ನಾನೂ ಕೂಡ ಡಾ.ರಾಜ್‍ ಅವರ ಅಭಿಮಾನಿ : ಮೇಯರ್ ಸಂಪತ್‍ರಾಜ್

ಈ ಸುದ್ದಿಯನ್ನು ಶೇರ್ ಮಾಡಿ

Sampt-Raj--013

ಬೆಂಗಳೂರು, ಅ.1- ನಾನೂ ಕೂಡ ಡಾ.ರಾಜ್‍ಕುಮಾರ್ ಅಭಿಮಾನಿ ನನ್ನ ಕಾಲೇಜು ದಿನಗಳಲ್ಲಿ ಅವರ ಚಿತ್ರಗಳನ್ನು ನೋಡಿ ಬೆಳೆದೆ. ಅವರ ಸರಳತೆ ನನಗೆ ಆದರ್ಶವಾಗಿದೆ ಎಂದು ಮೇಯರ್ ಸಂಪತ್‍ರಾಜ್ ತಿಳಿಸಿದರು. ಇಂದು ಬೆಳಗ್ಗೆ ಡಾ.ರಾಜ್ ಪುಣ್ಯಭೂಮಿಗೆ ಭೇಟಿ ನೀಡಿ ಮಾತನಾಡಿದ ಅವರು, ಕನ್ನಡ ಭಾಷೆ, ನೆಲ-ಜಲದ ಬಗ್ಗೆ ಡಾ.ರಾಜ್‍ಕುಮಾರ್ ಅವರಿಗಿದ್ದ ಅಭಿಮಾನ ಮತ್ತು ಅವರು ರೂಢಿಸಿಕೊಂಡಿದ್ದ ಜೀವನ ಶೈಲಿ ಮತ್ತು ಗುಣಗಳು ಯಾರೂ ಮರೆಯುವಂತಿಲ್ಲ. ಅವರ ಸರಳತೆಯನ್ನು ನಾನೂ ಕೂಡ ಹತ್ತಿರದಿಂದ ನೋಡಿದ್ದೇನೆ. ಅದು ನನಗೆ ಸ್ಫೂರ್ತಿ ನೀಡಿದೆ ಎಂದು ಹೇಳಿದರು.

Facebook Comments

Sri Raghav

Admin