‘ನಾನು ಮತ್ತು ಜನಾರ್ದನ್ ಪೂಜಾರಿ ಅಶೋಕವನದ ಸೀತೆಯಂತೆ’

ಈ ಸುದ್ದಿಯನ್ನು ಶೇರ್ ಮಾಡಿ

vishwanath
ಮೈಸೂರು,ಡಿ.30-ನಾನು ಮತ್ತು ಜನಾರ್ದನ್ ಪೂಜಾರಿ ಅಶೋಕವನದ ಸೀತೆಯಂತೆ ಎಂದು ಮಾಜಿ ಸಂಸದ ಎಚ್.ವಿಶ್ವನಾಥ್ ತಿಳಿಸಿದ್ದಾರೆ.  ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೀತೆರಾಮನನ್ನು ಬಿಟ್ಟು ಇನ್ಯಾರನ್ನೂ ನೆನೆಯುವುದಿಲ್ಲ. ಹಾಗೇ ನಾವು ಕೂಡ ಕಾಂಗ್ರೆಸ್‍ನ ಬಿಟ್ಟು ಬೇರೆಯವರನ್ನು ನೆನೆಯುವುದಿಲ್ಲ. ಇದನ್ನು ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಅರ್ಥ ಮಾಡಿಕೊಳ್ಳಲಿ ಎಂದರು.  ಪಕ್ಷದಲ್ಲಿ ಇನ್ನು ಮುಂದಾದರೂ ಹಿರಿಯರ ಮಾತಿಗೆ ಮನ್ನಣೆ ಸಿಗುವಂತಾಗಲಿ ಎಂದು ಪರೋಕ್ಷವಾಗಿ ಮುಖ್ಯಮಂತ್ರಿಗೆ ತಿರುಗೇಟು ನೀಡಿದರು.  ನೋಟ್ ಬ್ಯಾನ್ ಬಗ್ಗೆ ಮಾತನಾಡಿದ ಅವರು, ಹಳೆ ನೋಟ್ ರದ್ದತಿ ಮಾನವ ಹಕ್ಕುಗಳ ಮೇಲೆ ಆಗಿರುವ  ದಮನಕಾರಿ ಕಾರ್ಯವಾಗಿದೆ ಎಂದು ಹೇಳಿದರು.

ಕಾಂಗ್ರೆಸ್ ಸಹ ನೋಟ್ ಬ್ಯಾನ್ ವಿರುದ್ದ ಹೋರಾಟ ಮಾಡುವುದರಲ್ಲಿ ವಿಫಲವಾಗಿದೆ. ನೋಟ್ ಬ್ಯಾನ್ ಬಗ್ಗೆ ಪ್ರಚಾರ ಮಾಡಲು ಬಿಜೆಪಿ ಸಾಮಾಜಿಕ ಜಾಲತಾಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ನೋಟ್ ಬ್ಯಾನ್‍ನಿಂದ ಭ್ರಮೆ ಸೃಷ್ಟಿಸಲಾಗಿದೆ ಎಂದರು.  ನಂಜನಗೂಡು ಉಪಚುನಾವಣೆ ಬಗ್ಗೆ ಪೂಜಾರಿ ಅವರು ಹಾಗೆ ಹೇಳಬಾರದಿತ್ತು. ಅವರ ಮುತ್ಸದಿತನ ಹಗೂ ಪಕ್ಷನಿಷ್ಠೆ ಬಗ್ಗೆ ನಮಗೆ ಯಾವಾಗಲೂ ಗೌರವವಿದೆ. ನಮಗೂ ಕಾಂಗ್ರೆಸ್‍ನಲ್ಲಿ ಒಳ್ಳೆಯ ಕಾಲ ಬರಲಿದೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin