ನಾಳೆಯಿಂದ ಬಹುನಿರೀಕ್ಷಿತ ರಿಯಲ್ ಎಸ್ಟೇಟ್ ಕಾಯ್ದೆ (RERA) ಜಾರಿ

ಈ ಸುದ್ದಿಯನ್ನು ಶೇರ್ ಮಾಡಿ

Real-Estate--01

ನವದೆಹಲಿ,ಏ.30-ಗ್ರಾಹಕರ ಹಕ್ಕುಗಳನ್ನು ರಕ್ಷಿಸಲು ಮತ್ತು ಪಾರದರ್ಶಕತೆ ಕಾಯ್ದುಕೊಳ್ಳಲು ಬಹುನಿರೀಕ್ಷಿತ ರಿಯಲ್ ಎಸ್ಟೇಟ್ ಕಾಯ್ದೆ (ಆರ್‍ವಿಆರ್‍ಎ) ನಾಳೆಯಿಂದ ಜಾರಿಗೆ ಬರಲಿದೆ. ಆದರೆ ಈ ಅಧಿಸೂಚನೆಗಾಗಿ 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಮಾತ್ರ ಈವರೆಗೆ ಅಧಿಸೂಚಿತಗೊಳಿಸಲಾಗಿದೆ.   ಬಳಕೆದಾರರು ಮತ್ತು ಗ್ರಾಹಕರ ಹಿತರಕ್ಷಣೆ ಉದ್ದೇಶದ ಈ ಕಾಯ್ದೆಯ ಅನುಷ್ಠಾನದಿಂದ ಗ್ರಾಹಕನೇ ದೊರೆಯಾಗುವ ಹೊಸ ಶಕೆ ಆರಂಭವಾಗಲಿದೆ ಎಂದು ಕೇಂದ್ರ ಸರ್ಕಾರ ಬಣ್ಣಿಸಿದೆ.  ನಾಳೆಯಿಂದ ಜಾರಿಗೆ ಬರಲಿರುವ ಕಾಯ್ದೆಯನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು ಸಹ ಸ್ವಾಗತಿಸಿದ್ದಾರೆ. ಭಾರತೀಯ ರಿಯಲ್ ಎಸ್ಟೇಟ್ ವಲಯದ ಕಾರ್ಯ ನಿರ್ವಹಣೆಯಲ್ಲಿ ಇದು ಮಹತ್ವದ ಪರಿವರ್ತನೆಗೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.ಗ್ರಾಹಕರು ಮತ್ತು ಕಾನೂನು ಬದ್ಧ ಖಾಸಗಿ ಉದ್ದಿಮೆದಾರರ ರಕ್ಷಣೆ ಉದ್ದೇಶದ ರಿಯಲ್ ಎಸ್ಟೇಟ್(ನಿಬಂಧನೆ ಮತ್ತು ಅಭಿವೃದ್ದಿ ) ಮಸೂದೆ, 2016 ವಿಧೇಯಕವನ್ನು ಕಳೆದ ವರ್ಷ ಮಾರ್ಚ್‍ನಲ್ಲಿ ಸಂಸತ್ ಅಂಗೀಕರಿಸಿತು. ಮೇ 1ರಿಂದ ಈ ಕಾಯ್ದೆಯ ಎಲ್ಲಾ 92 ಸೆಕ್ಷನ್‍ಗಳು ಜಾರಿಗೆ ಬರಲಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin