ನಾಳೆಯಿಂದ ಎಟಿಎಂಗಳಲ್ಲಿ 4500 ರೂ. ಡ್ರಾ ಮಾಡಬಹುದು..!

ಈ ಸುದ್ದಿಯನ್ನು ಶೇರ್ ಮಾಡಿ

ATM-01

ಬೆಂಗಳೂರು. ಡಿ.31 : ಕೊನೆಗೂ ನೋಟ್ ಬ್ಯಾನ್ ಪ್ರಧಾನಿ ಮೋದಿ ನೀಡಿದ್ದ 50 ದಿನಗಳ ಗಡುವು ಮುಗಿದಿದೆ. ನೋಟ್ ಬ್ಯಾನ್ ನಿಂದ  ಜನರು ಎದುರಿಸುತ್ತಿದ್ದ ನಾನಾ ಕಷ್ಟಗಳು ದೂರವಾಗುವ ಲಕ್ಷಣಗಳು ಕಾಣುತ್ತಿವೆ. ಇದಕ್ಕೆ ಪೂರಕವಾಗಿ ಎಟಿಎಂ ಗಳಲ್ಲಿ ಹಣ ಪಡೆಯಲು ಹೇರಿದ್ದ ನಿರ್ಬಂಧವನ್ನು ಸ್ವಲ್ಪ ಮಟ್ಟಿಗೆ ಸಡಿಲಗೊಳಿಸಿರುವ ಆರ್ಬಿಐ ಎಟಿಎಂ ಗಳಿಂದ ಹಣ ಹಿಂಪಡೆಯುವ ಮಿತಿಯನ್ನು ಪ್ರತಿ ದಿನಕ್ಕೆ 2500 ರಿಂದ 4500 ಕ್ಕೆ ಹೆಚ್ಚಿಸಿದೆ.

ಕಾಳ ಧನಕ್ಕೆ ಕಡಿವಾಣ ಹಾಕಲು ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದ ಕೇಂದ್ರ ಸರ್ಕಾರ, ಹಳೆಯ ನೋಟು ಜಮಾ ಮಾಡಲು ಹಾಗೂ ಖಾತೆಯಿಂದ ಹಣ ಪಡೆಯಲು ಹಲವು ನಿರ್ಬಂಧಗಳನ್ನು ವಿಧಿಸಿತ್ತು. ಎಟಿಎಂ ಮೂಲಕ ಪ್ರತಿನಿತ್ಯ 2,500 ರೂ. ಹಾಗೂ ಬ್ಯಾಂಕ್ ನಿಂದ ವಾರಕ್ಕೆ 24 ಸಾವಿರ ರೂ. ಗಳನ್ನು ಮಾತ್ರ ಪಡೆಯಲು ಅವಕಾಶ ನೀಡಲಾಗಿತ್ತು. ಇದರಿಂದಾಗಿ ಆನೇಕರು ತಮ್ಮ ದಿನನಿತ್ಯದ ವಹಿವಾಟಿಗೆ ಹಣ ಸಿಗದೆ ತೊಂದರೆಯನ್ನನುಭವಿಸಿದ್ದರು.

ಇದೀಗ ಎಟಿಎಂ ಗಳಿಂದ ಹಣ ಹಿಂಪಡೆಯುವ ಮಿತಿಯನ್ನು ಹೆಚ್ಚಳ ಮಾಡಲಾಗಿದೆ. 2017 ಜನವರಿ 1 ರಿಂದ ಈ ನಿಯಮ ಜಾರಿಗೆ ಬರಲಿದ್ದು, ಎಟಿಎಂ ಗಳಿಂದ ಪ್ರತಿನಿತ್ಯ 4,500 ರೂ. ಪಡೆಯಬಹುದಾಗಿದೆ. ಅದರೆ ಬ್ಯಾಂಕ್ ನಿಂದ ವಾರಕ್ಕೆ ಪಡೆಯಬಹುದಾದ 24 ಸಾವಿರ ರೂ. ಗಳ ಮಿತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin