ನಾಳೆಯಿಂದ ಧರ್ಮಾಶಾಲಾದಲ್ಲಿ ಒನ್ ಡೇ ಫೈಟ್

ಈ ಸುದ್ದಿಯನ್ನು ಶೇರ್ ಮಾಡಿ

india
ಧರ್ಮಶಾಲಾ,(ಹಿಮಾಚಲ ಪ್ರದೇಶ) ಅ.15- ಟೆಸ್ಟ್ ಸರಣಿಯಲ್ಲಿ ಪ್ರವಾಸಿ ನ್ಯೂಜಿಲೆಂಡ್ ತಂಡದ ವಿರುದ್ಧ 3-0 ಗೆಲುವಿನಿಂದ ಕ್ಲೀನ್‌ಸ್ವೀಪ್ ಸಾಧನೆ ಮಾಡಿ ಟೆಸ್ಟ್ ರ‍್ಯಾಕಿಂಗ್‌ನಲ್ಲಿ ನಂ.1 ಪಟ್ಟಕ್ಕೇರಿ ಐತಿಹಾಸಿಕ ಸಾಧನೆ ಮಾಡಿದ ಭಾರತ ತಂಡ ಈಗ ಏಕದಿನ ಸರಣಿಯಲ್ಲಿ ಕ್ಲೀನ್‌ಸ್ವೀಪ್ ನನಸಾಗಲು ಸಜ್ಜಾಗಿದೆ.  5 ಏಕದಿನ ಸರಣಿಯ ಮೊದಲ ಪಂದ್ಯ ಇಲ್ಲಿ ಧರ್ಮಾಶಾಲಾ ಕ್ರೀಡಾಂ ಗಣದಲ್ಲಿ ನಾಳೆ ನಡೆಯಲಿದ್ದು, ನಾಯಕ ಮಹೇಂದ್ರ ಸಿಂಗ್ ಧೋನಿ ಪಡೆ ಮೊದಲ ಪಂದ್ಯ ಗೆದ್ದು ಶುಭಾರಂಭ ಮಾಡುವ ತವಕದಲ್ಲಿದೆ. ಒಂದು ವೇಳೆ ಸರಣಿಯನ್ನು 4-1 ರಿಂದ ಗೆದ್ದರೆ ಏಕದಿನ ರ‍್ಯಾಂಕಿಂಗ್‌ನಲ್ಲಿ 3ನೇ ಸ್ಥಾನಕ್ಕೇರಲಿದೆ.

ಭಾರತ ಬಲಾಢ್ಯ: ಇತ್ತೀಚಿಗಷ್ಟೇ ಮುಗಿದ ಟೆಸ್ಟ್ ಸರಣಿಯಲ್ಲಿ ಕೊಹಿ ಪಡೆ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಾಂಘಿಕ ಪ್ರದರ್ಶನ ನೀಡಿ ಪ್ರವಾಸಿ ತಂಡಕ್ಕೆ ಮುಣ್ಣುಮುಕ್ಕಿಸಿ ಸರಣಿ ಕೈವಶಮಾಡಿಕೊಂಡಿತ್ತು. ಅದೇ ಪ್ರದರ್ಶನವನ್ನು ಮುಂದುವರೆಸಲು ಏಕದಿನ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಪಡೆ ಕಾತರರಾಗಿದೆ.

ತಿರುಗೇಟು ನೀಡಲು ಕಿವೀಸ್ ಸಜ್ಜು:ಟೆಸ್ಟ್ ಸರಣಿಯಲ್ಲಿ ಹೀನಾಯವಾಗಿ ಸರಣಿ ಸೋಲು ಅನುಭವಿಸಿದ ಕಿವೀಸ್ ಏಕದಿನ ಸರಣಿಯಲ್ಲಿ ಅಗ್ನಿಪರೀಕ್ಷೆ ಎದುರಾಗಿದೆ. ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳು ಫಾರ್ಮ್ ಕಳೆದುಕೊಂಡಿದ್ದರಿಂದ ನಾಯಕ ವಿಲಿಯಮ್ಸನ್ ಅವರಿಗೆ ಚಿಂತೆಗೀಡಾಗಿದೆ. ಆರಂಭಿಕ ಆಟಗಾರ ಮಾರ್ಟಿನ್ ಗುಪ್ಟಿಲ್ ಹಾಗೂ ರಾಸ್ ಟೇಲರ್ ಸೇರಿದಂತೆ ಪ್ರಮುಖ ಬ್ಯಾಟ್ಸ್‌ಮನ್‌ಗಳು ತಕ್ಕ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇನ್ನೂ ಬೌಲಿಂಗ್ ವಿಭಾಗದಲ್ಲಿ ಕಿವೀಸ್ ಅದ್ಭುತ ಪ್ರದರ್ಶನ ನೀಡಿದೆ. ಹೀಗಾಗಿ ಏಕದಿನ ಸರಣಿ ಗೆದ್ದು ಬಾರತ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin