ನಾಳೆ ‘ರಾಜಕುಮಾರ’ ಚಿತ್ರ ನೋಡುವವರಿಗೆ ಟಿಕೆಟ್ ಬೆಲೆಯಲ್ಲಿ ಶೇ. 50 ರಷ್ಟು ರಿಯಾಯಿರಿ..!

ಈ ಸುದ್ದಿಯನ್ನು ಶೇರ್ ಮಾಡಿ

Rajakumara--01

ಬೆಂಗಳೂರು. ಎ. 23 : ನೀವು ಇನ್ನೂ ಪುನೀತ್ ರಾಜಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರ ನೋಡಲು ಕಾಯುತ್ತಿದ್ದೀರಾ , ಅಥವಾ ಒಮ್ಮೆ ನೋಡಿ ಮತ್ತೊಮ್ಮೆ ನೋಡಬೇಕೆಂದುಕೊಂಡಿದ್ದಾರಾ, ಹಾಗಾದರೆ ಇಲ್ಲಿದೆ ನೋಡಿ ಒಂದು ಅವಕಾಶ.  ಹೌದು ನಾಳೆ ( 24/04/2017) ಡಾ.ರಾಜ್ ಕುಮಾರ್ ಅವರ ಜನ್ಮದಿನದ ಅಂಗವಾಗಿ ಹೊಂಬಾಳೆ ಫಿಲಂಸ್ ವತಿಯಿಂದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ರಾಜಕುಮಾರ’ ಚಿತ್ರವನ್ನು ಕರ್ನಾಟಕ ರಾಜ್ಯದಾದ್ಯಂತ ಯಾವುದೇ ಚಿತ್ರಮಂದಿರಗಳಲ್ಲಿ ವೀಕ್ಷಿಸಲು ಹೋದರೆ ನಿಮಗೆ ಟಿಕೆಟ್ ನ ಬೆಲೆಯಲ್ಲಿ ಶೇ. 50 ರಷ್ಟು ರಿಯಾಯಿತಿ ಸಿಗಲಿದೆ. (ಮಲ್ಟಿಫ್ಲೆಕ್ಸ್ ಗಳನ್ನು ಹೊರತುಪಡಿಸಿ).ಕನ್ನಡಿಗರ ಆರಾಧ್ಯ ದೈವ ಡಾ. ರಾಜ್ ಕುಮಾರ್ ಅವರ ಜನ್ಮದಿನದ ಅಂಗವಾಗಿ ನಾಳೆ ಮಾತ್ರ ಈ ಆಫರ್ ನೀಡಲಾಗಿದ್ದು, ಇದು ಪುನೀತ್ ಅಭಿನಯದ ‘ರಾಜಕುಮಾರ’ ಚಿತ್ರ ನೋಡಬಯಸುವವರಿಗೆ ಮಾತ್ರ ಅನ್ವಯವಾಗಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin