ನಾಳೆ ಚೈತನ್ಯ ರಥ ಯಾತ್ರೆ

ಈ ಸುದ್ದಿಯನ್ನು ಶೇರ್ ಮಾಡಿ

4

ಇಳಕಲ್,ಡಿ.7- ಮಹಾಸಾದ್ವಿ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮನವರ ಚೈತನ್ಯ ರಥ ಯಾತ್ರೆಯು ನಾಳೆ ಮದ್ಯಾಹ್ನ 2 ಗಂಟೆಗೆ ಹುನಗುಂದ ಪಟ್ಟಣದಿಂದ ಇಳಕಲ್ ನಗರಕ್ಕೆ ಆಗಮಿಸಲಿದೆ ಎಂದು ಸಮಾಜದ ಹಿರಿಯರು ತಿಳಿಸಿದ್ದಾರೆ.ಹಿರೇಹೊಸಹಳ್ಳಿಯ ರಡ್ಡಿ ಪೀಠದ ಹೇಮಾನಂದ ಮಹಾಸ್ವಾಮಿಗಳ ಸಮ್ಮುಖದಲ್ಲಿ ಶ್ರೀಶೈಲದಿಂದ ಕಳೆದ ಎರಡುವರೆ ತಿಂಗಳಿಂದ ಹೂರಟ ಚೈತನ್ಯ ರಥಯಾತ್ರೆ ರಾಜ್ಯದ 170ಕ್ಕೂ ಅಧಿಕ ನಗರಗಳಲ್ಲಿ ಸಂಚರಿಸಿ ನಗರಕ್ಕೆ ಆಗಮಿಸಲಿದ್ದು ಮಲ್ಲಮ್ಮ 14-15 ನೇ ಶತಮಾನದಲ್ಲಿ ಬದುಕಿ ಬಾಳಿದ ಮಹಾಶಿವಶರಣೆ ಆದ್ಯಾತ್ಮ ಸಾಧನೆ ಮಾಡಿದ ತಮ್ಮ ರಡ್ಡಿ ಕುಲದೇವತೆಯಾಗಿದ್ದಾಳೆ ಎಂದು ಸಮಾಜದ ಹಿರಿಯರು ಕರೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಚೈತನ್ಯ ರಥ ಯಾತ್ರೆಗೆ ಹುನಗುಂದ ತಾಲೂಕಿನ ಹಾಗೂ ನಗರದ ಸಮಾಜ ಬಾಂದವರು ಆಗಮಿಸುವಂತೆ ಕೋರಿ ವೈಭವದಿಂದ ಸ್ವಾಗತಿಸೋಣ.

ಕುಂಬ, ಕಳಸ ಹಾಗೂ ಮಂಗಳಕರ ವಾದ್ಯಗಳೊಂದಿಗೆ ಯಾತ್ರೆಯು ಬಸವೇಶ್ವರ ವೃತ್ತದಿಂದ ಹೊರಟು ಬಸ್ ನಿಲ್ದಾಣದ ಮುಂದೆ ಹಾಯ್ದು, ಕಂಠಿ ವೃತ್ತ, ದ್ವಾರಕಾ ಲಾಡ್ಜ್, ಗಾಂಧಿ ಚೌವಕ, ಗೊರಬಾಳ ನಾಕಾ ರಸ್ತೆ ಮೂಲಕ ಟಿ.ವ್ಹಿ.ಎಸ್. ಶೋರೊಂಮ್ ಪಕ್ಕದ ರಸ್ತೆಯಿಂದ ಪಂಚಲಿಂಗೇಶರ ನಗರದ ಹೇಮರಡ್ಡಿ ಮಲ್ಲಮ್ಮನ ದೇವಸ್ಥಾನಕ್ಕೆ ಬಂದು ಮುಕ್ತಾಯಗೊಳ್ಳುವದು.ಡಿ. 11 ರಂದು ಕೊಡಲಸಂಗಮದಲ್ಲಿ ನೆಡೆಯುವ ರಾಷ್ಟ್ರೀಯ ವಿಚಾರ ಸಂಕಿರಣದ ಜಗೃತಿಗಾಗಿ ಹಾಗೂ ಚೈತನ್ಯ ರಥಯಾತ್ರೆಗೆ ಸಮಾಜ ಬಾಂಧವರು ಇತರೇ ಸಮಾಜದವರು ಪಾಲ್ಗೊಳ್ಳುವಂತೆ ಕೋರಿದ್ದಾರೆ.ಸಮಾಜದ ಹಿರಯರಾದ ರಾಮಣ ಗಿರಿಜ, ಸಿದ್ದನಗೌಡ ಚಿಕ್ಕಮಾಗಿ, ಶರಣಪ್ಪಗೌಡ ಜಡೆಯಪ್ಪಗೌಡ್ರ, ಮುದಿಯಪ್ಪ ಚಳಗೇರಿ, ತಿಮ್ಮನಗೌಡ ಗೌಡರ, ಪಂಪನಗೌಡ ಪಾಟೀಲ, ವಿರುಪಾಕ್ಷಪ್ಪ ಮುರಾಳ ಹಾಗೂ ಸಮಾಜದ ಯುವಕರು ಗೋಷ್ಠಿಯಲ್ಲಿ ಇದ್ದರು.

 

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin