ನಾಮಪತ್ರ ಸಲ್ಲಿಸಲು ಹೊರಟ್ಟಿದ್ದ ಗ್ರಾ.ಪಂ ಉಪಾಧ್ಯಕ್ಷ ಅಭ್ಯರ್ಥಿಯ ಅಪಹರಣ

ಈ ಸುದ್ದಿಯನ್ನು ಶೇರ್ ಮಾಡಿ

Kidnap-001

ಹಾರೋಹಳ್ಳಿ,ನ.4-ನಾಮಪತ್ರ ಸಲ್ಲಿಸಲು ಹೊರಟ್ಟಿದ್ದ ಗ್ರಾಮ ಪಂಚಾಯ್ತಿಯ ಉಪಾಧ್ಯಕ್ಷ ಅಭ್ಯರ್ಥಿಯನ್ನು ದುಷ್ಕರ್ಮಿಗಳು ಅಪಹರಿಸಿರುವ ಘಟನೆ ರಾಮನಗರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.  ಇಂದು ಹಾರೋಹಳ್ಳಿ ಗ್ರಾಪಂನಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಗ್ರಾಪಂ ಸದಸ್ಯ ಹಾಗೂ ಉಪಾಧ್ಯಕ್ಷ ಅಭ್ಯರ್ಥಿ ಜೆಡಿಎಸ್‍ನ ಎಚ್.ಡಿ.ಮಹದೇವಯ್ಯ ಮತ್ತಿತರರು ರಾಮನಗರ ಬಳಿ ಇರುವ ರೆಸಾರ್ಟ್‍ನಿಂದ ಕಾರಿನಲ್ಲಿ ಹೊರಟ್ಟಿದ್ದಾಗ, ಅಪರಿಚಿತರು ಅಡ್ಡಗಟ್ಟಿ ಅವರನ್ನು ಕಿಡ್ನಾಪ್ ಮಾಡಿದ್ದಾರೆ ಎಂದು ಹೇಳಲಾಗಿದೆ.

ಮಹದೇವಯ್ಯ, ಶ್ರೀಧರ್‍ಮೂರ್ತಿ, ಬಾಲಾಜಿ ಹಾಗೂ ಅವರ ಮೂರು ವರ್ಷದ ಮಗು ದೀಕ್ಷೀತ್ ಗೌಡ, ಕಾರು ಚಾಲಕ ಸೇರಿದಂತೆ ಐವರು ಇನ್ನೋವಾ ಕಾರಿನಲ್ಲಿ ಹಾರೋಹಳ್ಳಿಗೆ ತೆರಳುತ್ತಿದ್ದಾಗ ಅಲ್ಲಿಗೆ ಬಂದ ದುಷ್ಕರ್ಮಿಗಳು ಅವರನ್ನು ಬೆದರಿಸಿ ಅಪಹರಣ ಮಾಡಿದ್ದಾರೆ.  ಗ್ರಾಪಂ ಕಾಂಗ್ರೆಸ್ ಅಧ್ಯಕ್ಷ ಗುರುಪ್ರಸಾದ್ ಮತ್ತು ಸದಸ್ಯ ವೆಂಕಟೇಶ್ ಅವರುಗಳೇ ಎಚ್.ಡಿ.ಮಹದೇವಯ್ಯ ಅವರನ್ನು ಅಪಹರಣ ಮಾಡಿದ್ದಾರೆ ಎಂದು ಆರೋಪಿಸಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಮಲ್ಲಯ್ಯ ರಾಮನಗರ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಾರೆ.  ಅಭ್ಯರ್ಥಿಯ ಅಪಹರಣ ಹಿನ್ನೆಲೆಯಲ್ಲಿ ಹಾರೋಹಳ್ಳಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ಗ್ರಾಮದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin