ನಾಪತ್ತೆಯಾಗಿದ್ದ ಮಹಿಳೆಯರು ಶವವಾಗಿ ಪತ್ತೆ, ಕೊಲೆ ಶಂಕೆ

ಈ ಸುದ್ದಿಯನ್ನು ಶೇರ್ ಮಾಡಿ

dead-women

ಬೆಳಗಾವಿ,ಮೇ 21-ನಿಗೂಢವಾಗಿ ನಾಪತ್ತೆಯಾಗಿದ್ದ ಮಹಿಳೆರಿಬ್ಬರು ಶವವಾಗಿ ಪತ್ತೆಯಾಗಿದ್ದು , ಇದರಿಂದಾಗಿ ಇಡೀ ಜಿಲ್ಲೆಯ ಜನರೇ ಮೆಚ್ಚಿಬಿದ್ದಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಗೋಡಚ್ಚಿ ಬೆಟ್ಟದಲ್ಲಿ ರೇಣುಕಾ ತಳವಾರ(40) ಹಾಗೂ ಸಾಂವಕ್ಕ ತಳವಾರ(38) ಅವರ ಶವಗಳು ಪತ್ತೆಯಾಗಿದೆ.   ಕಳೆದ ಏಪ್ರಿಲ್ 8ರಂದು ರಾಮದುರ್ಗ ತಾಲ್ಲೂಕಿನ ಗೊರಗನೂರಿನವರಾದ ಇವರು ಸಂಬಂಧಿಕರೊಬ್ಬರ ತಿಥಿ ಕಾರ್ಯದಲ್ಲಿ ತೆರಳಿದ್ದಾಗ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದರು. ಈ ಬಗ್ಗೆ ಮುರುಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಆದರೆ ಒಂದು ತಿಂಗಳ ನಂತರ ಶವ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.   ಹಣಕಾಸಿನ ವೈಷಮ್ಯದಲ್ಲಿ ಈ ಕೊಲೆ ನಡೆದಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿರುವ ಕಟಕೋಳ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ. ಸಂಬಂಧಿಕರೇ ಈ ಕೊಲೆ ಮಾಡಿ ಬೆಟ್ಟದ ಪ್ರದೇಶದಲ್ಲಿ ಎಸೆದು ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದು , ಒಟ್ಟಾರೆ ನಿಗೂಢವಾಗಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆಯರ ಹತ್ಯೆ ಭಾರೀ ಸುದ್ದಿಯಾಗಿದೆ. ಹೆಚ್ಚಿನ ವಿಚಾರಣೆ ನಡೆಯುತ್ತಿದ್ದು, ನಿಖರ ಕಾರಣಗಳು ತಿಳಿದುಬರಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin