ನಾಲೆಗಳಿಗೆ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Hemavathi

ಕೆ.ಆರ್.ಪೇಟೆ,ಅ.6- ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಿಸಿರುವ ಸುಮಾರು 150 ವರ್ಷಗಳ ಹಳೆಯ ಅಣೆಕಟ್ಟೆಗಳಾದ ತಾಲೂಕಿನ ಮಂದಗೆರೆ ಮತ್ತು ಹೇಮಗಿರಿ ಅಣೆಕಟ್ಟೆಗಳ ನಾಲೆಗಳಿಗೆ ತಕ್ಷಣ ನೀರು ಹರಿಸಿ ಒಣಗುತ್ತಿರುವ ಬೆಳೆಗಳನ್ನು ಸಂರಕ್ಷಣೆ ಮಾಡಬೇಕೆಂದು ಒತ್ತಾಯಿಸಿ ಈ ಭಾಗದ ಅಚ್ಚುಕಟ್ಟು ರೈತರು ಪಟ್ಟಣದ ಹೇಮಾವತಿ ನೀರಾವರಿ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು. ತಾಲೂಕು ಹೇಮಾವತಿ ಅಚ್ಚುಕಟ್ಟು ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಎಸ್.ಆರ್.ನವೀನ್‍ಕುಮಾರ್, ಸಾಧುಗೋನಹಳ್ಳಿ ಎಸ್.ಜೆ.ಮಂಜೇಗೌಡ, ಪಾಂಡು, ಪ್ರಭಾಕರ್, ಯೋಗೇಶ್, ನಾಟನಹಳ್ಳಿ ಜಗದೀಶ್, ವರದರಾಜು, ಧರ್ಮರಾಜ್ ಮತ್ತಿತರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಕ್ಷಣ ಕಾಲುವೆಗಳಿಗೆ ನೀರು ಹರಿಸಬೇಕೆಂದು ಆಗ್ರಹಿಸಿದರು.

ನಮಗೆ ಕೆ.ಆರ್.ಎಸ್.ಅಣೆಕಟ್ಟೆ ಕಟ್ಟುವಾಗ ನೀರು ಹಂಚಿಕೆ ಕರಾರಿನಲ್ಲಿ ನೀರು ಹಂಚಿಕೆ ಮಾಡಲಾಗಿದೆ. ಆದರೆ ಅಧಿಕಾರಿಗಳು ಇದನ್ನು ಮರೆಮಾಚಿ ನೀರನ್ನು ಬಿಡದೆ ರೈತರಿಗೆ ವಂಚನೆ ಮಾಡುತ್ತಿದ್ದಾರೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದು ತಿಂಗಳು ಸುಮಾರು 20 ದಿನಗಳ ಕಾಲ ನೀರು ಹರಿಸಿದ ಸಂದರ್ಭದಲ್ಲಿ ರೈತರು ಭತ್ತ, ಕಬ್ಬು ಮತ್ತಿತರರ ಬೆಳೆಗಳನ್ನು ನಾಟಿ ಮಾಡಿರುತ್ತಾರೆ. ಹಾಗಾಗಿ ಈ ಬೆಳೆಗಳು ನೀರಿಲ್ಲದೆ ಒಣಗಿ ಹೋಗುತ್ತಿವೆ. ತಕ್ಷಣ ಈ ನಾಲೆಗಳಿಗೆ ನೀರು ಹರಿಸುವ ಮೂಲಕ ರೈತರ ಬೆಳೆಗಳನ್ನು ಉಳಿಸಿಕೊಡಬೇಕೆಂದು ಪ್ರತಿಭಟನಾಕಾರರು ಅಧಿಕಾರಿಗಳನ್ನು ಮನವಿ ಮಾಡಿದರು.ರೈತರು ಪ್ರತಿಭಟನೆ ಮಾಡುತ್ತಿರುವ ವಿಷಯ ತಿಳಿದ ನೀರಾವರಿ ಅಧಿಕಾರಿಗಳು ದೂರವಾಣಿ ಮೂಲಕ ಒಂದೆರಡು ದಿನಗಳಲ್ಲಿ ನದಿಗೆ ಹೆಚ್ಚಿನ ನೀರು ಬಿಡಿಸಿಕೊಂಡು ಕಾಲುವೆಗಳಿಗೆ ನೀರು ಹರಿಸುವ ಭರವಸೆ ನೀಡಿದ ನಂತರ ತಮ್ಮ ಪ್ರತಿಭಟನೆಯನ್ನು ವಾಪಸ್ ಪಡೆದರು.

 

► Follow us on –  Facebook / Twitter  / Google+

Facebook Comments

Sri Raghav

Admin