ನಾಪತ್ತೆಯಾಗಿದ್ದ ಬಾಲಕಾರ್ಮಿಕರ ಶವವಾಗಿ ಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

ತುಮಕೂರು, ಅ.20-ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬಾಲಕಾರ್ಮಿಕ ಶವವಾಗಿ ಪತ್ತೆಯಾಗಿದ್ದು, ಹಲವಾರು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ಮೂಲತಃ ಮಧುಗಿರಿ ತಾಳೂಖಿನ ಬಡವನಹಳ್ಳಿ ಹೋಬಳಿಯ ಹೊಸಹಳ್ಳಿ ಗ್ರಾಮದ ನರಸಿಂಹಮೂರ್ತಿ ಎಂಬುವರ ಮಗ ಜಗದೀಶ್ (16) ಸಾವನ್ನಪ್ಪಿರುವ ಬಾಲಕಾರ್ಮಿಕ.ಬನಶಂಕರಿ ಕಾಟನ್‍ಬಾಕ್ಸ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಜಗದೀಶ್ ಕಳೆದ ಮೂರು ದಿನಗಳ ಹಿಂದೆ ನಾಪತ್ತೆಯಾಗಿದ್ದನು. ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಈ ನಡುವೆ ತುಮಕೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಯಲ್ಲಾಪುರ ಬಳಿಯ ಬಂಧೀಖಾನೆ ಸಮೀಪದ ಕಟ್ಟೆಯಲ್ಲಿ ಬಾಲಕನ ಶವ ಪತ್ತೆಯಾಗಿದೆ.ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಕಟ್ಟೆ ಬಳಿ ದೌಡಾಯಿಸಿ ನೋಡಿದಾಗ ಈತ ಜಗದೀಶ ಎಂದು ಗುರುತಿಸಿದ್ದಾರೆ.

ಕೂಡಲೇ ಸಬ್‍ಇನ್ಸ್‍ಪೆಕ್ಟರ್ ಕಾಂತರಾಜು ಅವರಿಗೆ ವಿಷಯ ತಿಳಿಸಿದ್ದಾರೆ. ಶವ ಪತ್ತೆಯಾಗಿ 3 ಗಂಟೆಯಾದರೂ ಪೊಲೀಸರು ಸ್ಥಳಕ್ಕಾಗಮಿಸಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.ಬನಶಂಕರಿ ಕಾಟನ್ ಬಾಖ್ಸ್ ಕಾರ್ಖಾನೆಯ ಮ್ಯಾನೇಜರ್ ಅಶೋಕ್ ಎಂಬುವರು ಆರು ತಿಂಗಳ ಹಿಂದೆ ಜಗದೀಶ್ ಪೋಷಕರ ಮನವೊಲಿಸಿ ಈತನನ್ನು ಕೆಲಸಕ್ಕೆ ಸೇರಿಸಿಕೊಂಡಿದ್ದರು. ಆದರೆ ಸಂಬಳ ಸರಿಯಾಗಿ ಕೊಡುತ್ತಿರಲಿಲ್ಲ ಎಂದು ಬಾಲಕನ ಚಿಕ್ಕಮ್ಮ ಪ್ರೇಮಾ ಎಂಬುವರು ಆರೋಪಿಸಿದ್ದಾರೆ. ನಾಪತ್ತೆಯಾಗಿದ್ದ ಬಾಲಕ ಇದೀಗ ಶವವಾಗಿ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಬಗ್ಗೆ ಗ್ರಾಮಾಂತರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin