ನಾಳೆಯಿಂದ ಇಂಗ್ಲೆಂಡ್ ವಿರುದ್ಧ ಟ್ವೆಂಟಿ-20 ಸರಣಿ

ಈ ಸುದ್ದಿಯನ್ನು ಶೇರ್ ಮಾಡಿ

England-Vs-India

ಕಾನ್ಪುರ,ಜ.25- ಕ್ರಿಕೆಟ್ ಜನಕರ ವಿರುದ್ಧ ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಗೆದ್ದು ಬೀಗುತ್ತಿರುವ ಟೀಂ ಇಂಡಿಯಾದ ಯುವ ಆಟಗಾರರಿಗೆ ನಾಳೆಯಿಂದ ಅಗ್ನಿ ಪರೀಕ್ಷೆ ಎದುರಾಗಲಿದೆ. ಮುಂಬರುವ ಐಪಿಎಲ್ ಹರಾಜಿನ ದೃಷ್ಟಿಯಿಂದಲೂ ನಾಳೆ ಆರಂಭಗೊಳ್ಳುವ ಇಂಗ್ಲೆಂಡ್ ವಿರುದ್ಧದ ಮೊದಲ ಟ್ವೆಂಟಿ-20 ಸರಣಿಯಲ್ಲಿ ಯುವಸೇನೆ ತಮ್ಮ ಸಾಮಥ್ರ್ಯವನ್ನು ತೋರಿಸುವ ತವಕದಲ್ಲಿದ್ದಾರೆ. ಏಕದಿನ ಹಾಗೂ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದ ಯುವ ಪಡೆ ಯಾದ ರಿಷಭ್ ಪಂಥ್, ಮನ್‍ದೀಪ್ ಸಿಂಗ್, ಯಜುವೇಂದ್ರ ಚಹಾಲ್, ಪರ್ವೇಜ್ ರಸೂಲ್ ಅವರು ತಮ್ಮ ಸಾಮಥ್ರ್ಯವನ್ನು ತೋರುವ ಮೂಲಕ ಭಾರತದ ಭವಿಷ್ಯದ ಆಟಗಾರರಾಗಿ ರೂಪುಗೊಳ್ಳಲು ಸಜ್ಜಾಗಿದ್ದಾರೆ.

ಇನ್ನು ಗಾಯಗೊಂಡು ಇಂಗ್ಲೆಂಡ್ ಸರಣಿಯಿಂದ ಹೊರಗುಳಿದಿದ್ದ ಹಿರಿಯ ಆಟಗಾರರಾದ ಸುರೇಶ್‍ರೈನಾ ಮತ್ತು ಅಶೀಶ್‍ನೆಹ್ರಾ ಅವರು ತಮ್ಮ ಸಾಮಥ್ರ್ಯವನ್ನು ತೋರಿಸುವ ತವಕದಲ್ಲಿದ್ದಾರೆ.
ಈಗಾಗಲೇ ಏಕದಿನ ಸರಣಿಯಲ್ಲಿ ಗ್ರೇಟ್ ಕಮ್‍ಬ್ಯಾಕ್ ಮಾಡಿರುವ ಯುವರಾಜ್‍ಸಿಂಗ್ ನಂತೆ ರೈನಾ ಹಾಗೂ ನೆಹ್ರಾ ಅವರು ಕೂಡ ಯುವಪಡೆಗೆ ಸೆಡ್ಡು ಹೊಡೆಯುವ ಮೂಲಕ ತಂಡದಲ್ಲಿ ಸ್ಥಾನ ಭದ್ರಪಡಿಸಿ ಕೊಳ್ಳಲು ಹೋರಾಟ ನಡೆಸಲಿದ್ದಾರೆ.

ಟೀಂ ಇಂಡಿಯಾದ ಸ್ಪಿನ್ ಜೋಡಿಯಾದ ಅಶ್ವಿನ್ ಹಾಗೂ ರವೀಂದ್ರಾಜಡೇಡಾ ಅವರು ಟ್ವೆಂಟಿ-20 ಸರಣಿಯಿಂದ ಹೊರಗುಳಿದಿರುವುದು ನಾಯಕ ವಿರಾಟ್ ಕೊಹ್ಲಿ ಸ್ಪಿನ್ ಪಡೆಯನ್ನು ಸುಭದ್ರ ಗೊಳಿಸುವತ್ತಲೂ ಪ್ಲ್ಯಾನ್ ರೂಪಿಸಿದ್ದಾರೆ. ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ 5 ರನ್‍ಗಳಿಂದ ಗೆಲ್ಲುವ ಮೂಲಕ ಆತ್ಮವಿಶ್ವಾಸ ಮೂಡಿಸಿಕೊಂಡಿರುವ ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ತಂಡವು ಟ್ವೆಂಟಿ-20 ಸರಣಿಯನ್ನು ಗೆದ್ದು ಬೀಗುವ ಹುಮ್ಮಸ್ಸಿನಲ್ಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin