ನಾಪತ್ತೆಯಾಗಿದ್ದ ಯುವತಿಯ ತಲೆಬುರುಡೆ ಮತ್ತು ದೇಹದ ಭಾಗಗಳು ಪತ್ತೆ..!

ಈ ಸುದ್ದಿಯನ್ನು ಶೇರ್ ಮಾಡಿ

Girl--01

ಚಿಕ್ಕಬಳ್ಳಾಪುರ, ಮಾ.31- ನಾಪತ್ತೆಯಾಗಿದ್ದ ಯುವತಿಯೊಬ್ಬಳ ತಲೆಬುರುಡೆ ಹಾಗೂ ಕೈಕಾಲುಗಳ ಮೂಳೆ ಗೌರಿಬಿದನೂರು ತಾಲ್ಲೂಕಿನ ಹನುಮೇನಹಳ್ಳಿಯ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದ್ದು , ಸ್ಥಳೀಯರು ವಿಷಯ ತಿಳಿದು ಬೆಚ್ಚಿ ಬಿದ್ದಿದ್ದಾರೆ. ನಿನ್ನೆ ಮಧ್ಯಾಹ್ನ ಅರಣ್ಯ ಪ್ರದೇಶ ಮಾರ್ಗವಾಗಿ ಸಾಗುತ್ತಿದ್ದ ಗ್ರಾಮಸ್ಥರೊಬ್ಬರಿಗೆ ಮನುಷ್ಯನ ಮೂಳೆ ಬುರುಡೆಗಳನ್ನು ನೋಡಿ ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಗೆ ಬಂದ ಸಿಬ್ಬಂದಿಗಳಿಗೆ ಅಕ್ಕಪಕ್ಕದಲ್ಲೇ ವ್ಯಾನಿಟಿ ಬ್ಯಾಗ್ , ಚಪ್ಪಲಿ ಮತ್ತಿತರ ವಸ್ತುಗಳು ಸಿಕ್ಕಿವೆ.

ಮೃತ ದೇಹ ಯುವತಿಯದ್ದೆಂದು ತಿಳಿದ ನಂತರ ತನಿಖೆ ಕಾರ್ಯ ಕೈಗೊಂಡಾಗ ರಾತ್ರಿ ಇದು ಅನಿತಾ ಎಂಬ ಯುವತಿಯದ್ದು ಎಂದು ಪತ್ತೆ ಹಚ್ಚಲಾಗಿದೆ. ಗೌರಿಬಿದನೂರಿನ ಗಾರ್ಮೆಂಟ್ಸ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅನಿತಾ ಮಾ.4ರಂದು ನಿಗೂಢವಾಗಿ ಅನಿತಾ ಕಾಣೆಯಾಗಿದ್ದರು. ಪ್ರಕರಣವನ್ನು ಗಂಭೀರವನ್ನು ಪರಿಗಣಿಸಿದ್ದ ಮಂಚೇನಹಳ್ಳಿ ಠಾಣೆ ಪೊಲೀಸರು ಆಕೆಯ ಮೊಬೈಲ್ ಸಂಪರ್ಕ ಸೇರಿದಂತೆ ಆಕೆಯ ಸಹಪಾಠಿಗಳನ್ನು ಕೂಡ ವಿಚಾರಣೆಗೊಳಪಡಿಸಿ ಮಾಹಿತಿ ಕಲೆ ಹಾಕಿದರು. ಆದರೆ ಏನೂ ಪ್ರಯೋಜನವಾಗಿರಲಿಲ್ಲ.

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಶಕ್ಕೆ ಪಡೆದಿರುವ ಅಸ್ತಿಪಂಜರಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು , ಪ್ರಕರಣದ ನಿಗೂಢತೆಯನ್ನು ಬಯಲಿಗೆಳೆಯಲು ವಿಶೇಷ ತಂಡವನ್ನು ಕೂಡ ರಚಿಸಲಾಗಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin