ನಾಳೆ ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ : ಮತ್ತೊಂದು ಗೆಲುವಿನ ತವಕದಲ್ಲಿ ಕೊಹ್ಲಿ ಪಡೆ

ಈ ಸುದ್ದಿಯನ್ನು ಶೇರ್ ಮಾಡಿ

KOhli-01

ಮೊಹಾಲಿ,ನ.25- ನಾಯಕ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡ ಈಗಾಗಲೇ ಸರಣಿಯಲ್ಲಿ 1-0ರಿಂದ ಮುನ್ನಡೆ ಸಾಧಿಸಿದ್ದು, ನಾಳೆ ನಡೆಯಲಿರುವ ಇಂಗ್ಲೆಂಡ್ ವಿರುದ್ಧ 3ನೇ ಟೆಸ್ಟ್ ಪಂದ್ಯಕ್ಕೆ ಅದೇ ಹುರುಪಿನಿಂದ ಅಖಾಡಕ್ಕಿಳಿಯಲಿದೆ. 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಈಗಾಗಲೇ 2 ಪಂದ್ಯಗಳು ನಡೆದಿದ್ದು, ರಾಜ್‍ಕೋಟ್‍ನಲ್ಲಿ ನಡೆದ ಮೊದಲ ಟೆಸ್ಟ್‍ನಲ್ಲಿ ಉಭಯ ತಂಡಗಳ ಸಾಂಘಿಕ ಹೋರಾಟದಿಂದ ಪಂದ್ಯ ಡ್ರಾ ಆಯಿತು. 2ನೇ ಟೆಸ್ಟ್‍ನಲ್ಲಿ ಅತಿಥೇಯರು ಸ್ಪಿನ್ ಅಸ್ತ್ರದಿಂದ ಆಂಗ್ಲರನ್ನು 246 ರನ್‍ಗಳ ಅಂತರದಿಂದ ಸದೆಬಡೆದು 1-0ಯಿಂದ ಮುನ್ನಡೆ ಪಡೆಯಿತು.

ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗದಲ್ಲಿ ಬಲಿಷ್ಠವಾಗಿರುವ ಕೊಹ್ಲಿ ಬಳಗ ಗೆಲುವಿನ ಮುನ್ನುಡಿ ಬರೆಯಲು ಕಾತರವಾಗಿದೆ. ಬ್ಯಾಟಿಂಗ್ ವಿಭಾಗದಲ್ಲಿ ಮುರಳಿ ವಿಜಯ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ , ಅಜಿಂಕ್ಯ ರಹಾನೆ, ರವಿಚಂದ್ರನ್, ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜರಂತಹ ಬಲಿಷ್ಠ ಆಟಗಾರರನ್ನು ಹೊಂದಿದೆ. ಪ್ರಥಮ ಟೆಸ್ಟ್‍ನಲ್ಲಿ ವಿಜಯ್ ಮತ್ತು ಪೂಜಾರಾ ಆಕರ್ಷಕ ಶತಕ ಬಾರಿಸಿ ಉತ್ತಮ ಫಾರ್ಮ್‍ನಲ್ಲಿದ್ದಾರೆ. ನಾಯಕ ಕೊಹ್ಲಿ ಶತಕ ದಾಖಲಿಸಿ ಅದೇ ಲಯ ಮುಂದುವರೆಸಲಿದ್ದಾರೆ.  ಇನ್ನು ಬೌಲಿಂಗ್ ವಿಭಾಗದಲ್ಲಿ ವೇಗದ ಬೌಲರ್‍ಗಳಾದ ಮಹಮ್ಮದ್ ಶಮಿ , ಉಮೇಶ್ ಯಾದವ್ ಮತ್ತು ಭುವನೇಶ್ವರ ಕುಮಾರ್ ಮುಂಚೂಣಿಯಲ್ಲಿದ್ದು, ಸಮರ್ಥರಿದ್ದಾರೆ. ಸ್ಪಿನ್ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರವಿಚಂದ್ರನ್, ಅಶ್ವಿನ್, ರವೀಂದ್ರ ಜಡೇಜ ಮತ್ತು ಹೊಸ ಪ್ರತಿಭೆ ಜಯಂತ್ ಯಾದವ್ ಮಿಂಚಿನ ಪ್ರದರ್ಶನ ನೀಡಿ ತಂಡಕ್ಕೆ ಗೆಲುವು ತಂದು ಕೊಟ್ಟಿದ್ದಾರೆ. ಒಟ್ಟಾರೆ ಎರಡು ವಿಭಾಗಗಳು ಬಲಿಷ್ಠ ಸಮರ್ಥ ಆಟಗಾರರಿದ್ದಾರೆ.

ಫಾರ್ಮ್‍ಗೆ ಮರಳಲು ರಾಹುಲ್ ಹರಸಾಹಸ

ವಿಶಾಖಪಟ್ಟಂನಲ್ಲಿ ನಡೆದ 2ನೇ ಟೆಸ್ಟ್‍ನಲ್ಲಿ ಕನ್ನಡಿಗ ಕೆ.ಎಲ್.ರಾಹುಲ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಮೊದಲ ಇನ್ನಿಂಗ್ಸ್ ಮತ್ತು 2ನೇ ಇನ್ನಿಂಗ್ಸ್ (0), 10 ರನ್‍ಗಳಿಸಿ ನಿರಾಸೆ ಅನುಭವಿಸಿದ್ದಾರೆ. ಹೀಗಾಗಿ ಫಾರ್ಮ್‍ಗೆ ಮರಳಲು ರಾಹುಲ್ ನಾಳೆ ನಡೆಯುವ ಪಂದ್ಯದಲ್ಲಿ ವಿಜಯ್ ಜೊತೆ ಆರಂಭಿಕವಾಗಿ ಕಣಕ್ಕಿಳಿಯಲಿದ್ದು, ಲಯ ಕಂಡುಕೊಳ್ಳುವ ವಿಶ್ವಾಸದಲ್ಲಿದ್ದಾರೆ. ನ್ಯೂಜಿಲೆಂಡ್ ಮತ್ತು ಅಸ್ಟ್ರೇಲಿಯಾ ವಿರುದ್ಧ ನಡೆದ ಟೆಸ್ಟ್‍ನಲ್ಲಿ ರಾಹುಲ್ ಶತಕ ದಾಖಲಿಸಿ ತಂಡಕ್ಕೆ ಗೆಲುವು ತಂದುಕೊಟ್ಟಿದ್ದರು. ಈಗ ಅದೇ ಪ್ರದರ್ಶನ ನೀಡಲು ಉತ್ಸುಕರಾಗಿದ್ದಾರೆ.

ತಿರುಗೇಟು ನೀಡಲು ಆಂಗ್ಲರು ಸಜ್ಜು

ಎರಡು ಟೆಸ್ಟ್ ಪಂದ್ಯಗಳಲ್ಲಿ ಪ್ರವಾಸಿ ತಂಡ ಇಂಗ್ಲೆಂಡ್ ಭಾರತಕ್ಕೆ ತಿರುಗೇಟು ನೀಡಿತ್ತು. 2ನೇ ಟೆಸ್ಟ್‍ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದರಿಂದ ಸೋಲಿಗೆ ಶರಣಾಯಿತು. ಬ್ಯಾಟಿಂಗ್‍ನಲ್ಲಿ ಅಲೆಸ್ಟರ್ ಕುಕ್, 19 ವರ್ಷದ ಯುವ ಆಟಗಾರ ಹಸೀಬ್ ಹಮೀದ್, ಜೋರೂಟ್, ಮಧ್ಯಮ ಕ್ರಮಾಂಕದ ಬೆನ್‍ಸ್ಟ್ರೋಕ್ಸ್ , ಜಾನಿ ಬೆರೆಸ್ಟೋ, ಮೊಯಿನ್ ಅಲಿ ಉತ್ತಮ ಫಾರ್ಮ್‍ನಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅತಿಥೇಯ ಯುವ ಸ್ಪಿನ್ ಬೌಲರ್ ಅದೀಲ್ ರಷೀದ್, ಜಾಫರ್ ಅನ್ಸಾರ್, ವೇಗದ ಬೌಲರ್‍ಗಳಾದ ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡ್ರಸನ್ ಮತ್ತು ಬೆನ್ ಸ್ಟ್ರೋಕ್ ಮುಂಚೂಣಿಯಲ್ಲಿದ್ದಾರೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin