ನಾಲ್ಕು ವಾರಗಳ ಕಾಲ ನಟ ದರ್ಶನ್ ಮನೆ ಸೇಫ್

ಈ ಸುದ್ದಿಯನ್ನು ಶೇರ್ ಮಾಡಿ

S-Darshan-House

ಬೆಂಗಳೂರು, ಅ.25- ಒತ್ತುವರಿ ತೆರವಿನ ಆತಂಕದಿಂದ ರಾಜರಾಜೇಶ್ವರಿ ನಗರದ ಐಡಿಎಲ್ ಹೋಮ್ಸ್‍ನಲ್ಲಿರುವ ಚಿತ್ರನಟ ದರ್ಶನ್ ಅವರ ನಿವಾಸ ಸದ್ಯ ಬಚಾವ್ ಆಗಿದೆ. ನಾಲ್ಕು ವಾರಗಳ ಕಾಲ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ಇಂದು ಆದೇಶ ನೀಡಿದೆ. ರಾಜರಾಜೇಶ್ವರಿ ನಗರದ ಐಡಿಎಲ್ ಹೋಮ್ಸ್‍ನಲ್ಲಿರುವ ದರ್ಶನ್ ಮನೆ ಇರುವ ಜಾಗ ಒತ್ತುವರಿಯಾಗಿದ್ದು, ಆ ಮನೆಯನ್ನು ತೆರವುಗೊಳಿಸಲು ಜಿಲ್ಲಾಡಳಿತ ಅವರ ಮನೆಗೆ ಬೋರ್ಡ್ ಹಾಕಿತ್ತು. ಇದನ್ನು ಆಕ್ಷೇಪಿಸಿ ದರ್ಶನ್ ಅವರು ಹೈಕೋರ್ಟ್‍ಗೆ ನಿನ್ನೆ ರಿಟ್ ಅರ್ಜಿ ಸಲ್ಲಿಸಿದ್ದರು. ಇಂದು ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ನಾಲ್ಕು ವಾರಗಳ ಕಾಲ ಯಥಾಸ್ಥಿತಿ ಕಾಪಾಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿ ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಆದೇಶಿಸಿ ವಿಚಾರಣೆಯನ್ನು ಒಂದು ತಿಂಗಳ ಕಾಲ ಮುಂದೂಡಿತು.

ಇದರಿಂದ ಬಹಳ ಇಷ್ಟಪಟ್ಟು ಕಟ್ಟಿಸಿದ್ದ ಮನೆಯನ್ನು ಕಳೆದುಕೊಳ್ಳುವ ಭೀತಿಯಲ್ಲಿದ್ದ ನಟ ದರ್ಶನ್ ಅವರು ಸದ್ಯ ಬಚಾವ್ ಆಗಿದ್ದಾರೆ.  ಐಡಿಎಲ್ ಹೋಮ್ಸ್‍ನಲ್ಲಿ ಕಾನೂನು ಪ್ರಕಾರ ನಿವೇಶನ ಪಡೆದು ಬಿಡಿಎಯಿಂದ ನಕ್ಷೆ ಮಂಜೂರಾತಿ ಪಡೆದು ಮನೆ ಕಟ್ಟಿದ್ದೇನೆ. ಬಿಡಿಎ ನೋಂದಾಯಿತ ಬಡಾವಣೆ ಇದಾಗಿದ್ದು, ಇದರಲ್ಲಿ ಮನೆ ನಿರ್ಮಾಣ ಮಾಡಿದ್ದೇನೆ. ಜಿಲ್ಲಾಡಳಿತ ಏಕಾಏಕಿ ನನ್ನ ಮನೆ ವಶಪಡಿಸಿಕೊಳ್ಳುವುದಾಗಿ ಬೋರ್ಡ್ ಹಾಕಿದೆ. ಈ ಬಗ್ಗೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಬೇಕೆಂದು ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು.

ಅರ್ಜಿ ವಿಚಾರಣೆ ಸಂದರ್ಭದಲ್ಲಿ ದರ್ಶನ್ ಮನೆಯನ್ನು ಬಹುತೇಕವಾಗಿ ನಾವು ವಶಪಡಿಸಿಕೊಂಡಿಲ್ಲ. ಸಾಂಕೇತಿಕವಾಗಿ ಬೋರ್ಡ್ ಹಾಕಿದ್ದೇವೆ ಎಂದು ಸರ್ಕಾರಿ ವಕೀಲರು ತಿಳಿಸಿದರು.
ವಾದ-ವಿವಾದ ಆಲಿಸಿದ ನ್ಯಾಯಾಲಯ ನಾಲ್ಕು ವಾರಗಳ ಕಾಲ ಯಥಾಸ್ಥಿತಿ ಕಾಪಾಡುವಂತೆ ಆದೇಶಿಸಿ ವಿಚಾರಣೆ ಮುಂದೂಡಿದೆ.

► Follow us on –  Facebook / Twitter  / Google+

Facebook Comments

Sri Raghav

Admin