ನಾಯಕನಾಗಬೇಕೆಂದು ನಮ್ಮ ಪಕ್ಷಕ್ಕೆ ಬರಬೇಡಿ : ಉಪೇಂದ್ರ

ಈ ಸುದ್ದಿಯನ್ನು ಶೇರ್ ಮಾಡಿ

Upendra-PRajaakiya--01

ಮೈಸೂರು,ಡಿ.1-ಜನಸೇವೆ ಮಾಡುವವರಿಗೆ ನಮ್ಮ ಪಕ್ಷದಲ್ಲಿ ಪ್ರಮುಖ ಆದ್ಯತೆ ಎಂದು ಕರ್ನಾಟಕ ಪ್ರಜ್ಞಾವಂತ ಜನತಾಪಕ್ಷ(ಕೆಪಿಜೆಪಿ) ಸಂಸ್ಥಾಪಕ ಹಾಗೂ ನಟ ಉಪೇಂದ್ರ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಯಕನಾಗಬೇಕೆಂದು ನಮ್ಮ ಪಕ್ಷಕ್ಕೆ ಬರಬೇಡಿ, ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ಕೆಲಸ ಮಾಡುವಂಥವರು ಬನ್ನಿ ಎಂದು ಕರೆ ನೀಡಿದರು. ಕೆಪಿಜೆಪಿ ಪಕ್ಷವು ಸತ್ಯ ಹೇಳುವ ಪಕ್ಷವಾಗಿದ್ದು, ಇದರಲ್ಲಿ ಯಾವುದೇ ಥ್ರಿಲ್ಲಿಂಗ್, ಸಸ್ಪೆಂನ್ಸ್ ಇರುವುದಿಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ನಮ್ಮ ಪಕ್ಷದಲ್ಲಿ ಅಭ್ಯರ್ಥಿಯಾಗಬೇಕಾದರೆ ತಮ್ಮ ಕ್ಷೇತ್ರದಲ್ಲಿ ಯಾವ ರೀತಿ ಕೆಲಸ ಮಾಡಿದ್ದಾರೆ ಎಂಬುದನ್ನು ಗಮನಿಸಿ ಅವರ ಅಭಿವೃದ್ದಿ ಕಾರ್ಯಗಳನ್ನು ನೋಡಿ ಅಭ್ಯರ್ಥಿ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದರು.  ನೀವು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೀರಾ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಇನ್ನು ನಾನು ಯಾವ ಕ್ಷೇತ್ರದಿಂದ ಎಂಬುದನ್ನು ನಿರ್ಧರಿಸಿಲ್ಲ. ನಾನು ಸ್ಪರ್ಧೆ ಮಾಡಬೇಕೆಂಬುದೂ ಇಲ್ಲ. ಉತ್ತಮವಾಗಿ ಕೆಲಸ ಮಾಡುವ ಅಭ್ಯರ್ಥಿಗಳನ್ನು ಗಣಕ್ಕಿಳಿಸುವುದಾಗಿ ತಿಳಿಸಿದರು.

ನಿಮ್ಮ ಪತ್ನಿ ಪ್ರಿಯಾಂಕ ಅವರು ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರಾ ಎಂಬ ಪ್ರಶ್ನೆಗೆ, ಅವರು ನನ್ನ ಪತ್ನಿ. ಪ್ರಿಯಾಂಕ ಒಬ್ಬಳು ಸ್ಟಾರ್ ನಟಿಯಾಗಿ ಅಥವಾ ನನ್ನ ಪತ್ನಿ ಎಂಬುದಕ್ಕೆ ಅಭ್ಯರ್ಥಿಯನ್ನಾಗಿ ಮಾಡುವುದಿಲ್ಲ. ಜನಸೇವೆ ಮಾಡಿದರೆ ಅಭ್ಯರ್ಥಿಯಾಗಿ ಕಣಕ್ಕಿಳಿಸುವುದಾಗಿ ತಿಳಿಸಿದರು. ಚಿತ್ರರಂಗದಲ್ಲಿ ನಿಮ್ಮ ಪಕ್ಷಕ್ಕೆ ಬೆಂಬಲವಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಶಿವರಾಜ್‍ಕುಮಾರ್, ಸುದೀಪ್, ಯಶ್ ಸೇರಿದಂತೆ ಹಲವರು ಬೆಂಬಲ ನೀಡಿದ್ದಾರೆ. ಆದರೆ ಪಕ್ಷ ಸೇರುತ್ತೇವೆ ಎಂದೂ ಹೇಳಿಲ್ಲ ಎಂದು ತಿಳಿಸಿದರು.

Facebook Comments

Sri Raghav

Admin