ನಾಲ್ಕು ಅಂಗಡಿಗಳಲ್ಲಿ ಸರಣಿ ಕಳ್ಳತನ

ಈ ಸುದ್ದಿಯನ್ನು ಶೇರ್ ಮಾಡಿ

robbery-6

ಕೋಲಾರ, ಅ.26-ತಡರಾತ್ರಿ ನಾಲ್ಕು ಅಂಗಡಿಗಳ ಬೀಗ ಮೀಟಿದ ಚೋರರು ನಗದು, ಮದ್ಯದ ಬಾಟಲಿಗಳನ್ನು ಕದ್ದೊಯ್ದಿರುವ ಘಟನೆ ಬೆಮೆಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬೆಮೆಲ್ ನಗರದಲ್ಲಿ ತಡರಾತ್ರಿ ದರೋಡೆಕೋರರು 2 ಮದ್ಯದಂಗಡಿ, 2 ಹಾರ್ಡ್‍ವೇರ್ ಅಂಗಡಿಗಳಲ್ಲಿ ಹಣ ಹಾಗೂ ಅಪಾರ ಮೌಲ್ಯದ ಮದ್ಯದ ಬಾಟಲಿಗಳನ್ನು ಕಳ್ಳತನ ಮಾಡಿದ್ದಾರೆ.ಈ ಅಂಗಡಿಗಳ ಮಾಲೀಕರು ಎಂದಿನಂತೆ ರಾತ್ರಿ ವ್ಯಾಪಾರ ವಹಿವಾಟು ಮುಗಿಸಿ ಬಾಗಿಲು ಬೀಗ ಹಾಕಿ ತೆರಳಿದ್ದರು.
ತಡರಾತ್ರಿ ಕಳ್ಳರು ನಾಲ್ಕು ಅಂಗಡಿಗಳಲ್ಲಿ ಸರಣಿ ಕಳ್ಳತನ ನಡೆಸಿದ್ದಾರೆ.ಮುಂಜಾನೆ ಈ ಮಾರ್ಗದಲ್ಲಿ ಹೋಗುತ್ತಿದ್ದ ಸ್ಥಳೀಯರು ಅಂಗಡಿಗಳ ಬೀಗ ಒಡೆದಿರುವುದು ಗಮನಿಸಿ ತಕ್ಷಣ ಬೆಮೆಲ್ ಪೊಲೀಸರಿಗೆ ತಿಳಿಸಿದ್ದಾರೆ.ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin