ನಾಯರ್, ಅಬ್ಬಾಸ್ ಅರ್ಧಶತಕ : ಬೃಹತ್ ಇನ್ನಿಂಗ್ಸ್ ಮುನ್ನಡೆಯತ್ತ ಕರ್ನಾಟಕ
ಕೋಲ್ಕತ್ತಾ,ಅ.21- ಮೊದಲ ದಿನ ದೆಹಲಿ ಬೌಲರ್ಗಳ ವಿರುದ್ಧ ವಿಜೃಂಭಿಸಿದ್ದ ಕರ್ನಾಟಕದ ಬ್ಯಾಟ್ಸ್ಮನ್ಗಳು ಇಂದು ಕೂಡ ವೇಗದ ಆಟಕ್ಕೆ ಮುಂದಾಗಿದ್ದು ಬೃಹತ್ ಇನ್ನಿಂಗ್ಸ್ ಮುನ್ನಡೆಯತ್ತ ದಾಪುಗಾಲಿಟ್ಟಿದೆ.ಮೊದಲ ದಿನದ ಅಂತ್ಯಕ್ಕೆ 136 ರನ್ಗಳ ಗಳಿಸಿದ್ದ ಕರುಣ್ ನಾಯರ್ ಪಡೆ ಇಂದು ಆರಂಭ ದಿಂದಲೂ ದೆಹಲಿ ಬೌಲರ್ಗಳನ್ನು ಕಾಡಿದರು.ನೈಟ್ ವಾಚ್ಮನ್ ರೂಪ ದಲ್ಲಿ ಬಂದಿದ್ದ ಅಭಿಮನ್ಯು ಮಿಥುನ್ ಇಂದು 9 ರನ್ಗಳನ್ನು ಕಲೆ ಹಾಕುವಷ್ಟರಲ್ಲಿ ಇಶಾಂತ್ ಶರ್ಮಾರ ಬೌಲಿಂಗ್ನಲ್ಲಿ ಔಟಾದರು.
ಕರುಣ್- ಅಬ್ಬಾಸ್ ಜುಗಲ್ಬಂದಿ:
ಅಭಿಮನ್ಯು ಮಿಥುನ್ ಔಟಾಗುತ್ತಿದ್ದಂತೆ ಕ್ರೀಸ್ಗೆ ಇಳಿಸಿದ ಕುನ್ನಿನ್ ಅಬ್ಬಾಸ್ ನಾಯಕ ಕರುಣ್ನಾಯರ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟುವ ಕಾರ್ಯವನ್ನು ಮಾಡಿದರು.ಈ ಜೋಡಿಯು 5 ವಿಕೆಟ್ಗೆ 91 ರನ್ಗಳ ಜೊತೆಯಾಟ ನೀಡಿದ್ದಾಗ ನಾಯಕ ಕರುಣ್ನಾಯರ್ ( 53 ರನ್, 5 ಬೌಂಡರಿ, 2 ಸಿಕ್ಸರ್)ವರುಣ್ ಸುಧ್ ಅವರ ಬೌಲಿಂಗ್ನಲ್ಲಿ ಅವರಿಗೆ ಕ್ಯಾಚ್ ನೀಡಿ ಹೊರ ನಡೆದರು.ಕರುಣ್ನಾಯರ್ ವಿಕೆಟ್ ಕೈಚೆಲ್ಲಿದರೂ ಕೂಡ ತಮ್ಮ ಆಕ್ರಮಣಕಾರಿ ಆಟವನ್ನು ಮುಂದುವರಿಸಿದ ಅಬ್ಬಾಸ್ ಅರ್ಧಶತಕವನ್ನು ಪೂರೈಸಿದರು.ಈ ನಡುವೆ ವರುಣ್ಸುಧ್ರ ಬೌಲಿಂಗ್ ಗತಿಯನ್ನು ಅರಿಯದ ಅಬ್ಬಾಸ್ (52 ರನ್, 4 ಬೌಂಡರಿ) ಔಟಾಗಿ ಪೆವಿಲಿಯನ್ನತ್ತ ಹೆಜ್ಜೆ ಹಾಕಿದರು.ಭೋಜನ ವಿರಾಮದ ನಂತರ ಸ್ಟುವರ್ಟ್ ಬಿನ್ನಿ (32 ರನ್, 4 ಬೌಂಡರಿ) ಟಾಕೋಸ್ಗೆ ಕ್ಯಾಟ್ ಆ್ಯಂಡ್ ಬೌಲ್ಡ್ ಆದರು.ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆಗೆ ಕರ್ನಾಟಕ 7 ವಿಕೆಟ್ಗಳನ್ನು ಕಳೆದುಕೊಂಡು 297 ರನ್ಗಳನ್ನು ಗಳಿಸಿತ್ತು. 19 ರನ್ ಗಳಿಸಿದ್ದ ಜಿ.ಎಂ.ಗೌತಮ್ ಹಾಗೂ 3 ರನ್ ಗಳಿಸಿರುವ ಶ್ರೇಯಾಸ್ ಗೋಪಾಲ್ ಕ್ರೀಸ್ನಲ್ಲಿದ್ದರು.
► Follow us on – Facebook / Twitter / Google+