‘ನಾನು ರಾಜಕೀಯ ಸೇರಲ್ಲ, ಆ ಬಯಕೆಯೂ ನನಗಿಲ್ಲ’ : ರೂಮರ್ ಗಳಿಗೆ ತೆರೆಎಳೆದ ತಲೈವಾ

ಈ ಸುದ್ದಿಯನ್ನು ಶೇರ್ ಮಾಡಿ

Rajani

ಚೆನ್ನೈ, ಮೇ 15- ನಾನು ರಾಜಕೀಯ ರಂಗ ಪ್ರವೇಶಿಸುವುದಿಲ್ಲ. ರಾಜಕಾರಣಕ್ಕೆ ಸೇರುವ ಬಯಕೆಯೂ ತಮಗಿಲ್ಲ ಎಂದು ಸೂಪರ್‍ಸ್ಟಾರ್ ತಲೈವಾ ರಜನಿಕಾಂತ್ ಸ್ಪಷ್ಟ ಮಾತುಗಳಲ್ಲಿ ಘೋಷಿಸಿದ್ದಾರೆ. ರಾಜಕೀಯ ರಂಗ ಪ್ರವೇಸಿಸುತ್ತಾರೆ ಎಂಬ ಊಹಾಪೋಹಾಗಳಿಂದ ಉಬ್ಬಿ ಹೋಗಿದ್ದ ಬೆಲೂನಿನಿಂದ ರೂಮರ್ ಗಾಳಿಯನ್ನು ಆರ್‍ಕೆ ತೆಗೆದಿದ್ದಾರೆ.  ಚೆನ್ನೈನ ರಾಘವೇಂದ್ರ ವೆಡ್ಡಿಂಗ್ ಹಾಲ್‍ನಲ್ಲಿ ಅಭಿಮಾನಿಗಳನ್ನು ಒಂಭತ್ತು ವರ್ಷಗಳ ನಂತರ ಮುಖಾಮುಖಿ ಭೇಟಿ ಮಾಡಿದ ರಜನಿಕಾಂತ್ ತಾನು ಭಾರತೀಯ ರಾಜಕಾರಣದಲ್ಲಿ ಮಹತ್ವದ ಪಾತ್ರ ವಹಿಸುವ ಕುರಿತ ವರದಿಗಳನ್ನು ತಳ್ಳಿ ಹಾಕಿದರು. ನನ್ನ ಹೆಸರನ್ನು ಹೇಳಿಕೊಂಡು ಕೆಲವು ರಾಜಕೀಯ ಪಕ್ಷಗಳು ಓಟ್ ಬ್ಯಾಂಕ್ ಗಳಿಸಲು ಯತ್ನಿಸುತ್ತಿವೆ. ಆದರೆ ತಾವು ಯಾವುದೇ ಪಕ್ಷವನ್ನೂ ಸೇರುವುದಿಲ್ಲ ; ಯಾವುದೇ ಪಕ್ಷಕ್ಕೂ ಬೆಂಬಲ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.ತಮಿಳುನಾಡಿನ ಜನರ ಭಾವನೆಗಳನ್ನು ಗೌರವಿಸಿ ನಾನು ಶ್ರೀಲಂಕಾ ಪ್ರವಾಸವನ್ನು ರದ್ದುಗೊಳಿಸಿದೆ. ವಿನಾಕಾರಣ ಯಾವುದೇ ವಿವಾದಗಳ ಸುಳಿಗೆ ಸಿಲುಕುವುದು ತಮಗೆ ಇಷ್ಟವಿಲ್ಲ ಎಂದು ಹೇಳಿದರು.   ತಮ್ಮ ನೆಚ್ಚಿನ ಕಪ್ಪು ಲುಂಗಿ-ಕಪ್ಪು ಜುಬ್ಬಾ ಧರಿಸಿದ್ದ 66 ವರ್ಷದ ರಜನಿ ವೇದಿಕೆಗೆ ಆಗಮಿಸಿದ್ದಂತೆ ಸಭಾಂಗಣವೇ ಬಿದ್ದು ಹೋಗುವಂತೆ ಪ್ರಚಂಡ ಕಡತಾನಗಳು ಮತ್ತು ಸಿಳ್ಳೆ-ಕೇಕೆಗಳು ಪ್ರತಿಧ್ವನಿಸಿತು.   ಅಭಿಮಾನಿಗಳ ಅಭಿಮಾನಕ್ಕೆ ಭಾವುಕರಾದ ರಜನಿ ಅಭಿಮಾನಿಗಳ ಪ್ರೀತಿ ಮತ್ತು ಹಾರೈಕೆಯಿಂದ ನಾನು ಇಷ್ಟು ಎತ್ತರ ತಲುಪಲು ಸಾಧ್ಯವಾಯಿತು ಎಂದು ಹೇಳಿದರು.

ಒಂಭತ್ತು ವರ್ಷಗಳ ನಂತರ ರಜನಿ ದರ್ಶನದಿಂದ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಇಂದಿನಿಂದ ರಜನಿ 17 ಜಿಲ್ಲೆಗಳ ಅಭಿಮಾನಿಗಳನ್ನು ಭೇಟಿ ಮಾಡುವರು. ಪ್ರತಿ ಜಿಲ್ಲೆಯಿಂದ 250 ಅಭಿಮಾನಿಗಳಿಗೆ ಮಾತ್ರ ರಜನಿ ಕಾರ್ಯಕ್ರಮದಲ್ಲಿ ಭೇಟಿ ಮಾಡಲು ಪಾಸ್ ನೀಡಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin