ನಾಳೆ ಇಂಡೋ-ಪಾಕ್ ಹೈವೋಲ್ಟೇಜ್ ಪಂದ್ಯಕ್ಕೆ 2000 ಕೋಟಿ ರೂ. ಬೆಟ್ಟಿಂಗ್..!

ಈ ಸುದ್ದಿಯನ್ನು ಶೇರ್ ಮಾಡಿ

Ind-vs-Pak

ನವದೆಹಲಿ, ಜೂ.17- ನಾಳೆ ಇಂಗ್ಲೆಂಡ್‍ನಲ್ಲಿರುವ ಸಾಂಪ್ರದಾಯಿಕ ಎದುರಾಳಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಐಸಿಸಿ ಚಾಂಪಿಯನ್ ಟ್ರೋಫಿ ಫೈನಲ್ ಪಂದ್ಯಕ್ಕೆ ಬರೋಬ್ಬರಿ 2000 ಕೋಟಿ ರೂ.ಗಳಿಗೂ ಹೆಚ್ಚು ಬೆಟ್ಟಿಂಗ್ ನಡೆದಿದ್ದು, ಇದೊಂದು ದಾಖಲೆಯಾಗಿದೆ. ಭಾರತ-ಪಾಕಿಸ್ತಾನದ ಕದನ ಕೌತುಕ ಪಂದ್ಯಕ್ಕೆ ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳು ಎರಡೂ ತಂಡಗಳ ಮೇಲೆ ಸಾವಿರಾರು ಕೋಟಿ ರೂ. ಬಾಜಿ ಕಟ್ಟುತ್ತಿದ್ದು , ಸದ್ಯ 2000 ಕೋಟಿಗೂ ಹೆಚ್ಚಿನ ಮೊತ್ತದ ಬೆಟ್ಟಿಂಗ್ ಬೆಳಕಿಗೆ ಬಂದಿದೆ.

ಐಸಿಸಿ ಚಾಂಪಿಯನ್ ಟ್ರೋಫಿ ಫೈನಲ್ ಪಂದ್ಯದ ಫೇವರಿಟ್ ಭಾರತ ತಂಡದ ಮೇಲೆ ಹೆಚ್ಚಿನ ಬೆಟ್ಟಿಂಗ್ ನಡೆದಿದೆ ಎನ್ನಲಾಗಿದೆ.   ಭಾರತ ತಂಡದ ಮೇಲೆ ಒಬ್ಬ ವ್ಯಕ್ತಿ ನೂರು ಕೋಟಿ ರೂ. ಪಂದ್ಯ ಕಟ್ಟಿದ್ದಾನೆ ಎಂದುಕೊಳ್ಳೋಣ. ಇದೇ ವೇಳೆ ವಿರಾಟ್ ಕೊಹ್ಲಿ ತಂಡ ಗೆದ್ದಿದ್ದೇಯಾದರೆ ಬೆಟ್ಟಿಂಗ್ ಕಟ್ಟಿದವನು 147 ಕೋಟಿ ರೂ. ವಾಪಸ್ ಪಡೆಯುತ್ತಾನೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin