ನಾಲ್ವರ ಬಂಧನ : 13 ಲಕ್ಷ ಮೌಲ್ಯದ ಮಾಲು ವಶ

ಈ ಸುದ್ದಿಯನ್ನು ಶೇರ್ ಮಾಡಿ

arrested

ಚನ್ನಪಟ್ಟಣ, ನ.25- ಹಲವಾರು ಪ್ರಕರಣಗಳಲ್ಲಿ ಭಾಗಿಯಾಗಿದ್ದ ನಾಲ್ವರು ದರೋಡೆಕೋರರನ್ನು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ವಿಜಯನಗರದ ಕುಮಾರ್ (30), ರಾಮನಗರ ಜಿಲ್ಲೆ ಕವಣಾಪುರದ ಅರುಣ್‍ಕುಮಾರ್ (25), ಬೆಂಗಳೂರಿನ ಜೆಪಿನಗರ ಮಂಜು (35), ಜೆ.ಸಿ.ನಗರದ ಕುರುಬರಹಳ್ಳಿಯ ಸುನೀಲ್‍ಕುಮಾರ್ (30) ಬಂಧಿತ ಆರೋಪಿಗಳು.

ಗೃಹರಕ್ಷಕ ಸಿಬ್ಬಂದಿ ಪ್ರಮುಖ ಆರೋಪಿ:

ಸುಮಾರು 15 ವಿವಿಧ ಪ್ರಕರಣಗಳಲ್ಲಿ ಬೆಂಗಳೂರು ಹಾಗೂ ವಿವಿಧ ಪೊಲೀಸ್ ಠಾಣೆಗಳಲ್ಲಿ ಬೇಕಾಗಿದ್ದ ಈ ನಾಲ್ಕು ಮಂದಿ ಆರೋಪಿಗಳಲ್ಲಿ ಪ್ರಮುಖ ಆರೋಪಿ ಎಂದರೆ ಗುಂಪಿನ ನಾಯಕ ಅರುಣ್‍ಕುಮಾರ್ ಈತ ಹಾಲಿ ಗೃಹರಕ್ಷಕ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆಂದು ತಿಳಿದು ಬಂದಿದೆ.ಗೃಹರಕ್ಷಕ ಪೇದೆಯೇ ರಾಬ್ರಿ ಹಾಗೂ ಇತರೆ ಕಳವು ಪ್ರಕರಣಗಳಿಗೆ ಪ್ರೇರಕನಾಗಿದ್ದಾನೆಂದು ಹೇಳಲಾಗಿದ್ದು ಈತನ ಮಾಸ್ಟರ್ ಪ್ಲಾನ್‍ನಂತೆ ನಗರಕ್ಕೆ ಬಂದ ಇವರು ಗ್ಯಾಸ್‍ವೆಲ್ಡಿಂಗ್ ಮಿಷನ್ ಕಳವು ಮಾಡಿ ನಂತರ ಅಂಗಡಿಗೆ ಖನ್ನ ಹಾಕಿದ್ದರು.ಈ ನಾಲ್ಕು ಮಂದಿಯ ಎರಡು ದಿನದ ಹಿಂದೆ ನಗರದ ಮಹದೇಶ್ವರ ನಗರದ ದೇವಾಲಯದ ಹೆಬ್ಬಾಗಿಲಿನಲ್ಲಿರುವ ವೈಂಡಿಂಗ್ ಷಾಪ್ ರೋಲಿಂಗ್ ಶಟ್ಟರ್ ಮುರಿದು ಸುಮಾರು 1 ಲಕ್ಷರೂ. ಮೌಲ್ಯದ ಹೆಚ್.ಪಿ.ಗ್ಯಾಸ್ ಸಿಲಿಂಡರ್ ಕಳವು ಮಾಡಿ ನಂತರ ಅದೇ ದಾರಿಯಲ್ಲಿ ಪೆಟ್ಟಿಗೆ ಚಿಲ್ಲರೆ ಅಂಗಡಿಯನ್ನು ಹೊಡೆದು ಸಿಗರೇಟ್ ಹಾಗೂ ಇತರೆ ವಸ್ತುಗಳನ್ನು ಕಳವು ಮಾಡಿ ಕಳವು ಮಾಡಿದ್ದ ಟಾಟಾ ಎಸಿ ವಾಹನದಲ್ಲಿ ಬರುವಾಗ ಗ್ರಾಮಾಂತರ ಪೊ ಲೀಸರ ಬಲೆಗೆ ಬಿದ್ದಿದ್ದಾರೆ.

ಜಿಲ್ಲಾ ಪೊ ಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ಪೊಲೀಸ್ ಉಪವಿಭಾಗಾಧಿಕಾರಿ ಆರ್.ಸಿ.ಲೋಕೇಶ್, ಗ್ರಾಮಾಂತರ ವೃತ್ತ ನಿರೀಕ್ಷಕ ಗೋಪಿನಾಥ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಂಡ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‍ಐ ಶಿವಕುಮಾರ್ ಹಾಗೂ ಸಿಬ್ಬಂದಿಗಳಾದ ಅಪ್ಜಲ್, ಸಿದ್ದರಾಜು, ಮಲ್ಲಿಕಾರ್ಜುನ, ರಾಮಕೃಷ್ಣ, ಚಾಲಕ ಶಿವಕುಮಾರ್ ಹಾಗೂ ಸಿಬ್ಬಂದಿ ದಾಳಿ ಮಾಡಿದ್ದಾರೆ.
ಗ್ರಾಮಾಂತರ ಪೊ ಲೀಸರ ಬಂಧನಕ್ಕೊಳಗಾಗಿರುವ 4 ಮಂದಿಯು ಬೆಂಗಳೂರಿನ ವಿವಿಧೆಡೆ ಕಳವು ಮಾಡಿದ್ದ ಸುಮಾರು 5 ಲಕ್ಷರೂ. ಮೌಲ್ಯದ ದ್ವಿಚಕ್ರವಾಹನಗಳನ್ನು ಕಳವು ಮಾಡಿದ ಟಾಟಾ ಎಸಿಯಲ್ಲಿ ಹಾಕಿಕೊಂಡು ಸಾತನೂರು ರಸ್ತೆಯಲ್ಲಿ ಬರುವಾಗ ಅನುಮಾನಾಸ್ಪದವಾಗಿ ಕಂಡ ಇವರನ್ನು ಬೆನ್ನತ್ತಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
15 ಪ್ರಕರಣ ಬೆಳಕಿಗೆ :
ಗ್ರಾಮಾಂತರ ಪೊಲೀಸರಿಂದ ಬಂಧಿತರಾಗಿರುವ ಆರೋಪಿಗಳು ಈಗಾಗಲೇ 15 ಪ್ರಕರಣಗಳಲ್ಲಿ ಬೇಕಾಗಿರುವವರಾಗಿದ್ದು ಕುಂಬಳಗೂಡು, ವಿಜಯನಗರ, ಬಿಡದಿ, ರಾಮನಗರ ಹಾಗೂ ಇತರೆ ಕಡೆಗಳಲ್ಲಿ ಕಳವು ಹಾಗೂ ರಾಬ್ರಿ ಪ್ರಕರಣಗಳಲ್ಲಿ ಭಾಗಿಯಾಗಿದ್ದರೆನ್ನಲಾಗಿದ್ದು ಪೊಲೀಸರು ಅತಿಥ್ಯ ನೀಡಿದ ಸಂದರ್ಭದಲ್ಲಿ ತಮ್ಮ ಕರಾಳ ಇತಿಹಾಸವನ್ನು ಬಿಚ್ಚಿಟ್ಟಿದ್ದಾರೆ.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin