ನಾಲ್ಕು ಮಕ್ಕಳ ಜತೆ ಸಾಕು ಮಗಳನ್ನೂ ಸಲಹಿದ ಆದರ್ಶ ದಂಪತಿ

ಈ ಸುದ್ದಿಯನ್ನು ಶೇರ್ ಮಾಡಿ

adarsha
ವಿಜಯಪುರ, ಫೆ.2- ಈಗಿನ ಪರಿಸ್ಥಿತಿಯಲ್ಲಿ ತಮ್ಮ ಮಕ್ಕಳನ್ನೇ ಸಾಕೋದು ಕಷ್ಟ. ಅವರಿಗೆ ಶಿಕ್ಷಣ ಕೊಡಿಸಿದರೆ ಸಾಕಪ್ಪ ಸಾಕು ಎನ್ನಿಸುತ್ತದೆ. ಅದರಲ್ಲೂ ಈ ಮಹಾ ತಾಯಿಗೆ ನಾಲ್ವರು ಮಕ್ಕಳು. ಇವರ ಜತೆ ಆರ್ಥಿಕ ತೊಂದರೆಯಿಂದ ಶಿಕ್ಷಣ ವಂಚಿತರಾಗಿದ್ದ ಮತ್ತೊಬ್ಬ ಹೆಣ್ಣು ಮಗಳನ್ನು ತನ್ನ ಮಗಳಂತೆ ಸಾಕಿ-ಸಲಹಿ ಮದುವೆ ಮಾಡಿ ಔದಾರ್ಯ ಮೆರೆದಿರುವ ಈ ದಂಪತಿ ಎಲ್ಲರಿಗೂ ಮಾದರಿಯಾಗಿದ್ದಾರೆ.  ವಿಜಯಪುರದ ಮೇಲೂರು ನಿವಾಸಿ ನಿವೃತ್ತ ಶಿಕ್ಷಕಿ ನಾಗರತ್ನಮ್ಮ ಹಾಗೂ ಆಕೆಯ ಪತಿ ರಾಮಕೃಷ್ಣಪ್ಪ ಈ ಮೂಲಕ ತಮ್ಮ ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ.  ಕನಕವಲ್ಲಿ ಎಂಬ ಬಾಲಕಿ ಆರ್ಥಿಕ ತೊಂದರೆಯಿಂದ ಆರನೆ ತರಗತಿಗೆ ಶಿಕ್ಷಣ ತೊರೆಯ ಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದು ನಾಗರತ್ನಮ್ಮ ಹಾಗೂ ರಾಮಕೃಷ್ಣಪ್ಪ ಅವರ ಗಮನಕ್ಕೆ ಬಂತು. ಆಕೆಯನ್ನು ತಮ್ಮ ನಾಲ್ವರು ಮಕ್ಕಳೊಂದಿಗೆ   ಮತ್ತೊಬ್ಬ ಮಗಳಂತೆ ಬೆಳೆಸಿ ಆಕೆಗೆ ಉನ್ನತ ಶಿಕ್ಷಣ ಕೊಡಿಸುವುದರೊಂದಿಗೆ ವರನನ್ನೂ ನೋಡಿ ಮದುವೆ ಮಾಡಿದ ಪುಣ್ಯಾತ್ಮರಿವರು.

ಇಲ್ಲಿನ ಬಿಎಂಎಸ್ ಸಮುದಾಯ ಭವನ ದಲ್ಲಿ ನಡೆದ ವಿವಾಹದಲ್ಲಿ ಶಿಕ್ಷಕಿ ನಾಗರತ್ನಮ್ಮ ಅವರ ಸಾಕು ಮಗಳಂತೆ ಬೆಳೆದ ಕನಕವಲ್ಲಿ ನಾಗಮಂಗಲದಲ್ಲಿ ಕಳೆದ 12 ವರ್ಷಗಳ ಹಿಂದೆ ಶಾಲೆ ಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.  ಅದೇ ಶಾಲೆಯ ಮುಖ್ಯೋಪಾಧ್ಯಾಯಿನಿ ಯಾಗಿದ್ದ ನಾಗರತ್ನಮ್ಮ ಅವರು ಆಕೆಯ ಪೋಷಕರ ಮನವೊಲಿಸಿ ಆಕೆಯನ್ನು ಕರೆತಂದು ಪಿಯುಸಿವರೆಗೆ ವಿಜಯಪುರ ಪ್ರಗತಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ  ಬಿಎಸ್‍ಇಯನ್ನು ಚಿಂತಾಮಣಿಯಲ್ಲಿ , ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಎಂಎಸ್‍ಸಿ ಹಾಗೂ ಚಿಕ್ಕಬಳ್ಳಾಪುರದಲ್ಲಿ ಬಿಎಡ್ ಶಿಕ್ಷಣ ಕೊಡಿಸಿ ಬೆಂಗಳೂರಿನ ಕೆಆರ್ ಪುರಂನಲ್ಲಿ ನೌಕರಿ ಮಾಡಿಕೊಂಡಿರುವ ತೇಜಸ್‍ಕುಮಾರ್ ಎಂಬ ವರನನ್ನು ಹುಡುಕಿ ಮದುವೆ ಮಾಡಿಕೊಟ್ಟು ತಮ್ಮ ಔದಾರ್ಯ ಮೆರೆದಿದ್ದಾರೆ.  ಇವರ ಈ ಔದಾರ್ಯಕ್ಕೆ ಪತಿ, ನಿವೃತ್ತ ಬೆಸ್ಕಾಂ ಅಕಾರಿ ರಾಮಕೃಷ್ಣಪ್ಪ ಹಾಗೂ ಮೂವರು ಹೆಣ್ಣು ಮಕ್ಕಳು ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಒಬ್ಬ ಗಂಡು ಮಗ ಎಲ್ಲರ ಸಂಪೂರ್ಣ ಸಹಕಾರ ದೊರೆತಿದೆ.   ಇದೇ ಅಲ್ಲವೆ ಹೃದಯ ವೈಶಾಲ್ಯತೆ. ಸಹಕಾರ ಮನೋಭಾವನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin