ನಾಳೆಯಿಂದ ‘ಯಾರಿಗೆ ಯಾರುಂಟು’

ಈ ಸುದ್ದಿಯನ್ನು ಶೇರ್ ಮಾಡಿ

ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವಂತಹ ಯಾರಿಗೆ ಯಾರುಂಟು ಚಿತ್ರ ಇದೇ ವಾರ  ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಗೊಳ್ಳುತ್ತಿದೆ. ಬಹಳ ವರ್ಷಗಳ ನಂತರ ಮತ್ತೆ ಒರಟ ಖ್ಯಾತಿಯ ನಟ ಪ್ರಶಾಂತ್ ಕ್ಲಾಸ್ ಹೀರೋ ಆಗಿ ತೆರೆ ಮೇಲೆ ಬರುತ್ತಿರುವ ಚಿತ್ರ ಯಾರಿಗೆ ಯಾರುಂಟು. ಕನ್ನಡಕ್ಕೆ ಅದ್ಭುತ ಮೆಲೋಡಿ ಚಿತ್ರಗಳನ್ನು ಕೊಟ್ಟಂಥ ಕಿರಣ್ ಗೋವಿ ಈ ಚಿತ್ರದಲ್ಲಿ ಒಂದು ಸುಂದರವಾದ
ಕಥೆಯನ್ನು ಕ್ಯೂಟ್ ನಾಯಕಿಯರ ಮೂಲಕ ಹೇಳಿದ್ದಾರೆ.

ಪ್ರಶಾಂತ್ ಜೊತೆ ಬಿಗ್ ಬಾಸ್ ಖ್ಯಾತಿಯ ಕೃತಿಕಾ ರವೀಂದ್ರ, ಲೇಖಾ ಚಂದ್ರ ಹಾಗೂ ಅದಿತಿ ರಾವ್ ಮೂರು ಜನ ನಾಯಕಿಯರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಕಿರಣ್‍ಗೋವಿ ಈ ಚಿತ್ರದಲ್ಲಿ ಆಸ್ಪತ್ರೆಯೊಂದರಲ್ಲಿ ನಡೆಯುವ ಘಟನೆಗಳನ್ನು ನಿರೂಪಿಸಿದ್ದಾರೆ. ಈಗಾಗಲೇ ಚಿತ್ರತಂಡ ರಾಜ್ಯಾದ್ಯಂತ ಪ್ರವಾಸ ಮಾಡಿ ಚಿತ್ರದ ಪ್ರಚಾರ ಮಾಡಿಬಂದಿದೆ.

ಈ ಚಿತ್ರದ ಬಗ್ಗೆ ಆ ಭಾಗದ ಜನರಿಗೆ ಮಾಹಿತಿ ನೀಡಿದಾಗ ಎಲ್ಲರಿಂದಲೂ ಪಾಸಿಟಿವ್ ರೆಸ್ಪಾನ್ಸ್ ಬಂದಿರುವುದು ಚಿತ್ರತಂಡಕ್ಕೆ ಮತ್ತಷ್ಟು ಖುಷಿ ನೀಡಿದೆ. ಕಿರಣ್ ಗೋವಿ ಈ ಚಿತ್ರದ ಕುರಿತು ಮಾತನಾಡುತ್ತ ನಾಲ್ಕು ವರ್ಷಗಳ ನಂತರ ಮತ್ತೆ ನಾನು ಚಿತ್ರ ನಿರ್ದೇಶನಕ್ಕಿಳಿದಿದ್ದೇನೆ. ಮತ್ತೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರದೊಂದಿಗೆ ಮರಳಿ ಬಂದಿದ್ದೇನೆ.

ಎಚ್.ಸಿ.ರಘುನಾಥ್ ಅವರು ತುಂಬಾ ಪ್ರೀತಿಯಿಂದ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಮ್ಮ ನಾಯಕನ ಜೀವನದಲ್ಲಿ ಮೂವರು ಸುಂದರ ಯುವತಿಯರು ಬರುತ್ತಾರೆ. ಕೊನೆಗೆ ನಾಯಕನಿಗೆ ಯಾರು ಸಿಗುತ್ತಾರೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇನೆ. ಅಲ್ಲದೆ ಈ ಚಿತ್ರದಲ್ಲಿನ ಮೂರು ಸುಂದರ ಹಾಡುಗಳನ್ನು ಪ್ರೇಮಕವಿ ಕೆ. ಕಲ್ಯಾಣ್ ಅವರೇ ಬರೆದಿದ್ದಾರೆ ಎಂದು ಹೇಳಿದರು.

ನಿರ್ಮಾಪಕ ರಘುನಾಥ ಮಾತನಾಡಿ, ಪರಿಪೂರ್ಣ ಫ್ಯಾಮಿಲಿ ಎಂಟರ್‍ಟೈನ್‍ಮೆಂಟ್ ಚಿತ್ರ ಇದಾಗಿದ್ದು, ಇಡೀ ತಂಡ ಸೇರಿ ತಮ್ಮ ಮನೆಯ ಕಾರ್ಯವಿದು ಎಂಬಂತೆ ಕೆಲಸ ಮಾಡಿದ್ದಾರೆ. ಒಂದು ಪೊ ಸಿಟಿವ್ ವೈಬ್ರೇಷನ್ ಚಿತ್ರಕ್ಕೆ ಸಿಕ್ಕಿದೆ. ಚಿತ್ರ ಜನರಿಗೆ ಖಂಡಿತ ಇಷ್ಟವಾಗುತ್ತೆ ಎಂದು ಹೇಳಿಕೊಂಡರು.

ಚಿತ್ರದ ನಾಯಕ ಪ್ರಶಾಂತ್ ಮಾತನಾಡಿ, ಹಾಡುಗಳು ಹಾಗೂ ಟೀಸರ್ ಈಗಾಗಲೇ ಎಲ್ಲಾ ಕಡೆ ವೈರಲ್ ಆಗಿವೆ. ನಾಯಕ ಡಾಕ್ಟರ್ ಅಲ್ಲ, ಆತ ಆಸ್ಪತ್ರೆಯಲ್ಲಿ ಮತ್ತಿನ್ನೇನು ಆಗಿರುತ್ತಾನೆ ಎನ್ನುವುದು ಚಿತ್ರದ ಕೊನೆಯಲ್ಲಿ ರಿವೀಲ್ ಆಗುತ್ತದೆ. ರಂಗಣ್ಣ ಎಂಬ ಸೂತ್ರಧಾರ ಗೊಂಬೆ ಇಡೀ ಚಿತ್ರದ ಕಥೆಯನ್ನು ಹೇಳುತ್ತ ಹೋಗುತ್ತದೆ ಎಂದು ಹೇಳಿದರು.

ಕೃತಿಕಾ ರವೀಂದ್ರ ಮಾತನಾಡಿ ಈ ಚಿತ್ರದೊಳಗೆ ನಾನೊಬ್ಬ ಸೆಲಬ್ರಟಿ ಪಾತ್ರ ಮಾಡಿದ್ದೇನೆ ಎಂದು ಹೇಳಿದರು. ಲೇಖಾಚಂದ್ರ ಮಾತನಾಡಿ, ಇದೊಂದು ವಿಭಿನ್ನವಾದ ಪಾತ್ರ.

ನನ್ನ ಪಾತ್ರ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ಭರವಸೆ ನನಗಿದೆ. ಚಿತ್ರವನ್ನು ನೋಡಿ ನಮ್ಮನ್ನು ಹರಸಿ ಎಂದು ಕೇಳಿಕೊಂಡರು. ಉಳಿದಂತೆ ಚಿತ್ರ ತಂಡದವರು ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಇಡೀ ತಂಡ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ಯಾರಿಗೆ ಯಾರುಂಟು ಎಂಬುದನ್ನು ಪ್ರೇಕ್ಷಕ ಪ್ರಭುಗಳೇ ಹೇಳಬೇಕಿದೆ.

movi

Facebook Comments