ನಾಲೆಯಲ್ಲಿ 10 ಅಡಿ ಉದ್ದದ ಮೊಸಳೆ ಮೊಸಳೆ ಪ್ರತ್ಯಕ್ಷ

ಈ ಸುದ್ದಿಯನ್ನು ಶೇರ್ ಮಾಡಿ
cro
ಸಾಂಧರ್ಭಿಕ ಚಿತ್ರ

ಹುಣಸೂರು,ಡಿ.4- ತಾಲೂಕಿನ ಹನಗೋಡು ಅಣೆಕಟ್ಟು ಮುಖ್ಯ ನಾಲೆಯಲ್ಲಿ ಸುಮಾರು 10 ಅಡಿ ಉದ್ದದ ಮೊಸಳೆ ಪತ್ತೆಯಾಗಿದ್ದು, ಜನರಲ್ಲಿ ಆತಂಕ ಸೃಷ್ಟಿಸಿತು. ಹನಗೋಡು ಅಣೆಕಟ್ಟೆಯ ಮುಖ್ಯ ನಾಲೆ ಬಳಿ ಬೃಹತ್ ಗಾತ್ರದ ಮೊಸಳೆಯೊಂದು ಕಾಣಿಸಿಕೊಂಡು ಸ್ಥಳೀಯರಲ್ಲಿ ಆತಂಕ ಉಂಟುಮಾಡಿತ್ತು. ಕೂಡಲೇ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಈ ಮೊಸಳೆ ನೋಡಲು ಭಯಾನಕವಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಮೊದಲು ಮೊಸಳೆಯ ಸುತ್ತ ಬಲೆ ಬೀಸಿ ನೀರಿನಿಂದ ಮೇಲೆಳೆದರು. ನಂತರ ಅದರ ಮುಖಕ್ಕೆ ಬಟ್ಟೆ ಹಾಗೂ ಗೋಣಿ ಚೀಲದಿಂದ ಬಾಯಿ ಕಟ್ಟಿ ಲಾರಿ ಮೇಲೇರಿಸಲಾಯಿತು.

ಮೊಸಳೆಗೆ ಬಲೆ ಹಾಕಲು ಆರಂಭಿಸಿದಾಗಿನಿಂದ ಸಾಕಷ್ಟು ಪ್ರತಿರೋಧವೊಡ್ಡಿದ ಮೊಸಳೆ ಕಡೆಗೂ ಮುಖ ಮುಚ್ಚಿದ ನಂತರ ಸುಮ್ಮನಾಯಿತು. ಮೊಸಳೆ ಹಿಡಿದ ನಂತರ ಗ್ರಾಮಸ್ಥರು ನಿಟ್ಟುಸಿರುಬಿಟ್ಟರು. ಉರಗ ತಜ್ಞ ಅನೀಸ್ ಮಹಮದ್ ಹಾಗೂ ಅರಣ್ಯ ಇಲಾಖೆಯ ಕ್ಷಿಪ್ರ ಕಾರ್ಯಪಡೆ ಮೊಸಳೆ ಹಿಡಿದು ಕಬಿನಿ ಹಿನ್ನೀರಿನಲ್ಲಿ ಬಿಟ್ಟರು. ಇಲಾಖೆಯ ವನ್ಯ ಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಕೃಷ್ಣ ಪ್ರಸಾದ್ ಪಟಗಾರ್, ಮಧುಸೂಧನ್, ಪ್ರಾದೇಶಿಕ ವಿಭಾಗದ ಶಾಂತಕುಮಾರ್ ಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin