ನಾಲೆಯ ಮೂಲಕ ತುಮಕೂರು ಜಿಲ್ಲೆಗೆ ಹೇಮಾವತಿ

ಈ ಸುದ್ದಿಯನ್ನು ಶೇರ್ ಮಾಡಿ

TUmkuru6

ತುಮಕೂರು, ಆ.13- ಜಿಲ್ಲೆಗೆ ಹೇಮಾವತಿ ಜಲಾಶಯದಿಂದ 7 ಟಿಎಂಸಿ ನೀರು ಹರಿಸಲು ಹೇಮಾವತಿ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಾಸಕ ಡಾ.ರಫೀಕ್ ಅಹಮದ್ ತಿಳಿಸಿದ್ದಾರೆ.ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ಅಧ್ಯಕ್ಷತೆಯಲ್ಲಿ ಗೊರೂರು ಜಲಾಶಯದ ಬಳಿ ಇರುವ ಹೇಮಾವತಿ ಇಂಜಿನಿಯರ್ ಕಚೇರಿಯಲ್ಲಿ ನಡೆದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ತುಮಕೂರು ನಗರ ಶಾಸಕ ಡಾ.ರಫೀಕ್ ಅಹಮದ್, ಗ್ರಾಮಾಂತರ ಶಾಸಕ ಬಿ.ಸುರೇಶಗೌಡ, ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್‍ಬಾಬು, ಕುಣಿಗಲ್ ಶಾಸಕ ಡಿ.ನಾಗರಾಜಯ್ಯ, ವಿಧಾನಪರಿಷತ್ ಸದಸ್ಯ ಎಂ.ಡಿ.ಲಕ್ಷ್ಮಿನಾರಾಯಣ್ ಭಾಗವಹಿಸಿ ಜಿಲ್ಲೆಯಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಸಚಿವರ ಮುಂದಿಟ್ಟು ಕೂಡಲೇ ತುಮಕೂರು ಬ್ರಾಂಚ್ ಕೆನಾಲ್ ಮೂಲಕ ಜಿಲ್ಲೆಗೆ ಕುಡಿಯಲು ನೀರು ಹರಿಸುವಂತೆ ಮನವಿ ಮಾಡಿದರು.
ಪ್ರಸ್ತುತ ಹೇಮಾವತಿ ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ಅತಿ ಕಡಿಮೆ ಮಳೆಯಾಗಿದ್ದು, ಇದುವರೆಗೂ ಜಲಾಶಯಕ್ಕೆ ಕೇವಲ 20 ಟಿ.ಎಂ.ಸಿ ನೀರು ಮಾತ್ರ ಬಂದಿದ್ದು, ಇದರಲ್ಲಿ 4 ಟಿ.ಎಂ.ಸಿ ನೀರು ಡೆಡ್ ಸ್ಟೋರೇಜ ಆಗಿದೆ. ಉಳಿದ 16 ಟಿ.ಎಂ.ಸಿ ಯಲ್ಲಿ 4 ಟಿ.ಎಂ.ಸಿ ನೀರನ್ನು ತುರ್ತು ಸಂದರ್ಭಗಳಿಗೆ ಮೀಸಲಿಟ್ಟು ಉಳಿದ 12 ಟಿ.ಎಂ.ಸಿ ನೀರನ್ನು ಹೇಮಾವತಿ ಜಲಾಶಯದ ಎಡದಂತೆ ನಾಲೆಯ ಎ.ಜಿ.ರಾಮಚಂದ್ರರಾವ್ ನಾಲೆಯ ಮೂಲಕ 7 ಟಿ.ಎಂ.ಸಿ ನೀರು ಮತ್ತು ಬಲದಂಡೆ ನಾಲೆಯ ಮೂಲಕ 4 ಟಿ.ಎಂ.ಸಿ ನೀರು ಹರಿಸಲು ಸಭೆಯಲ್ಲಿ ಒಪ್ಪಿಗೆ ನೀಡಿದ್ದು, ನಿನ್ನೆ ರಾತ್ರಿಯಿಂದಲೇ ತುಮಕೂರು ನಾಲೆಗೆ ನೀರು ಬಿಡುಗಡೆ ಯಾಗಲಿದೆ. ಹಂಚಿಕೆಯಾಗಿರುವ ಪ್ರಮಾಣದ ನೀರು ಹರಿಯಲಿದೆ ಎಂದು ತಿಳಿಸಿದ್ದಾರೆ. ನಾಲೆಗೆ ಬಿಡುವ ನೀರನ್ನು ಕೃಷಿಗೆ ಬಳಕೆ ಮಾಡದಂತೆ ಎಚ್ಚರಿಕೆ ವಹಿಸಲು ಸಚಿವರು ಸೂಚಿಸಿದ್ದು, ರೈತರು ಕೂಡ ನೀರನ್ನು ಕೃಷಿ ಬಳಸದಂತೆ ಡಾ.ರಫೀಕ್ ಅಹಮದ್ ಮನವಿ ಮಾಡಿದರು.

► Follow us on –  Facebook / Twitter  / Google+

Facebook Comments

Sri Raghav

Admin