ನಾಳೆಯಿಂದ ಮೈಸೂರು ಮೃಗಾಲಯ ವೀಕ್ಷಣೆಗೆ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

Mysuru-zoo

ಮೈಸೂರು,ಫೆ.2-ಕಳೆದ ಒಂದು ತಿಂಗಳಿನಿಂದ ಮುಚ್ಚಲಾಗಿದ್ದ ಶ್ರೀ ಜಯಚಾಮರಾಜೇಂದ್ರ ಮೃಗಾಲಯಕ್ಕೆ ನಾಳೆಯಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಮೃಗಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕಮಲಾ ಕರಿಕಾಳನ್ ತಿಳಿಸಿದ್ದಾರೆ. ಹಕ್ಕಿಜ್ವರ ಹಿನ್ನಲೆಯಲ್ಲಿ ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ಜ.4ರಿಂದ ನಿರ್ಬಂಧಿಸಲಾಗಿತ್ತು. 124 ವರ್ಷಗಳ ಇತಿಹಾಸವಿರುವ ಮೃಗಾಲಯದಲ್ಲಿ ಹಕ್ಕಿಜ್ವರದಿಂದ ಆರು ಹಕ್ಕಿಗಳು ಸಾವನ್ನಪ್ಪಿದ್ದವು. ಈ ಹಿನ್ನೆಲೆಯಲ್ಲಿ ಹಕ್ಕಿಗಳ ಹಿಕ್ಕೆ ಮತ್ತು ರಕ್ತವನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ನಕರಾತ್ಮಕ ವರದಿ ಬಂದಿರುವುದರಿಂದ ನಾಳೆಯಿಂದ ಸಾರ್ವಜನಿಕರಿಗೆ ಮೃಗಾಲಯಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಚಿರತೆ ಸಾವು:

Mysuru-Xoo

ಮಾಂಸದ ತುಂಡು ಗಂಟಲಿಗೆ ಸುಕ್ಕಿಕೊಂಡು ಎರಡು ವರ್ಷದ ಗಂಡು ಚಿರತೆ ನಿನ್ನೆ ಮೃಗಾಲಯದಲ್ಲಿ ಸಾವನ್ನಪ್ಪಿದೆ. ನಿನ್ನೆ ಸಂಜೆ ಮೃಗಾಲಯದ ಸಿಬ್ಬಂದಿ ಹಾಕಿದ ಮಾಂಸದ ತುಂಡುಗಳನ್ನು ತರಾತುರಿಯಲ್ಲಿ ತಿನ್ನಲು ಹೋಗಿ ಮಾಂಸದ ತುಂಡು ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡು ಮೃತಪಟ್ಟಿದೆ.   ಚಿರತೆಯು ಬೋನಿನಲ್ಲಿ ನಿಶ್ಯಬ್ದವಾಗಿರುವುದನ್ನು ಕಂಡ ಸಿಬ್ಬಂದಿ ಅನುಮಾನಗೊಂಡು ಹತ್ತಿರ ಹೋಗಿ ನೋಡಿದಾಗ ಚಿರತೆ ಸತ್ತಿರುವುದು ಕಂಡುಬಂದಿದೆ.

2016ರ ನವೆಂಬರ್-ಡಿಸೆಂಬರ್‍ನ ಅವಧಿಯಲ್ಲಿ ಜೀಬ್ರಾ, ಕಾಂಗ್ರೊ, ಕಾಳಿಂಗ ಸರ್ಪ, ಘೇಂಡಾಮೃಗ, ಸಿಂಗಲಿಕ ಪ್ರಾಣಿಗಳು ಮೃತಪಟ್ಟಿದ್ದವು. ನಂತರ ಹಕ್ಕಿಜ್ವರದ ಹಿನ್ನೆಲೆಯಲ್ಲಿ ಒಂದು ತಿಂಗಳ ಕಾಲ ಮೃಗಾಲಯವನ್ನು ಮುಚ್ಚಲಾಗಿತ್ತು.  ಈಗ ಚಿರತೆ ಸಾವನ್ನಪ್ಪಿರುವುದು ಸಾರ್ವಜನಿಕರಿಗೆ ಬೇಸರ ಉಂಟು ಮಾಡಿದೆ. ಮೃಗಾಲಯದ ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

ನಾಳೆಯಿಂದ ಮೈಸೂರು ಮೃಗಾಲಯ ವೀಕ್ಷಣೆಗೆ ಅವಕಾಶ

Facebook Comments

Sri Raghav

Admin