ನಾಳೆಯಿಂದ ಬ್ರಿಕ್ಸ್ ಸಮಾವೇಶ : ಅವಕಾಶ ಬಳಸಿಕೊಂಡು ಚೀನಾಗೆ ಬಿಸಿಮುಟ್ಟಿಸಲು ಮೋದಿ ತಯಾರಿ

ಈ ಸುದ್ದಿಯನ್ನು ಶೇರ್ ಮಾಡಿ

Modi-01

ಪಣಜಿ, ಅ.13-ಭಾರತ ಮತ್ತು ಪಾಕಿಸ್ತಾನ ನಡುವೆ ಪ್ರಸ್ತುತ ಭುಗಿಲೆದ್ದಿರುವ ಉದ್ವಿಗ್ನ ಸ್ಥಿತಿಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿರುವ ಚೀನಾಗೆ ತಮ್ಮ ನಯ ಆದರೆ ಅಷ್ಟೇ ತೀಕ್ಷ್ಣ ಮಾತುಗಳ ಮೂಲಕ ಬಿಸಿ ಮುಟ್ಟಿಸಲು ಪ್ರಧಾನಿ ನರೇಂದ್ರ ಮೋದಿ ನಾಳೆ ನಡೆಯಲಿರುವ ಬ್ರಿಕ್ಸ್ ದೇಶಗಳ ಸಮಾವೇಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ವೇದಿಕೆಯನ್ನು ಸಜ್ಜುಗೊಳಿಸಿದ್ದಾರೆ.
ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳ ದಾಳಿ ಆತಂಕದ ನಡುವೆ ಗೋವಾ ರಾಜಧಾನಿ ಪಣಜಿಯಲ್ಲಿ ನಾಳೆಯಿಂದ ಆರಂಭವಾಗಲಿರುವ ಎರಡು ದಿನಗಳ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ಸೌತ್ ಆಫ್ರಿಕಾ) ದೇಶಗಳ ಸಮಾವೇಶದಲ್ಲಿ ಚೀನಾವನ್ನು ಪೇಚಿಗೆ ಸಿಲುಕಿಸಲು ಚಾಣಾಕ್ಷ ಮೋದಿ ಸನ್ನದ್ಧರಾಗಿದ್ದಾರೆ.

ಕಾಶ್ಮೀರ ಕಣಿವೆಯಲ್ಲಿ ಉರಿ ಸೇನಾ ನೆಲೆ ಮೇಲೆ ಭಯೋತ್ಪಾದಕರು ದಾಳಿ ನಡೆಸಿ 19 ಯೋಧರ ಮಾರಣಹೋಮ ನಡೆಸಿದ ನಂತರ ವಿಶ್ವಸಂಸ್ಥೆ ಸೇರಿದಂತೆ ಅನೇಕ ಜಗತ್ತಿನ ಅನೇಕ ದೇಶಗಳು ಪಾಕಿಸ್ತಾನಕ್ಕೆ ಛೀಮಾರಿ ಹಾಕಿ ಅದನ್ನು ಮೂಲೆಗುಂಪು ಮಾಡಿದೆ. ಈ ಸನ್ನಿವೇಶದಲ್ಲೇ ಪಾಕಿಸ್ತಾನದ ಪರಮ ಮಿತ್ರ ಚೀನಾ ಜೊತೆ ಬ್ರಿಕ್ಸ್ ಸಮಾವೇಶದಲ್ಲಿ ಭಾರತ ಮುಖಾಮುಖಿಯಾಗಲಿದೆ. ಚೀನಾದ ಇಬ್ಬಗೆ ನೀತಿ ಬಗ್ಗೆ ಪ್ರಧಾನಿ ಮೋದಿ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರೊಂದಿಗೆ ಚರ್ಚಿಸಿ ತಮ್ಮ ಅಸಮಾಧಾನ ಹೊರಹಾಕಲಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಪರಮಾಣು ಪೂರೈಕೆ ಸಮೂಹದ (ಎನ್‍ಎಸ್‍ಜಿ) ಸದಸ್ಯತ್ವ ಪಡೆಯಲು ಭಾರತಕ್ಕೆ ಚೀನಾ ಹಾಕಿರುವ ಅಡ್ಡಗಾಲು ಹಾಗೂ ಕಳಂಕ ಹೊತ್ತಿರುವ ಪಾಕಿಸ್ತಾನಕ್ಕೆ ನೀಡುತ್ತಿರುವ ಬೆಂಬಲದ ವಿಷಯವನ್ನು ಮೋದಿ ಪ್ರಮುಖವಾಗಿ ಪ್ರಸ್ತಾಪಿಸಿ ಜಿನ್‍ಪಿಂಗ್‍ರನ್ನು ಪೇಚಿಗೆ ಸಿಲುಕಿಸಲಿದ್ದಾರೆ ಎಂದು ಪ್ರಧಾನಮಂತ್ರಿಯವರ ಕಾರ್ಯಾಲಯದ ಉನ್ನತ ಮೂಲಗಳು ತಿಳಿಸಿವೆ.

ರಷ್ಯಾ ಜೊತೆ ಮಹತ್ವದ ರಕ್ಷಣಾ ಒಪ್ಪಂದ :

ಬ್ರಿಕ್ಸ್ ಸಮಾವೇಶದ ವೇಳೆ ಎಸ್-400 ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಗಳಿಗೆ ಸಂಬಂಧಿಸಿದಂತೆ 39,000 ಕೋಟಿ ರೂ.ಗಳ ಮೌಲ್ಯದ ಮಹತ್ವದ ಒಪ್ಪಂದಕ್ಕೆ ಭಾರತ ಮತ್ತು ರಷ್ಯಾ ಸಹಿ ಹಾಕಲಿವೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಪ್ರಧಾನಿ ಮೋದಿ ಸಮ್ಮುಖದಲ್ಲಿ ಈ ಒಪ್ಪಂದಕ್ಕೆ ಅನುಮೋದನೆ ಲಭಿಸಲಿದೆ. ಸುಮಾರು 400 ಕಿ.ಮೀ.ಅಂತರದಲ್ಲಿನ ವೈರಿಗಳ ವಿಮಾನ, ಬೇಹುಗಾರಿಕೆ ಜೆಟ್‍ಗಳು, ಕ್ಷಿಪಣಿಗಳು ಮತ್ತು ಡ್ರೋಣ್‍ಗಳನ್ನು ನೂಚ್ಚುನೂರು ಮಾಡಬಲ್ಲ ರಷ್ಯಾದ ಎಸ್-400 ಟ್ರಂಫ್ ಏರ್ ಡಿಫೆನ್ಸ್ ಮಿಸೈಲ್ ಸಿಸ್ಟಮ್ ಒಡಂಬಡಿಕೆ ಮೂಲಕ ಭಾರತವು ತನ್ನ ವೈಮಾನಿಕ ರಕ್ಷಣಾ ಸಾಮಥ್ರ್ಯವನ್ನು ಮತ್ತಷ್ಟು ಬಲಗೊಳಿಸಲಿದೆ.

ಅಭೂತಪೂರ್ವ ಭದ್ರತೆ :

ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳ ದಾಳಿ ಆತಂಕದ ನಡುವೆ ಗೋವಾ ರಾಜಧಾನಿ ಪಣಜಿಯಲ್ಲಿ ಅ.15 ಮತ್ತು 16ರಂದು ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ ಮತ್ತು ಸೌತ್ ಆಫ್ರಿಕಾ) ದೇಶಗಳ ಸಮಾವೇಶಕ್ಕೆ ಕ್ಷಣಗಣನೆ ಆರಂಭವಾಗಿದ್ದು, 13 ರಾಷ್ಟ್ರಗ¼ ನಾಯಕರ ಈ ಸಭೆಗೆ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಸರ್ಜಿಕಲ್ ದಾಳಿಯಿಂದ ತೀವ್ರ ಹತಾಶರಾಗಿರುವ ಭಯೋತ್ಪಾದಕರು ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಗುಪ್ತಚರ ಮೂಲಗಳ ಮಾಹಿತಿ ಹಿನ್ನೆಲೆಯಲ್ಲಿ ಕರಾವಳಿ ರಾಜ್ಯದೆಲ್ಲೆಡೆ ಕಟ್ಟೆಚ್ಚರ ವಹಿಸಲಾಗಿದೆ. ದುಷ್ಕøತ್ಯ ಆತಂಕದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಉಸ್ತುವಾರಿಯಲ್ಲಿ ಸಮಾವೇಶಕ್ಕೆ ಅಭೂತಪೂರ್ವ ಬಿಗಿ ಭದ್ರತೆ ಒದಗಿಸಲಾಗಿದೆ.

ಬ್ರಿಕ್ಸ್ ಮತ್ತು ಬ್ರಿಮ್ ಸ್ಟೆಕ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಚೀನಾ ಅಧ್ಯಕ್ಷ ಜಿನ್‍ಪಿಂಗ್, ಬ್ರೆಜಿಲ್ ಅಧ್ಯಕ್ಷ ಮಿಚೆಲ್ ಟೆಮರ್, ದಕ್ಷಿಣ ಆಫ್ರಿಕಾ ಅಧ್ಯಕ್ಷ ಜಾಕೋಬ್ ಜುಮಾ ಸೇರಿದಂತೆ 13 ದೇಶಗಳ ಮುಖ್ಯಸ್ಥರು ಆಗಮಿಸುತ್ತಿದ್ದು, ಗೋವಾ ರಾಜ್ಯದಾದ್ಯಂತ ಸೂಕ್ತ ಭದ್ರತಾ ಏರ್ಪಾಡುಗಳನ್ನು ಮಾಡಲಾಗಿದೆ.  ಅಜಿತ್ ಧೋವಲ್ ಈಗಾಗಲೇ ನೌಕಾಪಡೆ, ಕರಾವಳಿ ರಕ್ಷಣಾ ಪಡೆ ಮತ್ತು ಭದ್ರತಾ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ಗೋವಾ ವಿಮಾನನಿಲ್ದಾಣ ಮತ್ತು ಸಾಗರ ಪ್ರದೇಶಗಳಲ್ಲಿ ಮಾರ್ಕೋಸ್ ಕಮ್ಯಾಂಡೋಗಳನ್ನು ನಿಯೋಜಿಸಲಾಗಿದೆ. ಉಗ್ರರ ಚಲನವಲನಗಳ ಮೇಲೆ ಹದ್ದಿನ ಕಣ್ಣಿನ ನಿಗಾ ಇಡಲು ಮಹಾರಾಷ್ಟ್ರ ಪೊಲೀಸರ ನೆರವು ಪಡೆಯಲಾಗಿದೆ.
ಬ್ರಿಕ್ಸ್ ಸಮಾವೇಶದಲ್ಲಿ ಪಾಲ್ಗೊಳ್ಳುವ ಅತಿಗಣ್ಯರು ವಾಸ್ತವ್ಯ ಹೂಡಲಿರುವ ಪಂಚತಾರಾ ಮತ್ತು ಸಪ್ತತಾರಾ ಹೋಟೆಲ್‍ಗಳ ಸುತ್ತ ಇಂಡೋ ಟಿಬೆಟಿಯನ್ ಪೊಲೀಸ್ ಫೋ ರ್ಸ್ ಮತ್ತು ವಿಶೇಷ ಶ್ವಾನದಳವನ್ನು ನೇಮಿಸಲಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin