ನಾರಾಯಣಗಂಜ್ ಹತ್ಯಾಕಾಂಡ ; 26 ಮಂದಿಗೆ ಮರಣದಂಡನೆ ವಿಧಿಸಿದ ಬಾಂಗ್ಲಾ ಕೋರ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Narayana-ganj

ಢಾಕಾ, ಜ.16-ನಾರಾಯಣಗಂಜ್ ನರಮೇಧಕ್ಕಾಗಿ ಮಾಜಿ ನಗರಸಭಾ ಸದಸ್ಯ ಸೇರಿದಂತೆ 26 ಮಂದಿಗೆ ಬಾಂಗ್ಲಾದೇಶದ ನ್ಯಾಯಾಲಯವೊಂದು ಇಂದು ಮರಣದಂಡನೆ ವಿಧಿಸಿದೆ. 2014ರಲ್ಲಿ ನಡೆದ ಈ ಘೋರ ಹತ್ಯಾಕಾಂಡದಲ್ಲಿ ನಾರಾಯಣ್‍ಗಂಜ್ ನಗರಸಭಾ ಸದಸ್ಯ ನರ್ಜುಲ್ ಇಸ್ಲಾಂ ಮತ್ತು ವಕೀಲ ಚಂದನ್ ಕುಮಾರ್ ಸರ್ಕಾರ್ ಸೇರಿದಂತೆ ಏಳು ಜನರನ್ನು ಕಗ್ಗೊಲೆ ಮಾಡಲಾಗಿತ್ತು.  ನಾರಾಯಣಗಂಜ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಈ ಪ್ರಕರಣದ 26 ಆಪಾದಿತರಿಗೆ ಮರಣದಂಡನೆ ವಿಧಿಸಿದ್ದಾರೆ.  ನಾರಾಯಣಗಂಜ್ ಮಾಜಿ ಕೌನ್ಸಿಲರ್ ನೂರ್ ಹುಸೇನ್ ಮತ್ತು ಬಾಂಗ್ಲಾದೇಶ್ ಸೇನೆಯ ಮಾಜಿ ಲೆಫ್ಟಿನೆಂಟ್ ಜನರಲ್ ತಾರಿಕ್ ಸೈಯದ್ ಗಲ್ಲು ಶಿಕ್ಷೆಗೆ ಗುರಿಯಾಗಿರುವವರಲ್ಲಿ ಸೇರಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin