ನಾಳೆ ಯೋಧರ ಜತೆ ದೀಪಾವಳಿ ಆಚರಿಸಲಿರುವ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Modi-in-Border

ನವದೆಹಲಿ.ಅ.29 : ಅತ್ತ ಪಾಕ್ ಉಗ್ರರು ಮತ್ತು ಸೈನಿಕರು ಸೇರಿ ಭಾರತೀಯ ಯೋಧನೊಬ್ಬನ ಶಿರಚ್ಛೇಧನ ಮಾಡಿ ಸಂಭ್ರಮಿಸುತ್ತಿದ್ದರೆ, ಇತ್ತ ನಮ್ಮ ಯೋಧರಿಗೆ ಧೈರ್ಯ ತುಂಬಲು ಪ್ರಧಾನಿ ನರೇಂದ್ರ ಮೋದಿಯವರು ಎಂದಿನಂತೆ ದೀಪಾವಳಿ ಹಬ್ಬವನ್ನು ಉತ್ತರಾಖಂಡದ ಕುಗ್ರಾಮದ ಗಡಿ ಠಾಣೆಯಲ್ಲಿ ಐಟಿಬಿಪಿ ಯೋಧರ ಜತೆ ಭಾನುವಾರ ಆಚರಿಸಲಿದ್ದಾರೆ. ಮೋದಿ ಅವರು ಪ್ರಧಾನಿ ಹುದ್ದೆ ವಹಿಸಿಕೊಂಡ ಬಳಿಕ ಮೊದಲ ದೀಪಾವಳಿಯನ್ನು ವಿಶ್ವದ ಅತಿಎತ್ತರದ ಯುದ್ಧಭೂಮಿ ಸಿಯಾಚಿನ್ನಲ್ಲಿ ಸೈನಿಕರ ಜತೆ ಆಚರಿಸಿದ್ದರು. ಎರಡನೇ ದೀಪಾವಳಿಯನ್ನು ಪಂಜಾಬ್ ನ ಪಾಕಿಸ್ತಾನ ಗಡಿಯಲ್ಲಿ ಆಚರಿಸಿದ್ದರು.

ಚೀನಾ ಗಡಿಗೆ ಹೊಂದಿಕೊಂಡಿರುವ ಭಾರತದ ಕೊನೆಯ ಊರಾದ ಮಾಣಾ ಎಂಬ ಕುಗ್ರಾಮದಲ್ಲಿ ಈ ಬಾರಿ ದೀಪಗಳ ಹಬ್ಬವನ್ನು ಪ್ರಧಾನಿ ಮೋದಿ ನರೇಂದ್ರ ಅವರು ಆಚರಿಸಲಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಗ್ರಾಮವು ಸಮುದ್ರ ಮಟ್ಟದಿಂದ 10 ಸಾವಿರ ಅಡಿ ಎತ್ತರದಲ್ಲಿದೆ.  ಇಲ್ಲಿಗೆ ಸಮೀಪದಲ್ಲಿರುವ ಬದರೀನಾಥಕ್ಕೆ ಮೋದಿ ಅವರು ಭೇಟಿ ನೀಡುವ ಸಾಧ್ಯತೆ ಇದೆ.

ಗಡಿಕಾಯುವ ಸೈನಿಕರಿಗೆ ದೀಪಾವಳಿ ಶುಭಾಶಯ ಕೋರುವಂತೆ #Sandesh2Soldiers ಎಂಬ ಅಭಿಯಾನ ಆರಂಭಿಸಿ  ಪ್ರಧಾನಿ ಅವರು ಜನರಲ್ಲಿ ಮನವಿ ಮಾಡಿದ್ದರು.  ಈವರೆಗೆ 10 ಲಕ್ಷ ಸಂದೇಶಗಳು ಬಂದಿವೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.

► Follow us on –  Facebook / Twitter  / Google+

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin