ನಾಲ್ಕನೇ ಬಾರಿಗೆ ಗೋವಾ ಮುಖ್ಯಮಂತ್ರಿಯಾಗಿ ಪರಿಕ್ಕರ್ ಪದಗ್ರಹಣ

ಈ ಸುದ್ದಿಯನ್ನು ಶೇರ್ ಮಾಡಿ

Goa--01

ಪಣಜಿ. ಮಾ.14 : ನಾಲ್ಕನೇ ಬಾರಿಗೆ ಗೋವಾದ ಮುಖ್ಯಮಂತ್ರಿಯಾಗಿ ಮನೋಹರ್ ಪರಿಕ್ಕರ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಂದು ರಾಜಭನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಪರಿಕ್ಕರ್ ಅವರಿಗೆ ರಾಜ್ಯಪಾಲ ಮೃದಲಾ ಸಿನ್ಹಾ ಅವರು ಪ್ರತಿಜ್ಞಾವಿಧಿ ಬೋಧಿಸಿದರು.  ಪರಿಕ್ಕರ್ ಅವರೊಂದಿಗೆ ಬಿಜೆಪಿ ಐವರು ಹಾಗೂ ಸರ್ಕಾರಕ್ಕೆ ಬೆಂಬಲ ನೀಡಿದ ಗೋವಾ ಪಾರ್ವರ್ಡ್ ಪಕ್ಷ ಹಾಗೂ ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷದ ಆರು ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಷಾ, ವೆಂಕಯ್ಯ ನಾಯ್ಡು ಮತ್ತು ನಿತಿನ್ ಗಡ್ಕರಿ ಉಪಸ್ಥಿತರಿದ್ದರು.  ಸುಪ್ರೀಂ ಕೋರ್ಟ್ ನ ನಿರ್ದೇಶನದನುಸಾರ ನೂತನ ಸಿಎಂ ಪರಿಕ್ಕರ್ ಅವರು ಇದೆ 16 ರೊಳಗೆ ಬಹುಮತ ಸಾಬೀತುಪಡಿಸಬೇಕಿದೆ.

+ ಮೋದಿ ಅಭಿನಂದನೆ :

ಗೋವಾದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಿದ ಮನೋಹರ್ ಪರಿಕ್ಕರ್ ಮತ್ತು ಅವರ ಟೀಮ್ ಗೆ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ಗೋವಾದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿ ಉನ್ನತಿಗೇರಿಸಲಿ ಎಂದು ಮೋದಿ ಆಶಿಸಿದ್ದಾರೆ.

+ ಗೋವಾ ಫಲಿತಾಂಶ :

40 ಸ್ಥಾನಗಳು ( ಮ್ಯಾಜಿಕ್ ನಂಬರ್ 21 )
ಬಿಜೆಪಿ 13
ಕಾಂಗ್ರೆಸ್ 17
ಎನ್ ಸಿಪಿ 1
ಎಂಜಿಪಿ 3
ಜಿಎಫ್ಪಿ 3
ಇತರೆ 3

 

 

.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin