ಯಕ್ಕೆ ಹಾಜರಾಗಿದ್ದಾರೆ’ ಎಂದು ಪ್ರಧಾನಿ ಕಾರ್ಯಾಲಯ ಆರ್‍ಟಿಐ ಮೂಲಕ ಹೇಳಿದೆ. ಅಲ್ಲದೇ ಹಿಂದಿನ ಪ್ರಧಾನಿಗಳಾದ ಡಾ.ಮನಮೋಹನ್ ಸಿಂಗ್, ಅಟಲ್ ಬಿಹಾರಿ ವಾಜಪೇಯಿ, ಹೆಚ್.ಡಿ.ದೇವೇಗೌಡ, ಐ.ಕೆ. ಗುಜ್‍ರಾಲ್, ವಿ.ಪಿ.ನರಸಿಂಹರಾವ್, ಚಂದ್ರಶೇಖರ್, ಪಿ.ವಿ.ಸಿಂಗ್ ಹಾಗೂ ರಾಜೀವ್ ಗಾಂಧಿ ಅವರ ರಜೆಗಳ ಬಗ್ಗೆ ಕೂಡ ಮಾಹಿತಿ ನೀಡುವಂತೆ ಆರ್‍ಟಿಐ ಕಾರ್ಯಕರ್ತರು ಕೇಳಿದ್ದರು. ಇದಕ್ಕೆ ‘ಹಿಂದಿನ ಪ್ರಧಾನಿಗಳ ರಜೆ ಕುರಿತ ಮಾಹಿತಿಯ ದಾಖಲೆಗಳು ಈ ಕಚೇರಿಯಲ್ಲಿ ಇಲ್ಲ’ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.  ಇನ್ನು, ಸಂಪುಟ ಕಾರ್ಯದರ್ಶಿಗಳ ರಜೆ ಬಗ್ಗೆ ಉತ್ತರಿಸದ ಪ್ರಧಾನಿ ಕಾರ್ಯಾಲಯ, ಆರ್‍ಟಿಐ ಅರ್ಜಿಯನ್ನು ಗೃಹ ಇಲಾಖೆಗೆ ವರ್ಗಾಯಿಸಿದೆ.

► Follow us on –  Facebook / Twitter  / Google+

Facebook Comments

Sri Raghav

Admin