ನಾನು ಲಿಂಗಾಯಿತ ಪರ : ಹೊಸಮಠ ಚಿದಾನಂದ ಸ್ವಾಮೀಜಿ

ಈ ಸುದ್ದಿಯನ್ನು ಶೇರ್ ಮಾಡಿ

Lingayata--011

ಬೆಂಗಳೂರು,ಡಿ.27-ತಾವು ಲಿಂಗಾಯಿತರ ಪರ ಇರುವುದಾಗಿ ಹೊಸಮಠದ ಶ್ರೀ ಚಿದಾನಂದ ಸ್ವಾಮಿ ತಿಳಿಸಿದ್ದಾರೆ.  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಲಿಂಗಾಯಿತ-ವೀರಶೈವ ಎಂಬ ಚಳುವಳಿ ಆರಂಭವಾಗಿದೆ. ನಾನು ಲಿಂಗಾಯಿತರ ಪರವಾಗಿದ್ದೇನೆ ಎಂದರು. ರಾಜಕೀಯ ಲಾಭಕ್ಕಾಗಿ ಲಿಂಗಾಯಿತ-ವೀರಶೈವ ಧರ್ಮದ ವಿಚಾರ ಬಳಕೆಯಾಗುತ್ತಿದೆ. ಈ ಹೋರಾಟಗಳಿಂದ ರಾಜಕೀಯ ಪಕ್ಷಗಳಿಗೆ ಲಾಭವೇ ಹೊರತು ಲಿಂಗಾಯಿತ-ವೀರಶೈವರಿಗೆ ಯಾವುದೇ ಲಾಭವಿಲ್ಲ.

ಲಿಂಗಾಯಿತ ಅಥವಾ ವೀರಶೈವರ ಧರ್ಮದ ಕುರಿತಂತೆ ರಾಜಕಾರಣಿಗಳು ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ನಗರದಲ್ಲಿ ನಡೆದ ಸಭೆಯೊಂದಕ್ಕಾಗಿ ಸರ್ಕಾರದಿಂದ 5 ಕೋಟಿ ರೂ. ಪಡೆದಿದ್ದೇನೆ. ಲಿಂಗಾಯಿತ ಪರ ಕಾರ್ಯಕ್ರಮ ನಡೆಸುತ್ತಿದ್ದೇನೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸತ್ಯಕ್ಕೆ ದೂರವಾದ ಮಾತು. ರಾಜಕಾರಣಿಗಳು, ಸಾರ್ವಜನಿಕರು, ಜನಪ್ರತಿನಿಧಿಗಳಾದಿಯಾಗಿ ಯಾರಿಂದಲೂ ನಯಾಪೈಸೆ ಪಡೆದಿಲ್ಲ ಎಂದು ಹೇಳಿದರು.
ನಮ್ಮ ಹಿರಿಯರು ಹೊಸ ಮಠಕ್ಕೆ ಮಾಡಿಟ್ಟ ಆಸ್ತಿಯಲ್ಲಿಯೇ ಎಲ್ಲವನ್ನೂ ನಿಭಾಯಿಸಿದ್ದೇನೆ. ನಯಾಪೈಸೆ ಹೆಚ್ಚಾಗಿ ಪಡೆದಿಲ್ಲ. ಮಾಡಿರುವ ಆರೋಪಗಳಿಗೆ ಪುರಾವೆ ಇದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

Facebook Comments

Sri Raghav

Admin