ನಾಲೆಗೆ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

KRS

ಮಳವಳ್ಳಿ, ಆ.26- ನಾಲೆಗೆ ನೀರು ಬಿಡುವಂತೆ ಮಳವಳ್ಳಿ ಹೊರವಲಯದ ಕಾಗೇಪುರದಲ್ಲಿ ಇರವು ಕಾವೇರಿ ನೀರಾವರಿ ನಿಗಮದ ಕಚೇರಿಯ ಮುಂದೆ ರೈತರರು ಹಾಗೂ ಕೆಪಿಆರ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.  5ರಿಂದ 13 ತೂಬಿನ ರೈತರ ಹೋರಾಟ ಸಮಿತಿ ವತಿಯಿಂದ ನಡೆದ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಪುಟ್ಟಮಾದು, 5 ರಿಂದ 13 ತೂಬಿನ ವ್ಯಾಪ್ತಿಯ ರೈತರು ನಿಗಮವು ವ್ಯವಸಾಯಕ್ಕೆ ಕಟ್ಟು ನೀರು ಪದ್ಧ್ದತಿಯಲ್ಲಿ ನೀರು ಬಿಡುವುದಾಗಿ ಆರಂಭದಲ್ಲಿ ಹೊರಡಿಸಿದ ಪ್ರಕಣೆಯನ್ನು ಗಮನಿಸಿ ನೀರು ಸಿಗುತ್ತದೆಂಬ ನಂಬಿಕೆಯಿಂದ ಹತ್ತಾರು ಸಾವಿರ ರೂ. ಖರ್ಚು ಮಾಡಿ ಕಬ್ಬು, ಭತ್ತದ ಸಸಿ ಮಡಿ ಮಾಡಿಕೊಂಡಿರುತ್ತಾರೆ.

ಪ್ರಸ್ತುತ ನಿಗಗವು ಏಕಾ ಏಕಿ ವ್ಯಾವಸಾಯಕ್ಕೆ ನೀರು ಕೊಡಲು ಸಾಧ್ಯವಿಲ್ಲವೆಂದು ಹೇಳಿರುವುದರಿಂದ ಈಭಾಗದ ಈಗಾಗಲೇ ಬೆಳೆದು ನಿಂತಿರುವ ರೇಷ್ಮ, ಕಬ್ಬು, ಸರ್ವೆ, ನೀಲಗಿರಿ, ತೆಂಗು ಇತರೆ ಬೆಳೆಗಳು ನೀರಿಲ್ಲದೆ ಒಣಗಿ ಲಕ್ಷಾಂತರ ರೂಗಳು ನಷ್ಟವಾಗುತ್ತದೆಂಬ ಆತಂಕಕ್ಕೆ ರೈತರು ಸಿಲುಕಿದ್ದಾರೆ ಎಂದು ಹೇಳಿದರು.  ಈ ಧೋರಣೆಯಿಂದ ವ್ಯವಸಾಯವನ್ನೇ ನಂಬಿ ಬದುಕುವ ರೈತರು ಆತ್ಮಹತ್ಯೆಯ ದಾರಿ ಹಿಡಿಯಬೇಕಾಗಿದೆ ಆದ್ದರಿಂದ ತಕ್ಷಣದಲ್ಲಿ ಈಭಾಗದ ರೈತರ ಜಮೀನಿಗೆ ಮತ್ತು ಕರೆಕಟ್ಟೆಗಳಿಗೆ ನೀರು ಬಿಡಬೇಕು ಎಂದರು.ಗ್ರಾ.ಪಂ. ಅಧ್ಯಕ್ಷ ನಾಗರಾಜು, ಮಾಜಿ ಅಧ್ಯಕ್ಷ ಕೆಂಪರಾಜು, ಕೃಷಿ ಕೂಲಿಕಾರರ ಸಂಘದ ಮುಖಂಡ ಪುಟ್ಟಮಾದೇಗೌಡ, ಮುಖಂಡರಾದ ಕೃಷ್ಣ, ಶಿವಕುಮಾರ್, ಶಿವಮಲ್ಲಯ್ಯ, ಬಸವರಾಜು ಇದ್ದರು.

► Follow us on –  Facebook / Twitter  / Google+

Facebook Comments

Sri Raghav

Admin