ನಾಳೆ ಕರ್ನಾಟಕ ಬಂದ್ : ರಾಜ್ಯಾದ್ಯಂತ ಬಂದೋಬಸ್ತ್

ಈ ಸುದ್ದಿಯನ್ನು ಶೇರ್ ಮಾಡಿ

High-Alert

ಬೆಂಗಳೂರು, ಸೆ.8- ನಾಳೆ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಬಿಗಿ ಪೊ ಲೀಸ್ ಬಂದೋ ಬಸ್ತ್ ಮಾಡಲಾಗಿದೆ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊ ಲೀಸ್ ಮಹಾನಿರ್ದೇ ಶಕ ಅಲೋಕ್ ಮೋಹನ್ ತಿಳಿಸಿದ್ದಾರೆ. ಕಳೆದ ಮೂರು ದಿನಗಳಿಂದ ಮಂಡ್ಯದಲ್ಲಿ ಮೊಕ್ಕಾಂ ಹೂಡಿರುವ ಅಲೋಕ್ ಮೋಹನ್ ಅವರು ಈ ಸಂಜೆ ಜೊತೆ ಮಾತನಾಡುತ್ತಾ, ನಾಲ್ಕು ಕಂಪೆನಿ ಆರ್‍ಎಎಫ್‍ನ್ನು ಕರೆಸಿಕೊಳ್ಳಲಾಗಿದೆ. ಈ ಕಂಪೆನಿಗಳನ್ನು ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ನಿಯೋಜಿಸಲಾಗಿದೆ ಎಂದರು.  ಸ್ಥಳೀಯ ಪೊ ಲೀಸರ ಜೊತೆಗೆ ಡಿಎಆರ್ ಪ್ಲಟೂನ್ಸ್ ಹಾಗೂ 180 ಕೆಎಸ್‍ಆರ್‍ಪಿ ಪ್ಲಟೂನ್ಸ್‍ಗಳನ್ನು ಬಂದೋಬಸ್ತ್‍ಗಾಗಿ ನಿಯೋಜಿಸಲಾಗಿದೆ.

ಜೊತೆಗೆ 20 ಸಾವಿರ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಆಯುಕ್ತರು, ವಲಯ ಮಟ್ಟದ ಐಜಿಪಿಗಳು, ಎಸ್ಪಿಗಳು, ಹೆಚ್ಚುವರಿ ಎಸ್ಪಿಗಳು, ಡಿವೈಎಸ್ಪಿಗಳೂ ಸೇರಿದಂತೆ ಹಿರಿಯ ಅಧಿಕಾರಿಗಳು ಗಸ್ತಿನಲ್ಲಿರುತ್ತಾರೆ.ಒಟ್ಟಾರೆ ರಾಜ್ಯಾದ್ಯಂತ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಮಾಡಲಾಗಿದೆ ಎಂದು ಅಲೋಕ್ ಮೋಹನ್ ಅವರು ತಿಳಿಸಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin