ನಾಳೆಯಿಂದ ಐಪಿಎಲ್ 10ನೇ ಆವೃತ್ತಿ ಆರಂಭ , ಆರ್‍ಸಿಬಿ-ಎಸ್‍ಎಚ್‍ಬಿ ನಡುವೆ ಮೊದಲ ಪಂದ್ಯ

ಈ ಸುದ್ದಿಯನ್ನು ಶೇರ್ ಮಾಡಿ

RCB-vs-Hyda

ಹೈದರಾಬಾದ್,ಏ.4- ಜಾತಕಪಕ್ಷಿಯಂತೆ ಕಾಯುತ್ತಿರುವ ದೇಶದ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣ ನೀಡಲು ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್‍ಗೆ)ನ 10ನೇ ಆವೃತ್ತಿಗೆ ಕ್ಷಣಗಣನೆ ಆರಂಭವಾಗಿದೆ.   ನಾಳೆ ರಾಜೀವ್‍ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನೆ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್‍ಸಿಬಿ) ಹಾಗೂ ಸನ್‍ರೈಸರ್ಸ್ ಹೈದರಾಬಾದ್( ಎಸ್‍ಎಚ್‍ಬಿ) ನಡುವೆ ಪಂದ್ಯ ನಡೆಯಲಿದೆ.  ಆರ್‍ಸಿಬಿ ತಂಡಕ್ಕೆ ಈಗಾಗಲೇ ನಾಯಕ ವಿರಾಟ್ ಕೊಹ್ಲಿ ಹಾಗೂ ಸ್ಪೋಟಕ ಬ್ಯಾಟ್ಸ್‍ಮನ್ ಕೆ.ಎಲ್.ರಾಹುಲ್ ಅವರು ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದು , ತಂಡಕ್ಕೆ ಇವರ ಅನುಪಸ್ಥಿತಿ ಕಾಡಲಿದೆ.

ಹಂಗಾಮಿ ನಾಯಕನಾಗಿ ಎ.ಬಿ.ಡಿ.ವಿಲಿಯರ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ಅವರ ಜೊತೆಗೆ ಸ್ಫೋಟಕ ಆಟಗಾರ ಕ್ರಿಸ್‍ಗೇಲ್, ಶೇನ್ ವ್ಯಾಟ್ಸನ್, ಮನ್‍ದೀಪ್ ಸಿಂಗ್, ಸರ್ಪರಾಜ್ ಖಾನ್ ಸೇರಿದಂತೆ ಅನೇಕ ಆಟಗಾರರು ಆರ್‍ಸಿಬಿಯಲ್ಲಿದ್ದು , ನಾಳೆ ಐಪಿಎಲ್‍ನ ಶುಭಾರಂಭ ಮಾಡಲಿದ್ದಾರೆ.
ಬೌಲಿಂಗ್‍ನಲ್ಲಿ ಕರ್ನಾಟಕದ ಶ್ರೀನಾಥ್ ಅರವಿಂದ್, ವೇಗದ ಬೌಲರ್ ಟೈಮಲ್ ಮಿಲ್ಸ್ , ಸ್ಟುವರ್ಟ್ ಬಿನ್ನಿ, ಇಕ್ಬಾಲ್ ಅಬ್ದುಲ್ಲಾ , ಸ್ಪಿನ್ನರ್‍ಗಳಾದ ಸಾಮ್ಯೂಯಲ್ ಬದ್ರಿ, ಯಜುವೇಂದ್ರ ಚಲಾಲ್ ಸೇರಿದಂತ ಪರಿಣಿತ ಬೌಲರ್‍ಗಳಿದ್ದು , ತಂಡಕ್ಕೆ ಯಾವುದೆ ಸಮಯದಲ್ಲಾದರೂ ನೆರವು ಆಗಲಿದ್ದಾರೆ.

ಇನ್ನು ಹೈದರಾಬಾದ್ ತಂಡದಲ್ಲಿ ಘಟಾನುಘಟಿ ಆಟಗಾರರೇ ಇದ್ದು , ಡೇವಿಡ್ ವಾರ್ನರ್, ಶಿಖರ್ ಧವನ್, ಯುವರಾಜ್ ಸಿಂಗ್, ನಮನ್ ಓಜಾ ಸೇರಿದಂತೆ ಸ್ಫೋಟಕ ಬ್ಯಾಟ್ಸ್‍ಮನ್‍ಗಳಿದ್ದಾರೆ.   ಬೌಲಿಂಗ್‍ನಲ್ಲಿ ಹಿರಿಯ ಬೌಲರ್ ಆಸೀಸ್ ನೆಹ್ರಾ, ಭುವನೇಶ್ವರ್ ಕುಮಾರ್, ಮುಷ್ಪಿಕರ್ ರೆಹಮಾನ್ ಸೇರಿದಂತೆ ಪರಿಣಿತ ಆಟಗಾರರನ್ನು ಹೊಂದಿದ್ದು, ಸಮಬಲ ಹೋರಾಟಕ್ಕೆ ಸಿದ್ಧವಾಗಿದೆ.   ನಾಳೆಯಿಂದ ನಡೆಯಲಿರುವ ಐಪಿಎಲ್ ಪಂದ್ಯಾವಳಿಯು ಎರಡು ತಿಂಗಳ ಕಾಲ ಅಭಿಮಾನಿಗಳಿಗೆ ರಸದೌತಣ ನೀಡಲು ಸಜ್ಜಾಗಿದೆ. ಈ ಹಿಂದೆ ನಡೆದ ಸ್ಪಾಟ್ ಫಿಕ್ಸಿಂಗ್, ಬೆಟ್ಟಿಂಗ್, ಕ್ರಿಕೆಟ್ ಸಟ್ಟಾ ಭಾಜಿ ತಡೆಗಟ್ಟಲು ಭಾರತೀಯ ಕ್ರಿಕೆಟ್ ಮಂಡಳಿ ಹದ್ದಿನ ಕಣ್ಣು ಇಟ್ಟಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin